ಹೈದರಾಬಾದ್‌ನಲ್ಲಿ ಸೈನಾ ನೆಹ್ವಾಲ್-ಪರುಪಳ್ಳಿ ಕಶ್ಯಪ್ ಅದ್ಧೂರಿ ಆರತಕ್ಷತೆ!

By Web Desk  |  First Published Dec 16, 2018, 9:34 PM IST

ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ -ನಿಕ್ ಜೋನ್ಸ್ ಬಳಿಕ ಇದೀಗ ಬ್ಯಾಡ್ಮಿಂಟನ್ ಸ್ಟಾರ್ಸ್ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಅದ್ದೂರಿ ಆರತಕ್ಷತೆ ಕಾರ್ಯಕ್ರಮದ ವಿವರ ಇಲ್ಲಿದೆ.


ಹೈದರಾಬಾದ್(ಡಿ.16): ಭಾರತದ ಬ್ಯಾಡ್ಮಿಂಟನ್ ಸ್ಟಾರ್ಸ್ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆದಿದೆ. ಡಿಸೆಂಬರ್ 14 ರಂದು ಸರಳವಾಗಿ ವಿವಾಹವಾಗಿದ್ದ ಈ ಜೋಡಿ ಇದೀಗ ಅದ್ಧೂರಿ ರಿಸೆಪ್ಶನ್ ಕಾರ್ಯಕ್ರಮ ಆಯೋಜಿಸಿದ್ದಾರೆ.

ಇದನ್ನೂ ಓದಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೈ ಹಿಡಿದ ಪರುಪಳ್ಳಿ ಕಶ್ಯಪ್!

Tap to resize

Latest Videos

ಸೈನಾ ಹಾಗೂ ಕಶ್ಯಪ್ ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದರು. ಪರುಪಳ್ಳಿ ಕಶ್ಯಪ್ ನೀಲಿ  ಹಾಗೂ ಗೋಲ್ಡನ್ ಬಾರ್ಡರ್ ಬಣ್ಣದ ಕುರ್ತಾ ಧರಿಸಿದ್ದರೆ, ಸೈನಾ ನೆಹ್ವಾಲ್ ಅದೇ ಬಣ್ಣದ ಲೆಹೆಂಗಾ ಶೈಲಿಯ ಡ್ರೆಸ್ ಧರಿಸಿದ್ದರು. ಹೈದರಾಬಾದ್‌ನ ನೊವಟೆಲ್ ಹೊಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇದನ್ನೂ ಓದಿ:  ಸೈಮಂಡ್ಸ್ ಈಗ ಕಾದಂಬರಿಗಾರ -ಮಂಕಿಗೇಟ್ ಪ್ರಕರಣಕ್ಕೆ ಭಜ್ಜಿ ತಿರುಗೇಟು!

ಸೈನಾ ಹಾಗೂ ಕಶ್ಯಪ್ ಆರತಕ್ಷತೆ ಕಾರ್ಯಕ್ರಮದಲ್ಲಿ ಸೆಲೆಬ್ರೆಟಿಗಳ ದಂಡೇ ಹಾಜರಾಗಿತ್ತು. ತೆಲಗು ನಟ ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಹಲವು ನಟ ನಟಿಯರು ಪಾಲ್ಗೊಂಡಿದ್ದರು. ಇನ್ನು ಬ್ಯಾಡ್ಮಿಂಟನ್ ಸ್ಟಾರ್ಸ್‌ಗಳು ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

click me!