ಕ್ರಿಕೆಟಿಗ ದೀಪಕ್ ಚಹಾರ್ ಮನೆಗೆ ಕನ್ನ-6 ಮಂದಿ ಅರೆಸ್ಟ್!

Published : Oct 17, 2018, 04:08 PM IST
ಕ್ರಿಕೆಟಿಗ ದೀಪಕ್ ಚಹಾರ್ ಮನೆಗೆ ಕನ್ನ-6 ಮಂದಿ ಅರೆಸ್ಟ್!

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹಾರ್ ಮನಗೆ ಮೋಸ್ಟ್ ವಾಂಟೆಡ್  ಕಳ್ಳರು ನುಗ್ಗಿದ ಘಟನೆ ನಡೆದಿದೆ. ದೀಪಕ್ ಚಹಾರ್ ತಾಯಿ ಮಾತ್ರ ಮನೆಯಲ್ಲಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಲು ಮುಂದಾಗಿದ್ದಾರೆ. ಆದರೆ ಮುಂದೇನಾಯ್ತು? ಇಲ್ಲಿದೆ.  

ಉತ್ತರ ಪ್ರದೇಶ(ಅ.17): ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್ ಮನೆಗೆ ನುಗ್ಗಿದ 6 ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ದೀಪಕ್ ಚಹಾರ್ ತಾಯಿ ಮಾತ್ರ ಮನೆಯಲ್ಲಿರುವ 6 ಮಂದಿ ಕಳ್ಳರು ಮನಗೆ ಕನ್ನ ಹಾಕಿದ್ದಾರೆ.

ಮೊದಲೇ ಪ್ಲಾನ್ ಮಾಡಿದ ಕಳ್ಳರು ಕ್ರಿಕೆಟಿಗನ ಮನಗೆ ನುಗ್ಗೋ ಮೊದಲು ಯಾರಿಗೂ ತಿಳಿಯದಂತೆ ಸಿಸಿಟಿವಿ ಕೇಬಲ್ ಕಟ್ ಮಾಡಿದ್ದಾರೆ. ಅಷ್ಟರಲ್ಲೇ ಮನೆಯಲ್ಲಿದ್ದ ದೀಪಕ್ ಚಹಾರ್ ತಾಯಿಗೆ ಅನುಮಾನ ಬಂದಿದೆ. ಹೀಗಾಗಿ  ತಕ್ಷಣವೇ ಅಲರಾಮ್ ಬೆಲ್ ಒತ್ತಿದ್ದಾರೆ.

ಅಲರಾಂ ಶಬ್ದದಿಂದ ಎಚ್ಚೆತ್ತ ಕಳ್ಳರು ಅಲ್ಲಿಂದ ಪಲಾಯನ ಮಾಡಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ಪೊಲೀಸರು ಕಳ್ಳರನ್ನ ಹಿಡಿದಿದ್ದಾರೆ. ಈ 6 ಮಂದಿ ಕಳ್ಳರ ಗ್ಯಾಂಗ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿತ್ತು. ಇಷ್ಟೇ ಇವರನ್ನ ಹಿಡಿಯಲು ಪೊಲೀಸರು ಹರಸಾಹಸ ಪಟ್ಟಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಬುತ ಪ್ರದರ್ಶನ ನೀಡಿದ್ದ ದೀಪಕ್ ಚಹಾರ್, ಎಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಭಾರತದ  ಪರ 1 ಏಕದಿನ ಹಾಗೂ 1 ಟಿ20 ಪಂದ್ಯ ಆಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು
ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!