ಬಿಸಿಸಿಐ ಚುನಾವಣೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಆಡಳಿತ ಸಮಿತಿ!

By Web DeskFirst Published Nov 26, 2018, 3:59 PM IST
Highlights

ಬಿಸಿಸಿಐ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆದರೆ ಅದೇ ದಿನಾಂಕದಂದು ಚುನಾವಣೆ ನಡೆಯುತ್ತಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಚುನಾವಣೆ ದಿನಾಂಕ ನಿಗದಿಗಾಗಿ ಇದೀಗ ಬಿಸಿಸಿಐ ಆಡಳಿತ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಮುಂಬೈ(ನ.26): ಬಿಸಿಸಿಐ ಚುನಾವಣೆ ದಿನಾಂಕ ನಿಗದಿ ಕುರಿತು ಆಡಳಿ ಸಮಿತಿ (CoA)ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನವೆಂಬರ್ 27 ರಂದು ಬಿಸಿಸಿಐ ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ಇನ್ನೂ ಕೂಡ ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧ ಶಿಫಾರಸನ್ನ ಒಪ್ಪಿಂಕೊಂಡಿಲ್ಲ.  ಹೀಗಾಗಿ ಗೊಂದಲಕ್ಕೆ ಕಾರಣವಾಗಿದೆ.

15 ರಾಜ್ಯ ಕ್ರಿಕೆಟ್ ಸಂಸ್ಥೆಗಳು ಈಗಾಗಲೇ ಲೋಧ ಸಮಿತಿ ಶಿಫಾರಸು ಜಾರಿಗೆ ತಂದಿದೆ. ಹೀಗಾಗಿ ಸದ್ಯ ಲೋಧ ಸಮಿತಿ ಶಿಫಾರಸು ಅಳವಡಿಸಿಕೊಂಡಿರುವ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಮಾತ್ರ ಮತದಾನ ಮಾಡೋ ಅವಕಾಶವಿದೆ. ಹೀಗಾಗಿ ಇನ್ನುಳಿದ ಸಂಸ್ಥೆಗಳ ಕುರಿತು ಹಾಗೂ ಚುನಾವಣೆ ಕುರಿತು ಇದೀಗ  CoA ಸುಪ್ರೀಂ ಕೋರ್ಟ್ ಕದ ತಟ್ಟಿದೆ.

ಬಿಸಿಸಿಐ ನೇಮಕ ಮಾಡಿರುವ CoA ಕಮಿಟಿಯಲ್ಲೇ ಒಮ್ಮತವಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಇಷ್ಟೇ ಅಲ್ಲ ಸಿಇಒ ರಾಹುಲ್ ಜೊಹ್ರಿ ಮೇಲಿನ ಮೀಟೂ ಆರೋಪ ಬಿಸಿಸಿಐಗೆ ಮತ್ತಷ್ಟು ಹಿನ್ನಡೆ ತಂದಿದೆ. ಹೀಗಾಗಿ ಮತ್ತೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ.

click me!