ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ MSK ಪ್ರಸಾದ್‌ಗೆ ಕೊಕ್ ನೀಡಿ ಹೊಸ ಮುಖ್ಯಸ್ಥರನ್ನು ನೇಮಿಸಲು ಬಿಸಿಸಿಐ ಸದ್ದಿಲ್ಲದೆ ಕಸರತ್ತು ಆರಂಭಿಸಿದೆ. ಅಷ್ಟಕ್ಕೂ ಬಿಸಿಸಿಐ ದಿಢೀರ್ ನಿರ್ಧಾರಕ್ಕೆ ಕಾರಣಗಳೇನು? ಇಲ್ಲಿದೆ ವಿವರ.
ಮುಂಬೈ(ಸೆ.26): ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅವಧಿ ಮುಗಿಯುವ ಮುನ್ನವೇ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಪ್ರಸಾದ್ ಆಯ್ಕೆಗೆ ಹಲವು ಬಾರಿ ಟೀಕೆ ವ್ಯಕ್ತವಾಗಿದೆ. ಇದೀಗ ಪ್ರಸಾದ್‌ಗೆ ಕೊಕ್ ನೀಡಿ, ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಎಲ್ ಶಿವರಾಮಕೃಷ್ಣನ್ ನೂತನ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಯುಡು 3D ಟ್ವೀಟ್‌ಗೆ ಮೊದಲ ಪ್ರತಿಕ್ರಿಯೆ ನೀಡಿದ ಆಯ್ಕೆ ಸಮಿತಿ!
undefined
ವಿಶ್ವಕಪ್ ಟೂರ್ನಿಯಿಂದ ಕ್ರಿಕೆಟಿಗ ಅಂಬಾಟಿ ರಾಯುಡು ನಿರ್ಲಕ್ಷಿಸಿದ ಕಾರಣಕ್ಕೆ ವಿದಾಯ ಹೇಳಿದ ಘಟನೆ ಭಾರಿ ಟೀಕೆಗೆ ಗುರಿಯಾಗಿತ್ತು. ಪ್ರಸಾದ್ ಬೇಕಾಬಿಟ್ಟಿ ಆಯ್ಕೆಯಿಂದ ಹಲವು ಕ್ರಿಕೆಟಿಗರು ಕರಿಯರ್ ಕೂಡ ಅಂತ್ಯಗೊಂಡಿದೆ. ಹೀಗಾಗಿ ಬಿಸಿಸಿಐ ಎಂ.ಎಸ್.ಕೆಗೆ ಕೊಕ್ ನೀಡಿ, ಶಿವರಾಮಕೃಷ್ಣನ್‌ಗೆ ಬುಲಾವ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಸಿಸಿಐ ಪ್ರಶ್ನೆಗೆ ತಬ್ಬಿಬ್ಬಾದ ಟೀಂ ಇಂಡಿಯಾ ಆಯ್ಕೆ ಸಮಿತಿ!
2016ರಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಆಯ್ಕೆಯಾದ ಪ್ರಸಾದ್ ಅವಧಿ 2020ರ ವರೆಗಿದೆ. ಆದರೆ ಅವಧಿಗೂ ಮುನ್ನ ಪ್ರಸಾದ್ ಸ್ಥಾನ ತೆರೆವು ಮಾಡಬೇಕಾದ ಸಾಧ್ಯತೆ ಇದೆ. ಆದರೆ ಆಯ್ಕೆ ಸಮಿತಿ ಸದಸ್ಯರಾದ ಸರನ್‌ದೀಪ್ ಸಿಂಗ್, ದೇವಾಂಗ್ ಗಾಂಧಿ ಹಾಗೂ ಜತಿನ್ ಪ್ರಾಂಜಪೆ ಮುಂದುವರಿಯಲಿದ್ದಾರೆ.