ಹಾಕಿ ವಿಶ್ವಕಪ್: ಶೂಟೌಟ್ ಮೂಲಕ ಚಾಂಪಿಯನ್ ಪಟ್ಟ ಗೆದ್ದ ಬೆಲ್ಜಿಯಂ!

By Web Desk  |  First Published Dec 16, 2018, 9:04 PM IST

ನೆದರ್ಲೆಂಡ್ಸ್ ಹಾಗೂ ಬೆಲ್ಜಿಯಂ ನಡುವಿನ ಹಾಕಿ ವಿಶ್ವಕಪ್ ಫೈನಲ್ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ರೋಚಕ ಹೋರಾಟ ಗೋಲ್ಲಿಲದೇ ಅಂತ್ಯಗೊಂಡಿತ್ತು. ಬಳಿಕ ಪೆನಾಲ್ಟಿ ಶೂಟೌಟ್ ಮೂಲಕ ಗೆಲುವು ನಿರ್ಧರಿಸಲಾಯಿತು.


ಭುವನೇಶ್ವರ(ಡಿ.16): ನೆದರ್ಲೆಂಡ್ಸ್ ವಿರುದ್ಧ ನಡೆದ ಹಾಕಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ಶೂಟೌಟ್ ಮೂಲಕ ಗೆಲುವು ಸಾಧಿಸಿದೆ. ರೋಚಕ ಹೋರಾಟದಲ್ಲಿ ಬೆಲ್ಜಿಯಂ 3-2 ಗೋಲುಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.  ಈ ಮೂಲಕ ಬೆಲ್ಜಿಯಂ ಚೊಚ್ಚಲ ಬಾರಿಗೆ ಹಾಕಿ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದೆ. 

 

Congratulations to who are the newly crowned World Champions after a sensational undefeated run at the Odisha Hockey Men's World Cup Bhubaneswar 2018. pic.twitter.com/wgvZEQMRzv

— Hockey India (@TheHockeyIndia)

Tap to resize

Latest Videos

 

ಗೆಲುವಿಗಾಗಿ ಬೆಲ್ಜಿಯಂ ಹಾಗೂ ನೆದರ್ಲೆಂಡ್ಸ್ ಕಠಿಣ ಹೋರಾಟ ನಡೆಸಿತ್ತು. ಆದರೆ ಉಭಯ ತಂಡಗಳ ಫಾರ್ವರ್ಡ್ ಜೊತೆಗೆ ಡಿಫೆನ್ಸ್ ಕೂಡ ಅಷ್ಟೇ ಚನ್ನಾಗಿತ್ತು. ಹೀಗಾಗಿ ಗೋಲು ಬಿಟ್ಟುಕೊಡಲಿಲ್ಲ. 4 ಕ್ವಾರ್ಟರ್ ಗೇಮ್‌ನಲ್ಲಿ ಒಂದೂ ಗೋಲು ದಾಖಲಾಗಲಿಲ್ಲ. 

ಇದನ್ನೂ ಓದಿ: ಸೈಮಂಡ್ಸ್ ಈಗ ಕಾದಂಬರಿಗಾರ -ಮಂಕಿಗೇಟ್ ಪ್ರಕರಣಕ್ಕೆ ಭಜ್ಜಿ ತಿರುಗೇಟು!

ಇದೇ ಮೊದಲ ಬಾರಿಗೆ ಹಾಕಿ ವಿಶ್ವಕಪ್ ಫೈನಲ್ ಪಂದ್ಯದ 4 ಕ್ವಾರ್ಟರ್‌ ಗೇಮ್‌ಗಳಲ್ಲಿ ಒಂದೂ ಗೋಲು ದಾಖಲಾಗದೇ ಇತಿಹಾಸ ಬರೆಯಿತು. ಗೆಲುವು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದರಲ್ಲಿ ಬೆಲ್ಜಿಯಂ 3 ಗೋಲು ದಾಖಲಿಸಿದರೆ, ನೆದರ್ಲೆಂಡ್ಸ್ 2 ಗೋಲಿಗೆ ತೃಪ್ತಿಪಟ್ಟುಕೊಂಡಿತು.

ಇದನ್ನೂ ಓದಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೈ ಹಿಡಿದ ಪರುಪಳ್ಳಿ ಕಶ್ಯಪ್!

ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಅದ್ಧೂರಿಯಾಗಿ ಆರಂಭಗೊಂಡ ಹಾಕಿ ವಿಶ್ವಕಪ್ ಟೂರ್ನಿಗೆ ತೆರೆಬಿದ್ದಿದೆ. ಫೈನಲ್ ಪಂದ್ಯಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಆಗಮಿಸಿದ್ದರು. ಭಾರತ ಸೆಮಿಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ನೆದರ್ಲೆಂಡ್ ಮಣಿಸಿದ ಬೆಲ್ಜಿಯಂ ವಿಶ್ವ ಚಾಂಪಿಯನ್ ಆಗಿದೆ.
 

click me!