ಬೆಂಗಳೂರು ಬುಲ್ಸ್'ಗೆ ರೋಹಿತ್ ಕುಮಾರ್ ಕ್ಯಾಪ್ಟನ್

Published : Jul 16, 2017, 10:18 PM ISTUpdated : Apr 11, 2018, 12:54 PM IST
ಬೆಂಗಳೂರು ಬುಲ್ಸ್'ಗೆ ರೋಹಿತ್ ಕುಮಾರ್ ಕ್ಯಾಪ್ಟನ್

ಸಾರಾಂಶ

ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಪಟು ಹಾಗೂ ಅರ್ಜುನ ಪ್ರಶಸ್ತಿ ವಿಜೇತ ರಣ್'ಧೀರ್ ಸಿಂಗ್ ಮಾರ್ಗದರ್ಶನದಲ್ಲಿ ಈ ಯುವ ತಂಡದ ಆಟಗಾರರು ಈಗಾಗಲೇ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಬೆಂಗಳೂರು(ಜು.16): ಸ್ಟಾರ್ ರೈಡರ್ ರೋಹಿತ್ ಕುಮಾರ್, 5ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌'ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಡಿಫೆಂಡರ್ ರವೀಂದರ್ ಪೆಹಲ್ ಅವರಿಗೆ ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ ಎಂದು ವರದಿಯಾಗಿದೆ.

ಇದೇ 28 ರಿಂದ ಆರಂಭವಾಗಲಿರುವ ಕಬಡ್ಡಿ ಲೀಗ್‌'ನಲ್ಲಿ ಬೆಂಗಳೂರು ತಂಡ ಪ್ರಭಾವಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಪಟು ಹಾಗೂ ಅರ್ಜುನ ಪ್ರಶಸ್ತಿ ವಿಜೇತ ರಣ್'ಧೀರ್ ಸಿಂಗ್ ಮಾರ್ಗದರ್ಶನದಲ್ಲಿ ಈ ಯುವ ತಂಡದ ಆಟಗಾರರು ಈಗಾಗಲೇ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಕರ್ನಾಟಕದ ಹರೀಶ್ ನಾಯಕ್, ಗುರ್ವೀಂದರ್ ಸಿಂಗ್, ಅಂಕಿತ್ ಸಂಗ್ವಾನ್, ಪ್ರೀತಮ್ ಚಿಲ್ಲಾರ್ ಮತ್ತು ಆಶೀಶ್ ಕುಮಾರ್ ಉತ್ತಮ ಪ್ರದರ್ಶನದ ಭರವಸೆ ಮೂಡಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಪ್ಲೇಆಫ್‌ಗೆ ಈ 4 ತಂಡಗಳು ಫಿಕ್ಸ್! ಸಿಎಸ್‌ಕೆ, ಕೆಕೆಆರ್, ಸನ್‌ರೈಸರ್ಸ್‌ ಕಥೆ ಏನು?
IPL ಮತ್ತು PSL ಎರಡೂ ಟೂರ್ನಿಯಲ್ಲೂ ಕ್ಯಾಪ್ಟನ್ ಆದ ಟಾಪ್ 8 ನಾಯಕರಿವರು!