ಪ್ಲೇಯರ್ಸ್ ಲಾಂಜ್‌ಗೆ ತೆರಳಲು ಫೆಡರರ್‌ಗೆ ಪ್ರವೇಶ ನಿರಾಕರಣೆ-ಮುಂದೇನಾಯ್ತು?

By Web DeskFirst Published Jan 19, 2019, 9:38 PM IST
Highlights

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುತ್ತಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಪಂದ್ಯದ ಬಳಿಕ  ಪ್ಲೇಯರ್ ಲಾಂಜ್‍‌ಗೆ ಪ್ರವೇಶ ನಿರಾಕರಿಸಿದೆ ಘಟನೆ ನಡೆದಿದೆ. ಮುಂದೇನಾಯ್ತು ಇಲ್ಲಿದೆ ನೋಡಿ.

ಮೆಲ್ಬರ್ನ್(ಜ.19): ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಂ ಟೂರ್ನಿಯಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯದ ಬಳಿಕ ಪ್ಲೇಯರ್ ಲಾಂಜ್‌ಗೆ ತೆರಳಿದ ರೋಜರ್ ಫೆಡರರ್‌ಗೆ ಪ್ರವೇಶ ನಿರಾಕರಿಸಾಗಿತ್ತು. ಕಾರಣ ರೋಜರ್ ಫೆಡರರ್ ಬಳಿ ಎಕ್ರಿಡೇಶನ್ ಕಾರ್ಡ್ ಇರಲಿಲ್ಲ.

ಇದನ್ನೂ ಓದಿ: ಇಲ್ಲಿದೆ ಭಾರತ-ನ್ಯೂಜಿಲೆಂಡ್ ಏಕದಿನ,ಟಿ20 ಸರಣಿ ವೇಳಾಪಟ್ಟಿ!

ಫೆಡರರ್ ಎಕ್ರಿಡೇಶನ್ ಕಾರ್ಡ್ ತಮ್ಮ ಕೋಚ್ ಬಳಿ ಇತ್ತು. ಹೀಗಾಗಿ ಕೆಲ ಹೊತ್ತು ಕಾದ ಫೆಡರರ್ ಕೋಚ್ ಜೊತೆಗೆ ಎಕ್ರಿಡೇಶನ್ ಕಾರ್ಡ್ ತೋರಿಸಿ ಒಳ ಪ್ರವೇಶಿಸಿದ್ದಾರೆ.  ಸಿಬ್ಬಂಧಿ ಹಾಗೂ ಫೆಡರರ್ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.

 

Even needs his accreditation 😂 (via )

pic.twitter.com/oZETUaygSE

— #AusOpen (@AustralianOpen)

 

 ದಿಗ್ಗಜ ಟೆನಿಸ್ ಪಟುವಾದರೂ ಮರು ಮಾತನಾಡದೆ ಕಾರ್ಡ್ ತೋರಿಸಿ ಫೆಡರರ್ ಒಳಹೋಗಿದ್ದಾರೆ. ಫೆಡರರ್ ಎದುರಿಗಿದ್ದರೂ ಕಾರ್ಡ್ ಅನಿವಾರ್ಯ ಎಂದು ಕರ್ತವ್ಯ ಮೆರೆದ  ಸಿಬ್ಬಂಧಿಗೂ ಮೆಚ್ಚುಗೆ ವ್ಯಕ್ತವಾಗಿದೆ. 

click me!