ಆ್ಯಷಸ್‌ ಕದನ: ಆಸ್ಟ್ರೇಲಿಯಾ ಜಯಭೇರಿ!

By Web Desk  |  First Published Aug 6, 2019, 10:51 AM IST

ಆ್ಯಷಸ್‌ ಸರಣಿಯ ಮೊದಲ ಪಂದ್ಯದಲ್ಲಿ ನಾಟಕೀಯ ಕುಸಿತ ಕಂಡ ಆತಿಥೇಯ ಇಂಗ್ಲೆಂಡ್ 251 ರನ್‌ಗಳಿಂದ ಆಸ್ಟ್ರೇಲಿಯಾಗೆ ಶರಣಾಗಿದೆ. ಎರಡು ಇನಿಂಗ್ಸ್‌ಗಳಲ್ಲೂ ಶತಕ ಸಿಡಿಸಿದ ಸ್ಟೀವ್ ಸ್ಮಿತ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬರ್ಮಿಂಗ್‌ಹ್ಯಾಮ್‌[ಆ.06]: ನೇಥನ್‌ ಲಯನ್‌ ಸ್ಪಿನ್‌ ಜಾದೂ ನೆರವಿನಿಂದ, ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ 251 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದ್ದು, ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಂಕಗಳ ಖಾತೆ ತೆರೆದಿದೆ. ಈ ಪಂದ್ಯದ ಗೆಲುವಿನಿಂದ ಆಸೀಸ್‌ 24 ಅಂಕ ಪಡೆದುಕೊಂಡಿದೆ.

ಆ್ಯಷಸ್‌ ಕದನ: ಇಂಗ್ಲೆಂಡ್‌ಗೆ 398 ರನ್‌ ಗುರಿ

Latest Videos

undefined

ಗೆಲುವಿಗೆ 398 ರನ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 5ನೇ ಹಾಗೂ ಅಂತಿಮ ದಿನವನ್ನು ವಿಕೆಟ್‌ ನಷ್ಟವಿಲ್ಲದೆ 13 ರನ್‌ಗಳಿಂದ ಆರಂಭಿಸಿದ ಇಂಗ್ಲೆಂಡ್‌ 97 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿತು. ಕ್ರಿಸ್‌ ವೋಕ್ಸ್‌ (37) ಕೆಲ ಕಾಲ ಹೋರಾಟ ನಡೆಸಿ ತಂಡದ ಮೊತ್ತವನ್ನು 140 ರನ್‌ ದಾಟಿಸಿದರು. ಅಂತಿಮವಾಗಿ ಇಂಗ್ಲೆಂಡ್‌ 146 ರನ್‌ಗಳಿಗೆ ಆಲೌಟ್‌ ಆಯಿತು. ಲಯನ್‌ 49 ರನ್‌ಗೆ 6 ವಿಕೆಟ್‌ ಕಿತ್ತರೆ, ವೇಗಿ ಕಮಿನ್ಸ್‌ 32 ರನ್‌ಗೆ 4 ವಿಕೆಟ್‌ ಕಬಳಿಸಿದರು.

ಆಶ್ಯಸ್ ಸರಣಿ: 2 ವರ್ಷಗಳ ಬಳಿಕ ಇಶಾಂತ್‌ ಅನುಕರಣೆ ಮಾಡಿದ ಸ್ಮಿತ್!

ಮೊದಲ ಇನ್ನಿಂಗ್ಸ್‌ನಲ್ಲಿ 122 ರನ್‌ಗೆ 8 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸೀಸ್‌, ಪುಟಿದೆದ್ದು ಪಂದ್ಯ ಜಯಿಸಿತು. ಆಸೀಸ್‌ ಹೋರಾಟಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆ.14ರಿಂದ ಲಾರ್ಡ್ಸ್’ನಲ್ಲಿ 2ನೇ ಟೆಸ್ಟ್‌ ಅರಂಭಗೊಳ್ಳಲಿದೆ.

ಸ್ಕೋರ್‌:

ಆಸ್ಪ್ರೇಲಿಯಾ 284, 487/7 ಡಿ., 

ಇಂಗ್ಲೆಂಡ್‌ 374 ಹಾಗೂ 146 

ಪಂದ್ಯ ಶ್ರೇಷ್ಠ: ಸ್ಟೀವ್‌ ಸ್ಮಿತ್‌
 

click me!