ಥಾಯ್ಲೆಂಡ್‌ ಆತಿಥ್ಯದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಮಾಸ್ಕಾಟ್‌ ಆದ ಭಜರಂಗಬಲಿ!

By Santosh Naik  |  First Published Jul 11, 2023, 6:06 PM IST

ಬುಧವಾರದಿಂದ ಥಾಯ್ಲೆಂಡ್‌ ದೇಶದ ಆತಿಥ್ಯದಲ್ಲಿ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಮಂಗಳವಾರ ಸಂಘಟಕರು ಈ ಚಾಂಪಿಯನ್‌ಷಿಪ್‌ನ ಮಾಸ್ಕಾಟ್‌ ಅನ್ನು ಬಿಡುಗಡೆ ಮಾಡಿದೆ. ಭಜರಂಗಬಲಿ ಈ ಟೂರ್ನಿಯ ಮಾಸ್ಕಾಟ್‌ ಆಗಿದ್ದು, ಅಥ್ಲೀಟ್‌ಗಳು ಹನುಮಂತನ ರೀತಿ ಬದ್ಧತೆ ತೋರಬೇಕು ಎನ್ನುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.
 


ನವದೆಹಲಿ (ಜು.11): ಥಾಯ್ಲೆಂಡ್‌ ದೇಶದ ಆತಿಥ್ಯದಲ್ಲಿ ಬುಧವಾರದಿಂದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಆರಂಭವಾಗಲಿದೆ. ಮಂಗಳವಾರ ಈ ಚಾಂಪಿಯನ್‌ಷಿಪ್‌ನ ಅಧಿಕೃತ ಮಾಸ್ಕಾಟ್‌ ಅನ್ನು ಥಾಯ್ಲೆಂಡ್‌ ಅನಾವರಣ ಮಾಡಿದೆ. ಭಗವಾನ್‌ ಹನುಮಂತ ಈ ಚಾಂಪಿಯನ್‌ಷಿಪ್‌ನ ಮಾಸ್ಕಾಟ್‌ ಆಗಿರುವುದು ವಿಶೇಷವಾಗಿದೆ. ಏಷ್ಯನ್‌ ಅಥ್ಲಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಸಲು ಆರಂಭವಾಗಿ 50 ವರ್ಷಗಳಾಗಿದ್ದು, ಜುಲೈ 12 ರಿಂದ 16ರವರೆಗೆ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಇಂಥ ಚಾಂಪಿಯನ್‌ಷಿಪ್‌ಗಳಿಗೆ ಆತಿಥೇಯ ದೇಶದ ಸಂಘಟನಾ ಸಮಿತಿಯು ಮ್ಯಾಸ್ಕಾಟ್ ಅನ್ನು ಆಯ್ಕೆ ಮಾಡುತ್ತದೆ. ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರ ವೆಬ್‌ಸೈಟ್‌ನಲ್ಲಿ, ರಾಮನ ಸೇವೆಯಲ್ಲಿ ಹನುಮಮಂತನ ವೇಗ, ಶಕ್ತಿ, ಧೈರ್ಯ ಮತ್ತು ಬುದ್ಧಿವಂತಿಕೆ ಸೇರಿದಂತೆ ಹಲವು ಶಕ್ತಿಗಳನ್ನು ಬಳಸುತ್ತಾನೆ ಎಂದು ಸಂಘಟನಾ ಸಮಿತಿ ಬರೆದಿದೆ.  ಅದರೊಂದಿಗೆಹನುಮಂತನ ದೊಡ್ಡ ಶಕ್ತಿ ಅವನ ನಂಬಲಾಗದಷ್ಟು ಬಲವಾದ ನಿಷ್ಠೆ ಮತ್ತು ಭಕ್ತಿ. ಅದೇ ರೀತಿ ಗುರಿ ಸಾಧಿಸಲು ಕ್ರೀಡಾಪಟುವಿಗೆ ಈ ಗುಣಗಳು ಬೇಕು ಎಂದು ಬರೆದಿದೆ. ಇದಕ್ಕೂ ಮುನ್ನ 2009ರಲ್ಲಿಏಷ್ಯನ್‌ ಮಾರ್ಷಲ್‌ ಆರ್ಟ್ಸ್‌ ಗೇಮ್ಸ್‌ಗೂ ಹನುಮಂತನನ್ನು ಥಾಯ್ಲೆಂಡ್‌ ದೇಶ, ಮಾಸ್ಕಾಟ್‌ ಆಗಿ ಮಾಡಿತ್ತು.

ಭಾರತ ಕೂಡ ಭಾಗವಹಿಸಲಿದೆ: 25 ನೇ ಏಷ್ಯನ್‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಏಷ್ಯಾದ ಎಲ್ಲಾ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಇದರಲ್ಲಿ ಭಾರತದ ಶಾಟ್‌ಪುಟ್ ಆಟಗಾರ ತಜಿಂದರ್‌ಪಾಲ್ ಸಿಂಗ್ ತೂರ್ ಮತ್ತು ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ನೇತೃತ್ವದಲ್ಲಿ ಭಾರತ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದೆ. ಐದು ದಿನಗಳ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ ಭಾರತ ತಂಡ ಶನಿವಾರ ರಾತ್ರಿ ದೆಹಲಿ ಮತ್ತು ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ತೆರಳಿದೆ. ಬ್ಯಾಂಕಾಕ್‌ನಲ್ಲಿರುವ ಅಥ್ಲೀಟ್‌ಗಳು 45 ವಿಭಿನ್ನ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಮ್ಯಾರಥಾನ್‌ ಸ್ಪರ್ಧೆಗಳಿಲ್ಲ. ಥೈಲ್ಯಾಂಡ್ ಹೊರತುಪಡಿಸಿ, ಎಂಟು ದೇಶಗಳು ಈವೆಂಟ್‌ನ ಪ್ರತಿಯೊಂದು ಕ್ರೀಡೆಯಲ್ಲೂ ತಂಡಗಳನ್ನು ಕಣಕ್ಕಿಳಿಸಿವೆ. ಇದರಲ್ಲಿ ಹಾಂಗ್ ಕಾಂಗ್, ಚೀನಾ, ಭಾರತ, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ಸಿಂಗಾಪುರ ಸೇರಿವೆ.

ನೀರಜ್‌ ಚೋಪ್ರಾ ಇಲ್ಲ: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಅವಿನಾಶ್ ಸಬ್ಲೆಅವರು ಬ್ಯಾಂಕಾಕ್‌ನಲ್ಲಿ 2023 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಭಾರತೀಯ ತಂಡದ ಭಾಗವಾಗಿರುವುದಿಲ್ಲ. ಚೋಪ್ರಾ ಮತ್ತು ಸಬ್ಲೆ ಪ್ರಸ್ತುತ ವಿದೇಶದಲ್ಲಿದ್ದು, ಆಗಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ.

"ತಮಿಳಿನ ಒಂದೇ ಒಂದು ಕೆಟ್ಟ ಪದ ನನಗೆ ಗೊತ್ತಿಲ್ಲ ಆದ್ರೆ ಹೆಂಡತಿಗೆ ಗೊತ್ತು": ಇಂಟ್ರೆಸ್ಟಿಂಗ್ ಸ್ಟೋರಿ ಬಿಚ್ಚಿಟ್ಟ ಧೋನಿ

ಪ್ರತಿ ಎರಡು ವರ್ಷಕ್ಕೆ ಟೂರ್ನಿ: ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಹಾಗಿದ್ದರೂ, ಆತಿಥೇಯ ಚೀನಾ ಕೋವಿಡ್‌ನಿಂದಾಗಿ 2021 ರಲ್ಲಿ ಈವೆಂಟ್ ಅನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಈ ಹಿಂದೆ 2019 ರಲ್ಲಿ, ಕತಾರ್‌ನ ರಾಜಧಾನಿ ದೋಹಾದಲ್ಲಿ ಕೊನೆಯ ಬಾರಿ ಚಾಂಪಿಯನ್‌ಶಿಪ್ ನಡೆದಿತ್ತು.

Latest Videos

ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ನಾಳೆಯಿಂದ ಆರಂಭ, ಇಲ್ಲಿದೆ ಟೂರ್ನಿ ವೇಳಾಪಟ್ಟಿ!

click me!