ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪ್ರಕಟ

By Web DeskFirst Published Nov 26, 2018, 2:33 PM IST
Highlights

ಭಾರತದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ 20 ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಆಸ್ಟ್ರೇಲಿಯಾದ ಆ್ಯಡಂ ಜಂಪಾ 17 ಸ್ಥಾನಗಳ ಏರಿಕೆ ಕಂಡು ಇದೇ ಮೊದಲ ಬಾರಿಗೆ ವೃತ್ತಿ ಜೀವನದಲ್ಲಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ದುಬೈ[ನ.26]: ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡ್ ವಿಭಾಗದಲ್ಲಿ ಕ್ರಮವಾಗಿ ಬಾಬರ್ ಅಜಂ, ರಶೀದ್ ಖಾನ್ ಹಾಗೂ ಗ್ಲೇನ್ ಮ್ಯಾಕ್ಸ್’ವೆಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಭಾರತದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ 20 ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಆಸ್ಟ್ರೇಲಿಯಾದ ಆ್ಯಡಂ ಜಂಪಾ 17 ಸ್ಥಾನಗಳ ಏರಿಕೆ ಕಂಡು ಇದೇ ಮೊದಲ ಬಾರಿಗೆ ವೃತ್ತಿ ಜೀವನದಲ್ಲಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಟಾಪ್ 5 ಪಟ್ಟಿಯಲ್ಲಿ ಸ್ಪಿನ್ನರ್’ಗಳೇ ಸ್ಥಾನ ಪಡೆದಿದ್ದಾರೆ.

BREAKING: New entrants into the top five of ICC T20I Bowlers Rankings – Kuldeep Yadav and Adam Zampa!

➡️ https://t.co/JOSspBYxQS pic.twitter.com/ylH4Sq4ykQ

— ICC (@ICC)

ಇನ್ನು ಬ್ಯಾಟ್ಸ್’ಮನ್’ಗಳ ವಿಭಾಗದಲ್ಲಿ ಶಿಖರ್ ಧವನ್ 5 ಸ್ಥಾನಗಳ ಏರಿಕೆ ಕಂಡು ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ 11ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಕಾಲಿನ್ ಮನ್ರೋ, ಆ್ಯರೋನ್ ಫಿಂಚ್, ಫಖರ್ ಜಮಾನ್ ಹಾಗೂ ಗ್ಲೇನ್ ಮ್ಯಾಕ್ಸ್’ವೆಲ್ ಕ್ರಮವಾಗಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಆಲ್ರೌಂಡರ್’ಗಳ ವಿಭಾಗದಲ್ಲಿ ಗ್ಲೇನ್ ಮ್ಯಾಕ್ಸ್’ವೆಲ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದು, ಟಾಪ್ 5 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಬ್ಯಾಟ್ಸ್’ಮನ್’ಗಳ ಟಾಪ್ 10 ಪಟ್ಟಿ
1. ಬಾಬರ್ ಅಜಂ(PAK)
2. ಕಾಲಿನ್ ಮನ್ರೊ(NZ)
3. ಆ್ಯರೋನ್ ಫಿಂಚ್(AUS)
4. ಫಖರ್ ಜಮಾನ್(PAK)
5. ಗ್ಲೇನ್ ಮ್ಯಾಕ್ಸ್’ವೆಲ್(AUS)
6. ಕೆ.ಎಲ್ ರಾಹುಲ್(IND)
7. ಮಾರ್ಟಿನ್ ಗಪ್ಟಿಲ್(NZ)
8. ಅಲೆಕ್ಸ್ ಹೇಲ್ಸ್(ENG)
9. ರೋಹಿತ್ ಶರ್ಮಾ(IND)
10. ಜೇಸನ್ ರಾಯ್(ENG)

ಬೌಲರ್’ಗಳ ಟಾಪ್ 10 ಪಟ್ಟಿ
1. ರಶೀದ್ ಖಾನ್(AFG)
2. ಶಾದಾಬ್ ಖಾನ್(PAK)
3. ಕುಲ್ದೀಪ್ ಯಾದವ್(IND)
4. ಆದಿಲ್ ರಶೀದ್(ENG) 
5. ಆ್ಯಡಂ ಜಂಪಾ(AUS)
6. ಇಶ್ ಸೋಧಿ(NZ)
7. ಫಾಹೀಮ್ ಅಶ್ರಫ್(PAK)
8. ಇಮಾದ್ ವಾಸೀಂ(PAK)
9. ಇಮ್ರಾನ್ ತಾಹಿರ್(SA)
10. ಶಕೀಬ್ ಅಲ್ ಹಸನ್(BAN)

ಆಲ್ರೌಂಡರ್’ಗಳ ಟಾಪ್ 5 ಪಟ್ಟಿ

1. ಗ್ಲೇನ್ ಮ್ಯಾಕ್ಸ್’ವೆಲ್(AUS)
2. ಮೊಹಮ್ಮದ್ ನಬಿ(AFG)
3. ಶಕೀಬ್ ಅಲ್ ಹಸನ್(BAN)
4. ಜೆ.ಪಿ ಡುಮಿನಿ(SA)
5. ಮೊಹಮದುಲ್ಲ(BAN)
 

click me!