
ಲಖನೌ(ಅ.06): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭಗೊಳ್ಳುತ್ತಿದೆ. ಲಖನೌದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮಳೆಯಿಂದಾಗಿ ಪಂದ್ಯ ವಿಳಂಬವಾಗಿ ಆರಂಭಗೊಂಡಿದೆ. ಹೀಗಾಗಿ 10 ಓವರ್ ಕಡಿತಗೊಳಿಸಲಾಗಿದೆ. 50 ಓವರ್ ಬದಲು 40 ಓವರ್ ಪಂದ್ಯ ಆಡಿಸಲಾಗುತ್ತಿದೆ. ಟೀಂ ಇಂಡಿಯಾ 6 ಬ್ಯಾಟ್ಸ್‌ಮನ್ ಹಾಗೂ ಐವರು ಬೌಲರ್‌ಗಳ ತಂಡ ಆಯ್ಕೆ ಮಾಡಿದೆ. ರುತುರಾಜ್ ಗಾಯಕ್ವಾಡ್ ಏಕದಿನ ಮಾದರಿಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11
ಶಿಖರ್ ಧವನ್(ನಾಯಕ), ಶುಬಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಾರೂದಲ್ ಠಾಕೂರ್, ಕುಲ್ದೀಪ್ ಯಾದವ್, ರವಿ ಬಿಶ್ನೋಯ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್
ಸೌತ್ ಆಫ್ರಿಕಾ ಪ್ಲೇಯಿಂಗ್ 11
ಜನ್ನೇಮಾನ್ ಮಲನ್, ಕ್ವಿಂಟನ್ ಡಿಕಾಕ್, ತೆಂಬಾ ಬವುಮಾ(ನಾಯಕ), ಆ್ಯಡಿನ್ ಮರ್ಕ್ರಮ್, ಹೆನ್ರಿಚ್ ಕಾಲ್ಸೀನ್, ಡೇವಿಡ್ ಮಿಲ್ಲರ್, ವೈಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಾಗಿಸೋ ರಬಾಡ, ಲುಂಗಿ ಎನ್‌ಗಿಡಿ, ತಬ್ರೈಜ್ ಶಂಸಿ
ಟಾಸ್‌ಗೆ(IND vs SA Toss) ಕೆಲ ಹೊತ್ತಿನ ಬೆನ್ನಲ್ಲೇ ನಿರಂತರವಾಗಿ ಸುರಿದ ಮಳೆಯಿಂದ(Rain) ಪಂದ್ಯ ವಿಳಂಬವಾಯಿತು. ಸತತ ಮಳೆಯಿಂದ ಮೈದಾನ ಒದ್ದೆಯಾಗದಂತೆ ತಡೆಯಲು ಮೈದಾನಕ್ಕೆ ಕವರ್ ಹಾಕಲಾಗಿತ್ತು. ಮಳೆ ನಿಂತ ಬೆನ್ನಲ್ಲೇ ಕ್ರೀಡಾಂಗಣ ಸಿಬ್ಬಂದಿ ಕ್ರೀಡಾಂಗಣ ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾದರು. 30 ನಿಮಿಷಕ್ಕೂ ಹೆಚ್ಚು ಕಾಲ ಕ್ರೀಡಾಂಗಣದಲ್ಲಿನ ನೀರನ್ನು ಹೊರಹಾಕಿ ಆಟಕ್ಕೆ ಕ್ರೀಡಾಂಗಣ ಸಜ್ಜುಗೊಳಿಸಿದರು. ಹೀಗಾಗಿ ಆರಂಭಿಕ ಹಂತದಲ್ಲಿ 5 ಓವರ್ ಕಡಿತಗೊಳಿಸಿ 45 ಓವರ್ ಪಂದ್ಯ ಆಡಿಸಲು ನಿರ್ಧರಿಸಲಾಯಿತು. ಇನ್ನೇನು ಟಾಸ್ ನಡೆಯಬೇಕು ಅನ್ನುವಷ್ಟರಲ್ಲೇ ಮತ್ತೆ ಮಳೆ ವಕ್ಕರಿಸಿತು. ಇದರಿಂದ ಪಂದ್ಯ ಮತ್ತೆ ವಿಳಂಬವಾಯಿತು. ಹೀಗಾಗಿ 10 ಓವರ್ ಪಂದ್ಯ ಕಡಿತಗೊಳಿಸಲಾಯಿತು.
ಟೀಂ ಇಂಡಿಯಾ(Team India) ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಹೀಗಾಗಿ ಶಿಖರ್ ಧವನ್(Shikhar Dhawan) ಟೀಂ ಇಂಡಿಯಾ(Team India) ಮುನ್ನಡೆಸುತ್ತಿದ್ದಾರೆ. ಟಿ20 ತಂಡಕ್ಕೆ ಹೋಲಿಸಿದರೆ ಭಾರತದ ಏಕದಿನ(ODI Match) ತಂಡ ಬಹುತೇಕ ಬದಲಾಗಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ. ವಿಕೆಟ್ ಕೀಪರ್ ಜವಾಬ್ದಾರಿ ಸಂಜು ಸ್ಯಾಮ್ಸನ್ ಮೇಲಿದೆ. ಯುವ ಆಟಗಾರರನ್ನೊಳಗೊಂಡ ಟೀಂ ಇಂಡಿಯಾಗೆ ಹಲವು ಸವಾಲು ಎದುರಾಗಿದೆ.
ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿ
ಭಾರತ ಹಾಗೂ ಸೌತ ಆಫ್ರಿಕಾ ನಡುವಿನ ಟಿ20 ಸರಣಿ ರನ್ ಮಳೆ ಹರಿದಿತ್ತು. ಆರಂಭಿಕ ಎರಡು ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ಅಂತಿಮ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವು ಕಂಡಿತ್ತು. ಇದರೊಂದಿಗೆ 2-1 ಅಂತರದಲ್ಲಿ ಸರಣಿ ಗೆದ್ದಿತ್ತು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.