ಪಂದ್ಯ ಸೋತ ಬಳಿಕ ಜಪಾನ್ ತಂಡ ಡ್ರೆಸ್ಸಿಂಗ್ ರೂಂನಲ್ಲಿ ಮಾಡಿದ್ದೇನು?

First Published Jul 3, 2018, 4:23 PM IST
Highlights

ಫಿಫಾ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಜಪಾನ್ ಮುಗ್ಗರಿಸೋ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯ ಸೋಲುತ್ತಿದ್ದಂತೆ, ಜಪಾನ್ ತಂಡ ಮೈದಾನದಿಂದ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರೆಳಿ ಮಾಡಿದ್ದೇನು? ಈ ಕುತೂಹಲಕ್ಕೆ ಇಲ್ಲಿದೆ ಉತ್ತರ.

ರಷ್ಯಾ(ಜು.03): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಜಪಾನ್ ತಂಡದ ಹೋರಾಟ ಅಂತ್ಯವಾಗಿದೆ. ನಾಕಾಟ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿದ ಜಪಾನ್, ಟೂರ್ನಿಯಿಂದ ಹೊರಬಿದ್ದಿದೆ.  ಸೋಲಿನ ಬಳಿಕ ಜಪಾನ್ ತಂಡದ ನಡೆದೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬೆಲ್ಜಿಯಂ ವಿರುದ್ಧದ ಮಹತ್ವದ ಪಂದ್ಯ ಸೋಲುತ್ತಿದ್ದಂತೆ, ಜಪಾನ್ ತಂಡ ದುಃಖದಲ್ಲಿ ಮುಳುಗಿತ್ತು. ಮೈದಾನದಿಂದ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರಳಿದ ಫುಟ್ಬಾಲ್ ಪಟುಗಳು, ತಮ್ಮ ನೀಡಲಾಗಿದ್ದ ಡ್ರೆಸ್ಸಿಂಗ್ ಕೊಠಡಿಯನ್ನ ಸಂಪೂರ್ಣವಾಗಿ ಸ್ವಚ್ಚಗೊಳಿಸಿದ್ದಾರೆ.

 

Japan left their changing room spotless after last night’s heartbreaking last minute defeat to Belgium.

They also left a note saying “Thank-you” in Russian.

Class act. 👏🇯🇵 pic.twitter.com/dTQ8fEBxT4

— FIFA World Cup (@WorIdCupUpdates)

 

ಖುದ್ದು ಫುಟ್ಬಾಲ್ ಪಟುಗಳೇ ಡ್ರೆಸ್ಸಿಂಗ್ ರೂಂ ಕ್ಲೀನ್ ಮಾಡಿದ್ದಾರೆ. ಇಡೀ ಕೊಠಡಿಯನ್ನ ಸ್ವಚ್ಚಗೊಳಿಸಿದ ಬಳಿಕ ಧನ್ಯವಾದ ನೋಟ್ ಬರೆದಿಟ್ಟು, ತಾಯ್ನಾಡಿಗೆ ಪ್ರಯಾಣ ಬೆಳೆಸಿದೆ. ಸೋಲಿನ ನೋವಿನಲ್ಲೂ ಜಪಾನ್ ತಂಡದ ಸ್ವಚ್ಚತಾ ಕಾರ್ಯಕ್ಕೆ ಇದೀಗ ಫಿಫಾ ಆಯೋಜಕರು ಮಾತ್ರವಲ್ಲ, ಫುಟ್ಬಾಲ್ ಪ್ರೇಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

click me!