ನಿಯಮ ಸಡಿಸಿಲಿದ ಬಿಸಿಸಿಐ- ಕ್ರಿಕೆಟಿಗರ ಜೊತೆಗೆ ಪತ್ನಿಯರಿಗೂ ಅವಕಾಶ !

By Web DeskFirst Published Oct 17, 2018, 4:36 PM IST
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿ ಬಳಿಕ, ಬಿಸಿಸಿಐ ಇದೀಗ ವಿದೇಶಿ ಪ್ರವಾಸದಲ್ಲಿ ಕ್ರಿಕೆಟಿಗರ ಪತ್ನಿಯರಿಗೂ ಅವಕಾಶ ನೀಡಿದೆ. ಅಷ್ಟಕ್ಕೂ ಈ ಹಿಂದಿನ ನಿಯಮಕ್ಕೂ ನೂತನ ನಿಮಯಕ್ಕೂ ಇರೋ ವ್ಯತ್ಯಾಸವೇನು? ಇಲ್ಲಿದೆ.
 

ಮುಂಬೈ(ಅ.17): ಟೀಂ ಇಂಡಿಯಾ ಕ್ರಿಕೆಟಿಗರ ವಿದೇಶಿ ಪ್ರವಾಸದ ವೇಳೆ ಪತ್ನಿಯರಿಗೆ ಅವಕಾಶ ನಿರಾಕರಿಸಿದ ಬಿಸಿಸಿಐ ಇದೀಗ ನಿಯಮ ಸಡಿಲಿಸಿದೆ. ನಾಯಕ ವಿರಾಟ್ ಕೊಹ್ಲಿ ಮನವಿ ಬಳಿಕ ಇದೀಗ ಬಿಸಿಸಿಐ ಕೆಲ ಷರತ್ತುಗಳೊಂದಿಗೆ ಕ್ರಿಕೆಟಿಗರ ಜೊತೆಗೆ ಪತ್ನಿಯರಿಗೂ ತಂಗಲು ಅವಕಾಶ ನೀಡಿದೆ.

ನೂತನ ನಿಮಯ ಪ್ರಕಾರ ಟೀಂ ಇಂಡಿಯಾ ಕ್ರಿಕೆಟಿಗರ ವಿದೇಶಿ ಪ್ರಯಾಣದ ಆರಂಭಿಕ 10 ದಿನಗಳ ಬಳಿಕ ಪತ್ನಿಯರಿಗೆ ಕ್ರಿಕೆಟಿಗರ ಜೊತೆಗೆ ಇರಲು ಅವಕಾಶ ನೀಡಿದೆ. ಇದಕ್ಕೂ ಮೊದಲು ಒಟ್ಟು 2 ವಾರಗಳ ಕಾಲ ಮಾತ್ರ ಅವಕಾಶ ನೀಡಲಾಗಿತ್ತು.

ನಾಯಕ ವಿರಾಟ್ ಕೊಹ್ಲಿಗೆ ಮನವಿ ಸ್ಪಂದಿಸಿದ ಬಿಸಿಸಿಐ, ತನ್ನ ನಿಯಮವನ್ನ ಸಡಿಲಗೊಳಿಸಿದೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ವಿರುದ್ದ ಟೀಕೆಗಳು ಕೇಳಿಬಂದಿತ್ತು. ಹೀಗಾಗಿ ಬಿಸಿಸಿಐ ಪತ್ನಿಯರಿಗೆ ನಿರ್ಬಂಧ ವಿಧಿಸಿತ್ತು.

click me!