Pro Kabaddi League ಕಬಡ್ಡಿ ಕಾದಾಟಕ್ಕೆ ಅಣಿಯಾದ ಕಂಠೀರವ ಸ್ಟೇಡಿಯಂ..!

By Naveen Kodase  |  First Published Oct 6, 2022, 5:40 PM IST

* 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಅಧಿಕೃತ ಚಾಲನೆ
* ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿಂದು ಟ್ರೋಫಿ ಅನಾವರಣ
* ಶುಕ್ರವಾರದಿಂದ ಶ್ರೀಕಂಠೀರವ ಸ್ಟೇಡಿಯಂನಲ್ಲಿ ಕಬಡ್ಡಿ ಕಲರವ


ಬೆಂಗಳೂರು(ಅ.06): ಬಹುನಿರೀಕ್ಷಿಯ 9ನೇ ಆವೃತ್ತಿಯ ವಿವೋ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 07ರಿಂದ ಪಿಕೆಎಲ್ ಟೂರ್ನಿಗೆ ಚಾಲನೆ ಸಿಗಲಿದೆ. ಇಂದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಪ್ರೊ ಕಬಡ್ಡಿ ಲೀಗ್‌ನ ಸಂಘಟಕರಾದ ಮಷಾಲ್‌ ಸ್ಪೋರ್ಟ್ಸ್‌ನವರು ವಿಶೇಷ ಕಾರ್ಯಕ್ರಮದಲ್ಲಿ ಟ್ರೋಫಿ ಅನಾವರಣ ಮಾಡುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ.

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಅಕ್ಟೋಬರ್ 07ರಿಂದ ಪಿಕೆಎಲ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲಾ 12 ಕಬಡ್ಡಿ ತಂಡಗಳ ನಾಯಕರು ಹಾಜರಿದ್ದರು. ಇದರ ಜತೆಗೆ ಮಷಾಲ್‌ ಸ್ಪೋರ್ಟ್ಸ್‌ನ ಸಿಇಒ, ಸ್ಪೋರ್ಟ್ಸ್‌ ಲೀಗ್‌, ಡಿಸ್ನಿ ಸ್ಟಾರ್‌ ಮತ್ತು ಲೀಗ್‌ ಕಮಿಷನರ್‌ ಅನುಪಮ್‌ ಗೋಸ್ವಾಮಿ ಕೂಡ ಹಾಜರಿದ್ದರು.

Tap to resize

Latest Videos

ಹಾಲಿ ಚಾಂಪಿಯನ್ ‌ದಬಾಂಗ್‌ ಡೆಲ್ಲಿ ಕೆಸಿ ತಂಡವು ಎರಡನೇ ಋತುವಿನ ಚಾಂಪಿಯನ್‌ ಯು ಮುಂಬಾ ವಿರುದ್ಧ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 7ರಂದು ನಡೆಯುವ ಮೊದಲ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಈ ಬಾರಿ ಲೀಗ್ ಹಂತದ ಪಂದ್ಯಗಳು ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ನಲ್ಲಿ ನಡೆಯಲಿವೆ. ಕೋವಿಡ್‌ ಭೀತಿಯಿಂದಾಗಿ ಬರೋಬ್ಬರಿ ಮೂರು ವರ್ಷಗಳ ಬಳಿಕ ಕಬಡ್ಡಿ ವೀಕ್ಷಕರಿಗೆ ಮೈದಾನದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಆಯೋಜಕರು ಅನುವು ಮಾಡಿಕೊಟ್ಟಿದ್ದಾರೆ.

1⃣ day to go for to begin! 🤩

Watch Season 9, tomorrow LIVE 7:30 PM onwards, only on the Star Sports Network and Disney+Hotstar! 🙌 pic.twitter.com/uLGoTjhjqE

— ProKabaddi (@ProKabaddi)

9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಉದ್ಘಾಟನಾ ಪಂದ್ಯವನ್ನಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ದಬಾಂಗ್‌ ಡೆಲ್ಲಿ ಕೆಸಿ ತಂಡದ ನಾಯಕ ನವೀನ್‌ ಕುಮಾರ್‌, “ನಾವು ಹಾಲಿ ಚಾಂಪಿಯನ್ನರು ಆದ್ದರಿಂದ ಈ ಋತುವಿನಲ್ಲಿಯೂ ನಾವು ಉತ್ತಮ ಪ್ರದರ್ಶನ ನೀಡುತ್ತೇವೆಂಬ ಆತ್ಮವಿಶ್ವಾಸವಿದೆ. ಈ ಹಿಂದೆ ನಾನು ತಂಡದಲ್ಲಿ ಒಬ್ಬ ಆಟಗಾರನಾಗಿ ಆಡುತ್ತಿದ್ದೆ, ಈಗ ನಾಯಕನಾಗಿ ತಂಡದ ಪರ ಆಡುತ್ತಿರುವೆ. ಉತ್ತಮ ಪ್ರದರ್ಶನದೊಂದಿಗೆ ತಂಡವನ್ನು ಮುನ್ನಡೆಸಬೇಕಿದೆ, ಜವಾಬ್ದಾರಿಯಿಂದಾಗಿ ಒಬ್ಬ ವ್ಯಕ್ತಿ ಬಲಿಷ್ಠನಾಗುತ್ತಾನೆ, ಆದ್ದರಿಂದ ನನ್ನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಈ ಋತುವಿನಲ್ಲಿ ಉತ್ತಮವಾಗಿ ಆಡುವೆ,” ಎಂದರು.

ಇದೇ ವೇಳೆ ತವರಿನ ತಂಡ (ಬೆಂಗಳೂರು ಬುಲ್ಸ್‌)ವನ್ನು ಇದೇ ಮೊದಲ ಬಾರಿಗೆ ನಾಯಕನಾಗಿ ಮುನ್ನಡೆಸುತ್ತಿರುವ ಮಹೇಂದರ್‌ ಸಿಂಗ್‌, “ವಿಕಾಶ್‌ ಒಬ್ಬ ಉತ್ತಮ ರೈಡರ್‌ ಮತ್ತ ಅವರು ಕಳೆದ ಋತುವಿನ ವಿವೋ ಪ್ರೊ ಕಬಡ್ಡಿ ಲೀಗ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ. ಅವರಿಂದ ನಾವು ಬಹಳಷ್ಟು ನಿರೀಕ್ಷೆಯಲ್ಲಿದ್ದೇವೆ. ಈ ಋತುವಿನಲ್ಲೂ ಅವರು ಉತ್ತಮವಾಗಿ ಆಡಿ ಹೆಚ್ಚಿನ ಪಂದ್ಯಗಳಲ್ಲಿ ಜಯ ಗಳಿಸಲು ನೆರವಾಗುತ್ತಾರೆಂದು ನಾನು ನಂಬಿದ್ದೇನೆ,” ಎಂದರು.

Pro Kabaddi League: ಬೆಂಗಳೂರು ಬುಲ್ಸ್‌ಗೆ ಮಹೇಂದರ್‌ ಸಿಂಗ್‌ ನಾಯಕ

“ಯಾವುದೇ ಕ್ರೀಡೆಯಲ್ಲಿ ಅಭಿಮಾನಿಗಳು ಮತ್ತು ಪ್ರೇಕ್ಷಕರು ಹೃದಯವಿದ್ದಂತೆ ಮತ್ತು ನಾವು ಈ ಋತುವಿನಲ್ಲಿ ನಾವು ಕ್ರೀಡಾಂಗಣದ ಒಳಗಡೆ ಪ್ರೇಕ್ಷಕರಿಗೆ ವಿವಿಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಹೊಸ ಮಾನದಂಡವನ್ನು ನಿರ್ಮಿಸಲಿದ್ದೇವೆ. ಪ್ರೇಕ್ಷಕರ ಮೇಲೆ ಹೆಚ್ಚು ಗಮನವಿರಿಸುವುದು ಲೀಗ್‌ನ ಪ್ರಮುಖ ಉದ್ದೇಶವಾಗಿದೆ. ಪ್ರೇಕ್ಷಕರ ಹೊರತಾಗಿ ಯಾವುದೇ ಲೀಗ್‌ ಯಶಸ್ಸು ಕಾಣುವುದಿಲ್ಲ. ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ ಯಶಸ್ಸು ಕಾಣಲು ನಾವು ಉತ್ತಮ ಗುಣಮಟ್ಟದ ಸ್ಪರ್ಧೆ ಒದಗಿಸಬೇಕು. ಇದು ನಮ್ಮ ಪ್ರಮುಖ ಗುರಿಯಾಗಿದೆ. ನಿರಂತರವಾಗಿ ಉತ್ತಮಗೊಳ್ಳುತ್ತಿರುವ ಲೀಗ್‌ ಮಾದರಿಯು ಕೂಡ ಲೀಗ್‌ನ ಯಶಸ್ಸಿನಲ್ಲಿ ಪ್ರಮುಖ ಅಂಶಗಳಲ್ಲಿ ಒಂದಾಗಿದೆ,” ಎಂದು ಅನುಪಮ್‌ ಗೋಸ್ವಾಮಿ ಹೇಳಿದರು

ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿರುವ ಮೊದಲ ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಕೆಸಿ ಮತ್ತು ಯು ಮುಂಬಾ ತಂಡಗಳು ಸೆಣಸಲಿವೆ. ದಿನದ 2ನೇ ಪಂದ್ಯದಲ್ಲಿ  ದಕ್ಷಿಣದ ಡರ್ಬಿ ಎನಿಸಿರುವ ಬೆಂಗಳೂರು ಬುಲ್ಸ್‌ ಮತ್ತು ತೆಲುಗು ಟೈಟಾನ್ಸ್‌ ನಡುವೆ ಸೆಣಸಾಟ ನಡೆಯಲಿದೆ. ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು ಯು.ಪಿ. ಯೋಧಾಸ್‌ ವಿರುದ್ಧ ಹೋರಾಡಲಿದೆ.

ಕಬಡ್ಡಿ ಅಭಿಮಾನಿಗಳು ಬುಕ್‌ ಮೈಶೋ (BookMyShow) ನಲ್ಲಿ 9ನೇ ಋತುವಿನ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದು. ವಿವೋ ಪ್ರೋ ಕಬಡ್ಡಿ ಲೀಗ್‌ 9ನೇ ಋತುವಿನ ಪಂದ್ಯಗಳು ಸಂಜೆ 7:30ರಿಂದ ಆರಂಭಗೊಳ್ಳಲಿದ್ದು, ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್ಸ್‌ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಕೂಡಾ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

click me!