ನ್ಯೂಜಿಲೆಂಡ್ ಪ್ರಶಸ್ತಿ ತಿರಸ್ಕರಿಸಿ ವಿಲಿಯಮ್ಸನ್‌ಗೆ ನೀಡಲು ಸೂಚಿಸಿದ ಸ್ಟೋಕ್ಸ್!

By Web DeskFirst Published Jul 24, 2019, 6:53 PM IST
Highlights

ಇಂಗ್ಲೆಂಡ್ ವಿಶ್ವಕಪ್ ಗೆಲುವಿನಲ್ಲಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಪಾತ್ರ ಪ್ರಮುಖವಾಗಿದೆ. ಅದ್ಭುತ ಹೋರಾಟದ ಮೂಲಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಶಾಕ್ ನೀಡಿದ ಸ್ಟೋಕ್ಸ್ ಇತಿಹಾಸ ಬರೆದರು. ಸ್ಟೋಕ್ಸ್ ಹೋರಾಟಕ್ಕೆ ಇದೀಗ ವರ್ಷದ ನ್ಯೂಜಿಲೆಂಡಿಗೆ ಪ್ರಶಸ್ತಿ ನೀಡಲು ನ್ಯೂಜಿಲೆಂಡ್ ಮುಂದಾಗಿದೆ. ಆದರೆ ಈ ಪ್ರಶಸ್ತಿಯನ್ನು ಸ್ಟೋಕ್ಸ್ ತಿರಸ್ಕರಿ, ನಾಯಕ ಕೇನ್ ವಿಲಿಯಮ್ಸನ್‌ಗೆ ನೀಡಲು ಸೂಚಿಸಿದ್ದಾರೆ.

ಲಂಡನ್(ಜು.24): ಇಂಗ್ಲೆಂಡ್ ತಂಡದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಆಲ್ರೌಂಡರ್ ಬೆನ್ ಸ್ಟೋಕ್ಸ್‌ಗೆ  ಬ್ರಿಟನ್ ಸರ್ಕಾರ 'ಸರ್' ಗೌರವ ನೀಡಿದೆ. ಮೂಲತಃ ನ್ಯೂಜಿಲೆಂಡ್ ದೇಶದ ಬೆನ್ ಸ್ಟೋಕ್ಸ್‌ ಇಂಗ್ಲೆಂಡ್ ತಂಡದ ಪರ ಆಡುತ್ತಿದ್ದಾರೆ. ಇದೀಗ ನ್ಯೂಜಿಲೆಂಡ್‌ನ  ಪ್ರತಿಷ್ಟಿತ ವರ್ಷದ ನ್ಯೂಜಿಲೆಂಡಿಗ ಪ್ರಶಸ್ತಿ ನೀಡಲು ಸ್ಟೋಕ್ಸ್ ಹೆಸರು ನಾಮ ನಿರ್ದೇಶನ ಮಾಡಿದೆ. ಆದರೆ ಈ ಪ್ರಸ್ತಾವನೆಯನ್ನು ಸ್ವತಃ ಬೆನ್ ಸ್ಟೋಕ್ಸ್ ನಿರಾಕರಿಸಿದ್ದಾರೆ. 

ಇದನ್ನೂ ಓದಿ: ಓವರ್‌ ಥ್ರೋನ 4 ರನ್‌ ಬೇಡ ಎಂದಿದ್ದ ಸ್ಟೋಕ್ಸ್‌!

28 ವರ್ಷದ  ಸ್ಟೋಕ್ಸ್ ವಿಶ್ವಕಪ್ ಟೂರ್ನಿಯಲ್ಲಿ 465 ರನ್ ಹಾಗೂ 7 ವಿಕೆಟ್ ಕಬಳಿಸಿದ್ದರು. ಫೈನಲ್ ಪಂದ್ಯದಲ್ಲಿ ಸೋಲಿನತ್ತ ವಾಲಿದ್ದ ಇಂಗ್ಲೆಂಡ್ ತಂಡವನ್ನು ಗೆಲುವಿನ ಗೆರೆ ದಾಡಿಸಿದ್ದರು. ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದ ಸ್ಟೋಕ್ಸ್‌ಗೆ ನ್ಯೂಜಿಲೆಂಡ್ ವರ್ಷದ ನ್ಯೂಜಿಲೆಂಡಿಗ ಪ್ರಶಸ್ತಿ ನೀಡಲು ನಾಮನಿರ್ದೇಶನ ಮಾಡಿದೆ. ಇದನ್ನು ಅರಿತ ತಕ್ಷಣ ಸ್ಟೋಕ್ಸ್, ತಾನು ಈ ಪ್ರಶಸ್ತಿಗೆ ಅರ್ಹನಲ್ಲ, ನ್ಯೂಜಿಲೆಂಡ್ ತಂಡಕ್ಕಾಗಿ ಅದ್ಭುತ ಕೊಡುಗೆ ನೀಡಿದ ನಾಯಕ ಕೇನ್ ವಿಲಿಯಮ್ಸನ್ ಈ ಪ್ರಶಸ್ತಿಗೆ ಅರ್ಹ ಎಂದು ಪತ್ರ ಬರೆದಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Ben Stokes (@stokesy) on Jul 23, 2019 at 1:27am PDT

ಇದನ್ನೂ ಓದಿ: ಬೆನ್ ಸ್ಟೋಕ್ಸ್‌ಗೆ ಬ್ರಿಟನ್ ಸರ್ಕಾರದಿಂದ ‘ಸರ್‌’ ಗೌರವ?

ವರ್ಷದ ನ್ಯೂಜಿಲೆಂಡಿಗ ಪ್ರಶಸ್ತಿಗೆ ನನ್ನ ಹೆಸರನ್ನು ನಾಮ ನಿರ್ದೇಶನಗೊಳಿಸಿರುವುದು ಹೆಮ್ಮೆ ಎನಿಸುತ್ತಿದೆ. ಆದರೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ನಾನು ಅರ್ಹನಲ್ಲ. ಈ ಪ್ರಶಸ್ತಿ ನ್ಯೂಜಿಲೆಂಡ್‌ಗೆ ಹೆಚ್ಚಿನ ಕೊಡುಗೆ ನೀಡಿದವರಿಗೆ ನೀಡುವುದು ಸೂಕ್ತ. ನಾನು ನ್ಯೂಜಿಲೆಂಡಿಗ ಎಂಬ ಹೆಮ್ಮೆ ಇದೆ. ಆದರೆ ನಾನು ಇಂಗ್ಲೆಂಡ್ ಪ್ರಶಸ್ತಿ ಗೆಲ್ಲಲು ನೆರವಾಗಿದ್ದೇನೆ. ಹೀಗಾಗಿ ಈ ಪ್ರಶಸ್ತಿಯನ್ನು ನ್ಯೂಜಿಲೆಂಡ್ ತಂಡಕ್ಕೆ ಕೊಡುಗೆ ನೀಡಿದ, ಕ್ರಿಕೆಟ್ ರಾಯಭಾರಿ ಎಂದೇ ಗುರುತಿಸಿಕೊಂಡಿರುವ ನಾಯಕ ಕೇನ್ ವಿಲಿಯಮ್ಸನ್‌ಗೆ ನೀಡಿ. ವಿಲಿಯಮ್ಸ್‌ಗೆ ಈ ಪ್ರಶಸ್ತಿ ನೀಡಲು ಎಲ್ಲರು ಬೆಂಬಲಿಸಬೇಕಾಗಿ ನಾನು ವಿನಂತಿಸುತ್ತೇನೆ. ಕೇನ್ ವಿಲಿಯಮ್ಸನ್ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಅರ್ಹ ವ್ಯಕ್ತಿ. ನನ್ನ ಬೆಂಬಲ ಕೇನ್ ವಿಲಿಯಮ್ಸನ್‌ಗೆ ಎಂದು ಸ್ಟೋಕ್ಸ್ ಹೇಳಿದ್ದಾರೆ.

click me!