ಕೊಹ್ಲಿ ಬಾಯ್ಸ್‌ಗೆ ಹೊಸ ಜರ್ಸಿ; ಬೆಂಗಳೂರು ಕಂಪನಿ ಪ್ರಾಯೋಜಕತ್ವ!

By Web DeskFirst Published Jul 25, 2019, 6:59 PM IST
Highlights

ಶೀಘ್ರದಲ್ಲೇ ಟೀಂ ಇಂಡಿಯಾ ಹೊಸ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಸದ್ಯ ಒಪ್ಪೋ ಪ್ರಾಯೋಜಕತ್ವದ ಟೀಂ ಇಂಡಿಯಾ ಜರ್ಸಿ ಇನ್ಮುಂದೆ ಬೆಂಗಳೂರು ಮೂಲದ ಕಂಪನಿ ಪ್ರಾಯೋಜಕತ್ವದಲ್ಲಿ ಬರಲಿದೆ. ಟೀಂ ಇಂಡಿಯಾ ನೂತನ ಜರ್ಪ್ರಾಸಿ ಪ್ರಾಯೋಜಕತ್ವದ ಕುರಿತ ವಿವರ ಇಲ್ಲಿದೆ.

ಮುಂಬೈ(ಜು.25): ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿರುವ ಟೀಂ ಇಂಡಿಯಾ ಆಗಸ್ಟ್ 3 ರಿಂದ ದ್ವಿಪಕ್ಷೀಯ ಸರಣಿ ಆಡಲಿದೆ. ಈ ಸರಣಿ ಬಳಿಕ ಟೀಂ ಇಂಡಿಯಾ ಹೊಸ ಜರ್ಸಿ ತೊಡಲಿದೆ. ಸದ್ಯ ಚೀನಾದ ಒಪ್ಪೊ ಮೊಬೈಲ್ ಪ್ರಾಯೋಜಕತ್ವ ನೀಡಿರುವ ಜರ್ಸಿ ತೊಡುತ್ತಿರುವ ಟೀಂ ಇಂಡಿಯಾ ಶೀಘ್ರದಲ್ಲೇ ಬೆಂಗಳೂರು ಮೂಲದ ಕಂಪನಿ ಪ್ರಾಯೋಜಕತ್ವದ ಜರ್ಸಿ ತೊಡಲಿದೆ.

ಇದನ್ನೂ ಓದಿ: ಕೊಹ್ಲಿ ಬಳಗಕ್ಕೆ ಒಪ್ಪೊ, ಆಫ್ಘನ್ ತಂಡಕ್ಕೆ ಅಮುಲ್: ಇದು ಲಾಭದ ಕಮಾಲ್!

2017ರಲ್ಲಿ ಒಪ್ಪೋ ಮೊಬೈಲ್ 5 ವರ್ಷ ಅವದಿಗೆ 1,079 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಒಪ್ಪೊ ಮೊಬೈಲ್ ಒಪ್ಪಂದ ಅಂತ್ಯವಾಗಲಿದೆ. ಈಗಾಗಲೇ ಬಿಸಿಸಿಐ ಬಿಡ್ ಮಾಡಿದ್ದು ಬೆಂಗಳೂರು ಮೂಲದ ಶಿಕ್ಷಣ ಹಾಗೂ ಆನ್‌ಲೈಟ್ ಟುಟೋರಿಯಲ್ ಕಂಪನಿ ಬೈಜುಸ್ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಒಪ್ಪೋ ಟೀಂ ಇಂಡಿಯಾ ಬದಲು, ಸೆಪ್ಟೆಂಬರ್‌ನಿಂದ ಬೈಜುಲ್ ಟೀಂ ಇಂಡಿಯಾ ಜರ್ಸಿ ಬರಲಿದೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಬೈಜುಸ್ ಪ್ರಾಯೋಜಕತ್ವದ ಜರ್ಸಿ ತೊಡಲಿದೆ.

ಇದನ್ನೂ ಓದಿ: ಮೋದಿಗೆ ಸಿಕ್ತು ವಿಶೇಷ ಜೆರ್ಸಿ ಗಿಫ್ಟ್

ಬೈಜುಸ್ ಒಪ್ಪಂದದ ಮೊತ್ತ ಬಹಿರಂಗವಾಗಿಲ್ಲ. ಸದ್ಯ ಒಪ್ಪೋ ಕಂಪನಿ ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ 4.61 ಕೋಟಿ ರೂಪಾಯಿ ಬಿಸಿಸಿಐಗೆ ನೀಡುತ್ತಿದ್ದರೆ, ಐಸಿಸಿ ಪಂದ್ಯಗಳಿಗೆ 1.92 ಕೋಟಿ ರೂಪಾಯಿ ಬಿಸಿಸಿಐಗೆ ನೀಡುತ್ತಿದೆ. ಇದಕ್ಕೂ ಹಿಂದೆ ಸ್ಟಾರ್ ಇಂಡಿಯಾ ಪ್ರಾಯೋಜಕತ್ವ ನೀಡಿತ್ತು. ಈ ವೇಳೆ ಸ್ಟಾರ್ ದ್ವಿಪಕ್ಷೀಯ ಸರಣಿ ಪಂದ್ಯಕ್ಕೆ 1.92 ಕೋಟಿ  ಹಾಗೂ ಐಸಿಸಿ ಪಂದ್ಯಕ್ಕೆ 61 ಲಕ್ಷ ರೂಪಾಯಿ ನೀಡುತ್ತಿತ್ತು. 

click me!