ಟೀಂ ಇಂಡಿಯಾಗೆ ಶೀಘ್ರದಲ್ಲೇ ಹೊಸ ಕೋಚ್ ಆಯ್ಕೆ!

By Web DeskFirst Published Sep 30, 2018, 3:01 PM IST
Highlights

ಏಷ್ಯಾಕಪ್ ಟೂರ್ನಿ ಗೆಲುವು ಟೀಂ ಇಂಡಿಯಾದ ಉತ್ಸಾಹ ಇಮ್ಮಡಿಗೊಳಿಸಿದೆ. ಇದರ ಬೆನ್ನಲ್ಲೇ ತಂಡಕ್ಕೆ ಹೊಸ ಕೋಚ್ ನೇಮಕ ಮಾಡಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ. ಹಾಗಾದರೆ ನೂತನ ಕೋಚ್ ಯಾರು? ಇಲ್ಲಿದೆ.

ಮುಂಬೈ(ಸೆ.30): ಏಷ್ಯಾಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಇದೀಗ ವೆಸ್ಟ್ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ತಯಾರಿ ಆರಂಭಿಸಿದೆ. ವಿಂಡೀಸ್ ಸರಣಿ ಬಳಿಕ ಭಾರತ ತಂಡ, ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ತಂಡಕ್ಕೆ ಸೂಕ್ತ ಮಾರ್ಗದರ್ಶಕರನ್ನ ಆಯ್ಕೆ ಮಾಡಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.

ಏಷ್ಯಾಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ, ಸುಪ್ರೀಂ ಕೋರ್ಟ್ ನೇಮಕ ಸಿಒಎ ಭೇಟಿ ಮಾಡಿದ್ದಾರೆ. ಇಷ್ಟೇ ಅಲ್ಲ, ತಂಡಕ್ಕೆ ನೂತನ ಸ್ಪಿನ್ ಕೋಚ್ ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಸಂಜಯ್ ಬಂಗಾರ್ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿದ್ದರೆ, ಭರತ್ ಅರುಣ್ ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಆರ್ ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿದ್ದಾರೆ. ಹೀಗಾಗಿ ಸ್ಪಿನ್ನರ್‌ಗಳಿಗೆ ಮಾರ್ಗದರ್ಶನ ನೀಡಲು ಕೋಚ್ ನೇಮಕ ಮಾಡುವಂತೆ ಸೂಚಿಸಲಾಗಿದೆ.
 

click me!