ನ್ಯಾ.ಲೋಧಾ ಸಮಿತಿ ಶಿಫಾರಸ್ಸು ಅನುಷ್ಟಾನದಲ್ಲಿ ನಾನು ಹುನ್ನಾರ ನಡೆಸಿಲ್ಲ ಎಂದು ಠಾಕೂರ್ ಸ್ಪಷ್ಟನೆ

By Web DeskFirst Published Oct 17, 2016, 10:06 AM IST
Highlights

ನ್ಯಾ. ಆರ್.ಎಂ ಲೋಧಾ ಸಮಿತಿ ಶಿಫಾರಸ್ಸುಗಳನ್ನು ಅನಿಷ್ಠಾನಗೊಳಿಸುವಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪವನ್ನು ಠಾಕೂರ್ ನಿರಾಕರಿಸಿದ್ದಾರೆ. ಈ ಸಂಬಂಧ ಸುಪ್ರೀಂ ಕೊರ್ಟ್ ಗೆ ಅಫಿಡವಿಟ್ಟು ಸಲ್ಲಿಸಿದ್ದಾರೆ.

ನವದೆಹಲಿ (ಅ.17): ನ್ಯಾ. ಆರ್.ಎಂ ಲೋಧಾ ಸಮಿತಿ ಶಿಫಾರಸ್ಸುಗಳನ್ನು ಅನಿಷ್ಠಾನಗೊಳಿಸುವಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪವನ್ನು ಠಾಕೂರ್ ನಿರಾಕರಿಸಿದ್ದಾರೆ. ಈ ಸಂಬಂಧ ಸುಪ್ರೀಂ ಕೊರ್ಟ್ ಗೆ ಅಫಿಡವಿಟ್ಟು ಸಲ್ಲಿಸಿದ್ದಾರೆ.

ತಮ್ಮ ಅಫಿಡವಿಟ್ಟಿನಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಜೊತೆ ಜೊತೆ ಮಾತುಕತೆಯನ್ನು ತಮ್ಮ ಅಫಡವಿಟ್ಟಿನಲ್ಲಿ ಪ್ರಸ್ತಾಪಿಸುತ್ತಾ, ಶಶಾಂಕ್ ಮನೋಹರ್ ತಮ್ಮ ನಿಲುವನ್ನು ತೆಗೆದುಕೊಂಡಾಗ ಲೋಧಾ ಸಮಿತಿಯ ಶಿಫಾರಸ್ಸು ವಿಚಾರ ನ್ಯಾಯಾಲಯದ ಮುಂದಿತ್ತು. ಇನ್ನೂ ನಿರ್ಧಾರವಾಗಿರಲಿಲ್ಲ. ಸಿಎಜಿ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ನೇಮಕ ಮಾಡುವುದಕ್ಕೆ ಮನೋಹರ್ ವಿರೋಧ ವ್ಯಕ್ತಪಡಿಸಿದ್ದರು  ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

Latest Videos

click me!