ಶ್ರೀಶಾಂತ್ ನಿಷೇಧ ತೆರವು ಇಲ್ಲ: ಬಿಸಿಸಿಐ

By Suvarna Web DeskFirst Published Apr 19, 2017, 12:11 PM IST
Highlights

ರಾಜಸ್ತಾನ ರಾಯಲ್ಸ್ ತಂಡದ ಆಟಗಾರರರಾಗಿದ್ದ ಶ್ರೀಶಾಂತ್  2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ನಿಷೇಧಕ್ಕೆ ಗುರಿಯಾಗಿದ್ದರು.

ಕೊಚ್ಚಿ(ಏ.19): ದಿಲ್ಲಿ ಉಚ್ಚ ನ್ಯಾಯಾಲಯ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದ್ದರೂ ಶ್ರೀಶಾಂತ್ ಮೇಲೆ ಹೇರಿರುವ ಜೀವಾವಧಿ ನಿಷೇಧವನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕೇರಳ ಹೈಕೋರ್ಟ್'ಗೆ ಸ್ಪಷ್ಟಪಡಿಸಿದೆ. ಈ ಮೂಲಕ ಶ್ರೀಶಾಂತ್ ಕ್ರಿಕೆಟ್ ಕನಸು ಬಹುತೇಕ ಕಮರಿದಂತಾಗಿದೆ.

ನಿಷೇಧ ತೆರವುಗೊಳಿಸುವಂತೆ ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದ ಬಿಸಿಸಿಐ, "ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದ್ದರೂ ಕ್ರಿಕೆಟ್ ಮಂಡಳಿಯ ಆಂತರಿಕ ಸಮಿತಿ ಅದಕ್ಕೆ ಒಪ್ಪುವುದಿಲ್ಲ. ಮಂಡಳಿಯ ನಿಯಮಗಳನ್ನು ಉಲ್ಲಂಘಿಸುವವರನ್ನು ಸಹಿಸಿಕೊಳ್ಳಲು ಸಹಿಸಿಕೊಳ್ಳಲಾಗದು" ಎಂದು ತಿಳಿಸಿದೆ.

ರಾಜಸ್ತಾನ ರಾಯಲ್ಸ್ ತಂಡದ ಆಟಗಾರರರಾಗಿದ್ದ ಶ್ರೀಶಾಂತ್  2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ನಿಷೇಧಕ್ಕೆ ಗುರಿಯಾಗಿದ್ದರು. ಸಾಕ್ಷ್ಯಾಧಾರದ ಕೊರತೆಯಿಂದಾಗಿ 2015ರಲ್ಲಿ ದಿಲ್ಲಿ ನ್ಯಾಯಾಲಯ ಕೇರಳದ ಕ್ರಿಕೆಟಿಗನನ್ನು ದೋಷಮುಕ್ತಗೊಳಿಸಿತ್ತು.

click me!