ಏಷ್ಯಾ ಮಟ್ಟದಲ್ಲಿ ಬೆಂಗಳೂರಿಗರ ಮಿಂಚು; ಮಝಿಯಾ ಮಣಿಸಿದ ಬಿಎಫ್'ಸಿಗೆ ಸತತ 2ನೇ ಜಯ

Published : Apr 05, 2017, 08:54 AM ISTUpdated : Apr 11, 2018, 12:50 PM IST
ಏಷ್ಯಾ ಮಟ್ಟದಲ್ಲಿ ಬೆಂಗಳೂರಿಗರ ಮಿಂಚು; ಮಝಿಯಾ ಮಣಿಸಿದ ಬಿಎಫ್'ಸಿಗೆ ಸತತ 2ನೇ ಜಯ

ಸಾರಾಂಶ

ಎಎಫ್‌ಸಿ ಕಪ್‌ ‘ಇ' ಗುಂಪಿನ ಪಂದ್ಯ| ಜಾನ್‌ ಜಾನ್ಸನ್‌ ಏಕಾಂಗಿ ಗೋಲು ತಂದ ಗೆಲುವು. ಇ ಗುಂಪಿನಲ್ಲಿ ಬೆಂಗಳೂರಿಗರು ಸತತ 2 ಗೆಲುವಿನೊಂದಿಗೆ 6 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮೋಹನ್ ಬಗಾನ್ ತಂಡ 3 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ.

ಮಾಲ್ಡೀವ್ಸ್(ಏ. 05): ಹೆಚ್ಚುವರಿ (93 ನೇ ನಿಮಿಷ) ಸಮಯದಲ್ಲಿ ಜಾನ್‌ ಜಾನ್ಸನ್‌ ಭಾರಿಸಿದ ಗೋಲು ಎಎಫ್‌'ಸಿ ಕಪ್‌ ಪಂದ್ಯಾವಳಿಯ ಮಝಿಯಾ ತಂಡದ ವಿರುದ್ಧ ‘ಇ' ಗುಂಪಿನ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) 1-0 ಅಂತರದ ಗೆಲುವು ತಂದುಕೊಟ್ಟಿತು. 

ಈ ಗೆಲುವಿನ ಮೂಲಕ 3 ಅಂಕ ಸಂಪಾದಿಸಿದ ಬಿಎಫ್‌ಸಿ ತಂಡ ‘ಇ' ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಮೋಹನ್‌ ಬಗಾನ್‌ ವಿರುದ್ಧ ನಡೆ­ದಿದ್ದ ಮೊದಲ ಪಂದ್ಯದಲ್ಲೂ ಬೆಂಗಳೂರು ತಂಡ ಜಯ ಸಾಧಿಸಿತ್ತು. ಇದರೊಂದಿಗೆ ಬಿಎಫ್'ಸಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಿಕ್ಕಂತಾಗಿದೆ.

ಮಲೆ ನಗರದಲ್ಲಿ ನಡೆದ ಇ ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ 4-3-3 ಸಂಯೋಜನೆ­ಯೊಂದಿಗೆ ಕಣಕ್ಕಿಳಿದ ಬಿಎಫ್‌ಸಿ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದರೆ, ಮಾಲ್ಡೀವ್ಸ್ ದೇಶದ ಮಝಿಯಾ ತಂಡದ ರಕ್ಷಣಾಕೋಟೆ­ಯನ್ನು ದಾಟಿ ಗೋಲು ಪೆಟ್ಟಿಗೆಗೆ ಚೆಂಡನ್ನು ಸೇರಿಸಲು ಸಾಧ್ಯವಾಗ­ಲಿಲ್ಲ. ಬೆಂಗಳೂರು ತಂಡದ ರಕ್ಷಣಾ ವಲಯದ ಆಟಗಾರರನ್ನು ವಂಚಿಸಲು ಎದುರಾಳಿ ತಂಡ ಸಹ ವಿಫಲವಾಯಿತು. 

ಇನ್ನು, ಪಂದ್ಯದ ಎರಡೂ ಅವಧಿಗಳಲ್ಲಿ ಗೋಲು ದಾಖಲಾಗದ ಕಾರಣ, ನಿಗದಿತ 90 ನಿಮಿಷದ ಮುಕ್ತಾಯದ ನಂತರ ರೆಫ್ರಿ 3 ನಿಮಿಷಗಳ ಹೆಚ್ಚುವರಿ ಸಮಯ ಘೋಷಿಸಿದರು. ಪಂದ್ಯ ಇನ್ನೇನು ಗೋಲು ರಹಿತವಾಗಿ ಮುಗಿಯಲಿದೆ ಎನ್ನುವಷ್ಟರಲ್ಲಿ ಸಿಕ್ಕ ಫ್ರೀ ಕಿಕ್‌ ಅವಕಾಶದಲ್ಲಿ ಅಮರೀಂದರ್‌ ಸಿಂಗ್‌ ಒದ್ದ ಚೆಂಡನ್ನು ಯಶಸ್ವಿಯಾಗಿ ನಿಯಂತ್ರಿಸಿದ ಬದಲಿ ಆಟಗಾರ ಮರ್ಜನ್‌ ಜುಕೊಂವಿಚ್‌, ಜಾನ್‌ ಜಾನ್ಸನ್‌'ಗೆ ಪಾಸ್‌ ಮಾಡಿದರು. ಜಾನ್ಸನ್‌ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುತ್ತಿದ್ದಂತೆ ಬಿಎಫ್‌'ಸಿ ಪಾಳಯ ಗೆಲುವಿನ ಸಂಭ್ರಮವನ್ನಾಚರಿಸಿಕೊಂಡಿತು.

ಮೋಹನ್ ಬಗಾನ್'ಗೂ ಜಯ:
ಇದೇ ಗುಂಪಿನಲ್ಲಿ ನಿನ್ನೆ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತದ ಮೋಹನ್ ಬಗಾನ್ ಬಾಂಗ್ಲಾದೇಶದ ಢಾಕಾ ಅಬಾಹಾನಿ ತಂಡವನ್ನು 3-1 ಗೋಲುಗಳಿಂದ ಸದೆಬಡಿಯಿತು. ಮೊದಲ ಪಂದ್ಯದಲ್ಲಿ ಬಿಎಫ್'ಸಿಗೆ ಶರಣಾಗಿದ್ದ ಮೋಹನ್ ಬಗಾನ್ ತನ್ನ ತವರಿನಲ್ಲಿ ನಡೆದ ಎರಡನೇ ಸುತ್ತಿನಲ್ಲಿ ಪಾಯಿಂಟ್ ಖಾತೆ ತೆರೆಯಿತು.

ಇ ಗುಂಪಿನಲ್ಲಿ ಬೆಂಗಳೂರಿಗರು ಸತತ 2 ಗೆಲುವಿನೊಂದಿಗೆ 6 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮೋಹನ್ ಬಗಾನ್ ತಂಡ 3 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ.

ಮೂರನೇ ಸುತ್ತಿನ ಪಂದ್ಯವು ಏಪ್ರಿಲ್ 18 ಮತ್ತು 19ರಂದು ನಡೆಯಲಿದೆ. 18ರಂದು ಬೆಂಗಳೂರಿಗರು ಶ್ರೀಕಂಠೀರವ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ಅಬಾಹಾನಿ ತಂಡವನ್ನು ಎದುರುಗೊಳ್ಳಲಿದೆ. ಮರುದಿನದಂದು ಕೋಲ್ಕತಾದಲ್ಲಿ ಮೋಹನ್ ಬಗಾನ್ ಮತ್ತು ಮಝಿಯಾ ತಂಡಗಳು ಸೆಣಸಾಡಲಿವೆ.

epaper.kannadaprabha.in

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ICC Men’s T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ
ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ