
ಆ್ಯಶ್ಗ್‌ಬಾಟ್(ಆ.30): ಇಲ್ಲಿನ ಕೊಪೆಟ್‌ಡಗ್ ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಕಪ್ ಅಂತರ ವಲಯ ಸೆಮಿಫೈನಲ್‌ನಲ್ಲಿ ಆಲ್ಟ್ಯನ್ ಅಸ್ಯಾರ್ ಎಫ್‌ಕೆ ತಂಡದ ವಿರುದ್ಧ ಸೋಲುಂಡ ಬಿಎಫ್‌ಸಿ ಏಷ್ಯನ್ ಸ್ಪರ್ಧೆಯಿಂದ ಹೊರಬಿದ್ದಿದೆ.
ಬುಧವಾರ ನಡೆದ ಪಂದ್ಯದಲ್ಲಿ ಆಲ್ಟ್ಯನ್ ಅಸ್ಯಾರ್ 2-0 ಗೋಲಿನಿಂದ ಬಿಎಫ್‌ಸಿ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಯಾವುದೇ ಗೋಲುಗಳಿಸಿರಲಿಲ್ಲ. ದ್ವಿತೀಯಾರ್ಧದ ಆಟದ 8 ನಿಮಿಷಗಳ ಅಂತರದಲ್ಲಿ ಆಲ್ಟ್ಯನ್ ತಂಡ 2 ಗೋಲು ದಾಖಲಿಸಿತು.
ಆಲ್ಟಿಮೈರಟ್ (50ನೇ ನಿ.) ಮತ್ತು ವಯಾತ್ (58ನೇ ನಿ.) ಗೋಲುಗಳಿಸಿದರು. ಬಿಎಫ್‌ಸಿ ಪರ ಯಾರೊಬ್ಬ ಆಟಗಾರರು ಗೋಲುಗಳಿಸಲಿಲ್ಲ. ಈ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 5-2 ಅಂತರರಿಂದ ಜಯಗಳಿಸಬೇಕಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.