ಶನಿವಾರ 2 ಗಂಟೆಗೂ ಹೆಚ್ಚು ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ 31ನೇ ಶ್ರೇಯಾಂಕಿತ ಕ್ರೇಜಿಕೋವಾ ಅವರು 7ನೇ ಶ್ರೇಯಾಂಕಿತ ಪೌಲಿನಿ ವಿರುದ್ಧ 6-2, 2-6, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಈ ಮೂಲಕ ಚೊಚ್ಚಲ ಬಾರಿ ವಿಂಬಲ್ಡನ್ ಗೆದ್ದು ಸಂಭ್ರಮಿಸಿದರು.
ಲಂಡನ್: 2024ರ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಕಿರೀಟವನ್ನು ಚೆಕ್ ಗಣರಾಜ್ಯದ ತಾರೆ ಬಾರ್ಬೋರಾ ಕ್ರೇಜಿಕೋವಾ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆಲ್ಲುವ ಇಟಲಿಯ ಜ್ಯಾಸ್ಮೀನ್ ಪೌಲಿನಿಯ ಕನಸು ಮತ್ತೆ ನುಚ್ಚುನೂರಾಗಿದೆ.
ಶನಿವಾರ 2 ಗಂಟೆಗೂ ಹೆಚ್ಚು ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ 31ನೇ ಶ್ರೇಯಾಂಕಿತ ಕ್ರೇಜಿಕೋವಾ ಅವರು 7ನೇ ಶ್ರೇಯಾಂಕಿತ ಪೌಲಿನಿ ವಿರುದ್ಧ 6-2, 2-6, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ದಾಖಲಿಸಿದ್ದ ಕ್ರೇಜಿಕೋವಾಗೆ 2ನೇ ಸೆಟ್‌ನಲ್ಲಿ ಪೌಲಿನಿಯಿಂದ ತೀವ್ರ ಪ್ರತಿರೋಧ ಎದುರಾಯಿತು.
Breathtaking. Brilliant. Barbora.
Barbora Krejcikova is the 2024 Ladies’ Singles Champion 🏆 pic.twitter.com/Xz0jjezO89
undefined
ಆದರೆ 3ನೇ ಸೆಟ್‌ನಲ್ಲಿ ತಮ್ಮ ಪ್ರಬಲ ಹೊಡೆತಗಳ ಮೂಲಕ ವಿಶ್ವ ನಂ.7 ಪೌಲಿನಿಯನ್ನು ಕಟ್ಟಿಹಾಕಿದ ಕ್ರೇಜಿಕೋವಾ ವಿಂಬಲ್ಡನ್ ಕಿರೀಟಕ್ಕೆ ಮುತ್ತಿಟ್ಟರು. ಕೊನೆ ಸೆಟ್‌ನಲ್ಲಿ ಕ್ರೇಜಿಕೋವಾ ಕೆಲ ತಪ್ಪುಗಳನ್ನು ಎಸಗಿದರೂ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಂಡರು. ಈ ಮೂಲಕ ಚೊಚ್ಚಲ ಬಾರಿ ವಿಂಬಲ್ಡನ್ ಗೆದ್ದು ಸಂಭ್ರಮಿಸಿದರು.
ಮಗನ ಮದುವೆ ಬೆನ್ನಲ್ಲೇ ಭಾರತೀಯರೆಲ್ಲರಿಗೂ ಬಂಪರ್ ಗಿಫ್ಟ್ ಕೊಟ್ಟ ಮುಕೇಶ್ ಅಂಬಾನಿ..!
ಕ್ವಾರ್ಟರ್ ಫೈನಲ್‌ನಲ್ಲಿ 13ನೇ ಶ್ರೇಯಾಂಕಿತ, ಲಾಟ್ವಿಯಾದ ಒಸ್ಟಾಪೆಂಕೊ, ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಎಲೆನಾ ರಬೈಕೆನಾರನ್ನು ಸೋಲಿಸಿದ್ದ ಕ್ರೇಜಿಕೋವಾ ಫೈನಲ್‌ನಲ್ಲೂ ತಮ್ಮ ಅನುಭವ ಬಳಸಿ ಗೆಲುವನ್ನು ಒಲಿಸಿಕೊಂಡರು.
ಸತತ 2ನೇ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲೂ ಆಘಾತ!
28 ವರ್ಷದ ಜ್ಯಾಸ್ಮೀನ್ ಸತತ 2ನೇ ಬಾರಿ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೇರಿದ್ದರು. 2 ಬಾರಿಯೂ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇತ್ತೀಚೆಗೆ ಫ್ರೆಂಚ್ ಓಪನ್ ಫೈನಲ್‌ಗೇರಿದ್ದ ಜ್ಯಾಸ್ಮೀನ್, ವಿಶ್ವ ನಂ.1 ಇಗಾ ಸ್ವಿಯಾಟೆಕ್ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿದ್ದರು.
ಸತತ 7 ವರ್ಷ ಹೊಸ ಚಾಂಪಿಯನ್
ಮಹಿಳಾ ಸಿಂಗಲ್ಸ್‌ನಲ್ಲಿ ಸತತ 7ನೇ ಬಾರಿ ವಿಂಬಲ್ಡನ್ ಹೊಸ ಚಾಂಪಿಯನ್ನರಿಗೆ ಸಾಕ್ಷಿಯಾಗಿದೆ. 2015, 2016ರಲ್ಲಿ ಸೆರೆನಾ ವಿಲಿಯಮ್ಸ್ ಸತತ 2 ಬಾರಿ ಟ್ರೋಫಿ ಗೆದ್ದಿದ್ದರು. ಆ ಬಳಿಕ 2017ರಲ್ಲಿ ಸ್ಪೇನ್‌ನ ಮುರುಗುಜಾ, 2018ರಲ್ಲಿ ಜರ್ಮನಿಯ ಗೆರ್ಬೆರ್, 2019ರಲ್ಲಿ ರೊಮಾನಿಯಾದ ಸಿಮೋನಾ ಹಾಲೆಪ್, 2021ರಲ್ಲಿ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ, 2022ರಲ್ಲಿ ಕಜಕಸ್ತಾನದ ಎಲೆನಾ ರಬೈಕೆನಾ, 2023ರಲ್ಲಿ ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ಪ್ರಶಸ್ತಿ ಗೆದ್ದಿದ್ದರು.
ಸತತ 6ನೇ ಬಾರಿ ವಿಂಬಲ್ಡನ್ ಫೈನಲ್‌ಗೆ ನೋವಾಕ್ ಜೋಕೋವಿಚ್!
2021ರಲ್ಲಿ ಫ್ರೆಂಚ್ ಓಪನ್, 2024ರಲ್ಲಿ ವಿಂಬಲ್ಡನ್ ವಿನ್
ಕ್ರೇಜಿಕೋವಾ 2 ಬಾರಿ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆದ್ದಿದ್ದಾರೆ. 2021ರಲ್ಲಿ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಸಾಧನೆ ಮಾಡಿದ್ದರು. 3 ವರ್ಷ ಬಳಿಕ ಮತ್ತೊಂದು ಗ್ರ್ಯಾನ್‌ಸ್ಲಾಂ ಗೆದ್ದಿದ್ದಾರೆ.
2018, 2022ರಲ್ಲಿ ವಿಂಬಲ್ಡನ್ ಡಬಲ್ಸ್ ಗೆದ್ದಿದ್ದ ಕ್ರೇಜಿಕೋವಾ
ಕ್ರೇಜಿಕೋವಾ ವಿಂಬಲ್ಡನ್‌ನಲ್ಲಿ ಈಗಾಗಲೇ 2 ಬಾರಿ ಚಾಂಪಿಯನ್ ಆಗಿದ್ದರು. ಮಹಿಳಾ ಡಬಲ್ಸ್‌ನಲ್ಲಿ 2018, 2022ರಲ್ಲಿ ಟ್ರೋಫಿ ಗೆದ್ದಿದ್ದರು. ಸಿಂಗಲ್ಸ್ ಪ್ರಶಸ್ತಿ ಬರವನ್ನು ಈ ಬಾರಿ ನೀಗಿಸಿದ್ದಾರೆ.
₹28.6 ಕೋಟಿ: ಚಾಂಪಿಯನ್ ಕ್ರೇಜಿಕೋವಾ 2700000 ಪೌಂಡ್(ಅಂದಾಜು 28.6 ಕೋಟಿ ರು.) ನಗದು ಬಹುಮಾನ ಪಡೆದರು.
₹14.8 ಕೋಟಿ: ರನ್ನರ್-ಅಪ್ ಪೌಲಿನಿ 1400000 ಪೌಂಡ್(ಅಂದಾಜು 14.8 ಕೋಟಿ ರು.) ನಗದು ಬಹುಮಾನ ಪಡೆದರು.