ವಿಶ್ವಕಪ್‌ ಜೆರ್ಸಿಯಲ್ಲಿ ಬಾಂಗ್ಲಾದೇಶ ಎಡವಟ್ಟು- ಟೀಕೆಗೆ ಬೆಚ್ಚಿ ಬಿದ್ದ ಮಂಡಳಿ!

By Web DeskFirst Published May 2, 2019, 3:09 PM IST
Highlights

ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲ ದಿನ ಇರುವಾಗಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿವಾದಕ್ಕೆ ಕಾರಣವಾಗಿದೆ. ನೂತನ ಜರ್ಸಿ ಬಿಡುಗಡೆ ಮಾಡಿದ ಬಾಂಗ್ಲಾ ಮಾಡಿದ ಎಡವಟ್ಟೇನು? ಇಲ್ಲಿದೆ ವಿವರ

ಢಾಕಾ(ಮೇ.02): ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ ಇದೆ.  ಈಗಾಗಲೇ ಎಲ್ಲಾ ತಂಡಗಳು ಪ್ರಕಟಗೊಂಡಿದೆ. ಇತ್ತ ಬಾಂಗ್ಲಾದೇಶ ಕೂಡ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಆದರೆ ಟೂರ್ನಿ ಆರಂಭಕ್ಕೂ ಕೆಲ ದಿನಗಳಿರುವಾಗಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಎಡವಟ್ಟು ಮಾಡಿಕೊಂಡಿದೆ.

ಇದನ್ನೂ ಓದಿ: ಇಲ್ಲಿದೆ ನೋಡಿ ವಿಶ್ವಕಪ್ ಟೂರ್ನಿಗೆ ರೆಡಿಯಾದ 10 ತಂಡಗಳ ಸಂಪೂರ್ಣ ಪಟ್ಟಿ

ಟೂರ್ನಿಗೂ  ಮೊದಲೇ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ(ಬಿಸಿಬಿ) ಹಲವು ವಿವಾದಕ್ಕೆ ಕಾರಣವಾಗುತ್ತಿದೆ. ತಾರಾ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ತಂಡದ ಫೋಟೋಶೂಟ್‌ಗೆ ಗೈರಾಗಿದ್ದು, ಗಾಯಾಳು ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿರುವುದು ಹೀಗೆ ಹಲವು ವಿವಾದಗಳು ಸೃಷ್ಟಿಯಾಗಿದೆ. ಇದೀಗ ತಂಡದಿಂದ ಹೊಸ ಎಡವಟ್ಟಾಗಿರುವುದು ಬೆಳಕಿಗೆ ಬಂದಿದೆ. ಬಾಂಗ್ಲಾ ಬಿಡುಗಡೆ ಮಾಡಿದ ವಿಶ್ವಕಪ್ ಜರ್ಸಿಯಲ್ಲಿ ಕೆಂಪು ಬಣ್ಣ ಬಿಟ್ಟು ಭಾರಿ ವಿವಾದಕ್ಕೆ ಕಾರಣವಾಗಿದೆ.

 

বাংলাদেশের নতুন জার্সি_Bangla Funny Dubbing Video 2019|Bangladesh World Cup Jersey_Mashrafe_Fm Jokes https://t.co/6DOMaMz90h pic.twitter.com/iN1oEmAd6k

— buzooo (@bu_zooo)

 

ಇದನ್ನೂ ಓದಿ: 2019ರ ವಿಶ್ವಕಪ್ ಫೈನಲ್ ಪ್ರವೇಶಿಸೋ ತಂಡ ಯಾವುದು?- ಭವಿಷ್ಯ ನುಡಿದ ದ್ರಾವಿಡ್!

ಇತ್ತೀಚೆಗೆ ಬಿಸಿಬಿ ವಿಶ್ವಕಪ್‌ಗೆ ನೂತನ ಜೆರ್ಸಿ ಅನಾವರಣಗೊಳಿಸಿತ್ತು. ಸಂಪೂರ್ಣ ಹಸಿರು ಜೆರ್ಸಿಯಲ್ಲಿ ರಾಷ್ಟ್ರ ಧ್ವಜದಲ್ಲಿರುವ ಕೆಂಪು ಬಣ್ಣ ಕಣ್ಮರೆಯಾಗಿತ್ತು. ಪಾಕಿಸ್ತಾನ ತಂಡದ ಜೆರ್ಸಿ ಹೋಲುವ ಜೆರ್ಸಿ ಸಿದ್ಧಪಡಿಸಲಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ಮಾಡಿದ್ದರು. ಎಚ್ಚತ್ತುಕೊಂಡ ಬಿಸಿಬಿ ಬಳಿಕ ಹೊಸ ಜೆರ್ಸಿ ಅನಾವರಣಗೊಳಿಸಿದೆ.

click me!