ಅಜ್ಲಾನ್‌ ಶಾ ಹಾಕಿ: ಪೋಲೆಂಡ್ ವಿರುದ್ಧ ಭಾರತಕ್ಕೆ 10-0 ಜಯ!

ಅಜ್ಲಾನ್‌ ಶಾ ಹಾಕಿ  ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಅದ್ಬುತ ಪ್ರದರ್ಶನ ನೀಡುತ್ತಿರುವ ಭಾರತ, ಇದೀಗ ಪೋಲೆಂಡ್ ವಿರುದ್ಧ ಗೋಲುಗಳ ಮಳೆ ಹರಿಸಿದೆ. 
 


ಇಫೋ(ಮಾ.30): ಅಜ್ಲಾನ್‌ ಶಾ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಗೆಲುವಿನ ಓಟ ಮುಂದುವರಿಸಿದೆ. ಶುಕ್ರವಾರ ಪೋಲೆಂಡ್‌ ವಿರುದ್ಧ ನಡೆದ ಅಂತಿಮ ಲೀಗ್‌ ಪಂದ್ಯದಲ್ಲಿ 10-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲಾರ್ಧದ ಮುಕ್ತಾಯಕ್ಕೆ 6-0ಯಿಂದ ಮುಂದಿದ್ದ ಭಾರತ, ದ್ವಿತೀಯಾರ್ಧದಲ್ಲಿ ಮತ್ತೆ 4 ಗೋಲು ಗಳಿಸಿತು. 

ಇದನ್ನೂ ಓದಿ: ಭಾರತ ಹಾಕಿ ತಂಡಕ್ಕೆ ಗ್ರಹಮ್‌ ರೀಡ್‌ ಕೋಚ್‌

Latest Videos

ಭಾರತ ಪರ ವಿವೇಕ್‌ ಪ್ರಸಾದ್‌ (1ನೇ ನಿ.), ಸುಮಿತ್‌ ಕುಮಾರ್‌ (7ನೇ ನಿ.), ವರುಣ್‌ ಕುಮಾರ್‌ (18ನೇ, 25ನೇ ನಿ.), ಸುರೇಂದ್ರ (19ನೇ ನಿ.), ಸಿಮ್ರನ್‌ಜೀತ್‌ (29ನೇ ನಿ.), ನೀಲಕಂಠ ಶರ್ಮಾ (36ನೇ ನಿ.), ಮನ್‌ದೀಪ್‌ (50ನೇ, 51ನೇ ನಿ.), ಅಮಿತ್‌ ರೋಹಿದಾಸ್‌ (55ನೇ ನಿ.) ಗೋಲು ಗಳಿಸಿದರು.

 

FT: 🇮🇳 10-0 🇵🇱

Courtesy an electrifying ⚡ performance by a confident Indian side, our remained untamed until the final hooter in their fifth encounter against Poland on 29th March 2019 to remain on 🔝 of the points tally. pic.twitter.com/po9lzzKiiQ

— Hockey India (@TheHockeyIndia)

/p>

ಇದನ್ನೂ ಓದಿ: ಭಾರತ ಹಾಕಿ ಆಯ್ಕೆ ಸಮಿತಿಗೆ ಸರ್ದಾರ್‌ ಸಿಂಗ್‌

ಶನಿವಾರ ನಡೆಯಲಿರುವ ಫೈನಲ್‌ನಲ್ಲಿ 5 ಬಾರಿ ಚಾಂಪಿಯನ್‌ ಭಾರತ, ಪ್ರಶಸ್ತಿಗಾಗಿ ಕೊರಿಯಾ ವಿರುದ್ಧ ಸೆಣಸಲಿದೆ.

click me!