ಇಂದಿನ ಪಂದ್ಯದಲ್ಲಿ ಆರ್'ಸಿಬಿ ತಂಡ ಹೀಗಿರಬಹುದು; ಇಂದು ಪ್ರಯೋಗ ಮಾಡುತ್ತಾರ ಕೊಹ್ಲಿ..?

First Published Apr 25, 2018, 6:25 PM IST
Highlights

ಮಳೆ ಭೀತಿಯ ನಡುವೆಯೂ ಆರ್'ಸಿಬಿ-ಸಿಎಸ್'ಕೆ ತಂಡಗಳು ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿವೆ. ಈಗಾಗಲೇ ಆಡಿದ 5 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲಿ ಮತ್ತೊಂದು ಜಯದ ಕನವರಿಕೆಯಲ್ಲಿದೆ. ಇಂದಿನ ಪಂದ್ಯದಲ್ಲಿ ಆರ್'ಸಿಬಿ ತಂಡದ ಆಡುವ 11ರ ಬಳಗದಲ್ಲಿ ಈ ಆಟಗಾರರು ಸ್ಥಾನ ಪಡೆದುಕೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು(ಏ.25): ಮಳೆ ಭೀತಿಯ ನಡುವೆಯೂ ಆರ್'ಸಿಬಿ-ಸಿಎಸ್'ಕೆ ತಂಡಗಳು ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿವೆ. ಈಗಾಗಲೇ ಆಡಿದ 5 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲಿ ಮತ್ತೊಂದು ಜಯದ ಕನವರಿಕೆಯಲ್ಲಿದೆ.

ಇಂದಿನ ಪಂದ್ಯದಲ್ಲಿ ಆರ್'ಸಿಬಿ ತಂಡದ ಆಡುವ 11ರ ಬಳಗದಲ್ಲಿ ಈ ಆಟಗಾರರು ಸ್ಥಾನ ಪಡೆದುಕೊಳ್ಳುವ ಸಾಧ್ಯತೆಯಿದೆ.

ಮನನ್ ವೋಹ್ರಾ-ಪಾರ್ಥಿವ್ ಪಟೇಲ್: ಇಂದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ. ಕ್ವಿಂಟಾನ್ ಡಿಕಾಕ್ ಬದಲಿಗೆ ಇಂದು ಪಾರ್ಥಿವ್ ಪಟೇಲ್ ಸ್ಥಾನ ಪಡೆಯಬಹುದು. ಕೀಪಿಂಗ್ ಹಾಗೂ ಬ್ಯಾಟಿಂಗ್'ನಲ್ಲಿ ತಂಡಕ್ಕೆ ಪಾರ್ಥಿವ್ ಉಪಯುಕ್ತ ಕಾಣಿಕೆ ನೀಡಬಲ್ಲರು. ಇನ್ನು ಮನನ್ ವೋಹ್ರಾ ಮೊದಲ ಪಂದ್ಯದಲ್ಲಿ ವಿಫಲವಾಗಿದ್ದರೂ ಇಂದು ಮತ್ತೊಂದು ಅವಕಾಶ ಸಿಗಬಹುದು. ಜೊತೆಗೆ ಈ ಜೋಡಿ ಆರಂಭಿರಾಗಿ ಕಣಕ್ಕಿಳಿದರೆ ಅಚ್ಚರಿಯಿಲ್ಲ.

ಕೊಹ್ಲಿ-ಎಬಿಡಿ-ಮನ್ದೀಪ್ ಸಿಂಗ್: ಆರ್'ಸಿಬಿ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದ್ದು, ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಮನ್ದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಆಲ್ರೌಂಡರ್ ವಿಭಾಗ: ಆಲ್ರೌಂಡರ್ ವಿಭಾಗದಲ್ಲೂ ಆರ್'ಸಿಬಿ ಇಂದು ಕೆಲ ಬದಲಾವಣೆ ಮಾಡಬಹುದಾಗಿದೆ. ಕ್ರಿಸ್ ವೋಕ್ಸ್ ಜೊತೆಗೆ ಇಂದು ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿ ಕೂಡಾ ಸ್ಥಾನ ಪಡೆಯಬಹುದು. ಇದುವರೆಗೂ ಮೋಯಿನ್ ಅಲಿಗೆ ಆರ್'ಸಿಬಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಉತ್ತಮ ಫಾರ್ಮ್'ನಲ್ಲಿರುವ ಅಲಿಗೆ ಅವಕಾಶ ಸಿಗಬಹುದು. ಜೊತೆಗೆ ವಾಷಿಂಗ್ಟನ್ ಸುಂದರ್'ಗೆ ಕೂಡಾ ಸ್ಥಾನ ಸಿಗಬಹುದು.

ಬೌಲಿಂಗ್: ಬೌಲಿಂಗ್'ನಲ್ಲಿ ಉಮೇಶ್ ಯಾದವ್ ಜೊತೆಗೆ ಥೀಮ್ ಸೌಥಿ ಹೊಸ ಚೆಂಡು ಹಂಚಿಕೊಂಡು ದಾಳಿ ನಡೆಸುವ ಸಾಧ್ಯತೆಯಿದೆ. ಸೌಥಿ ತಂಡದಲ್ಲಿ ಸ್ಥಾನ ಪಡೆದರೆ ಡೆತ್ ಓವರ್'ಗಳಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಬಹುದಾಗಿದೆ. ಯಾಕೆಂದರೆ ಈ ಹಿಂದಿನ ಪಂದ್ಯಗಳಲ್ಲಿ ಆರ್'ಸಿಬಿ ಡೆತ್ ಓವರ್'ಗಳಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟಿದೆ. ಇನ್ನು ಮಣಿಕಟ್ಟಿನ ಸ್ಪಿನ್ನರ್ ಯುಜುವೇಂದ್ರ ಚಾಹಲ್ ನಿರೀಕ್ಷೆಯಂತೆಯೇ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

click me!