ಮೊದಲಾರ್ಧದಲ್ಲಿ ಮುನ್ನಡೆ ಪಡೆದಿದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್, ಸೆಕೆಂಡ್ ಹಾಫ್‌ನಲ್ಲಿ ಪುಣೇರಿ ತಂಡ ಆರ್ಭಟಿಸೋ ಮೂಲಕ ಗೆಲುವಿನ ನಗೆ ಬೀರಿದೆ. ಗುಜರಾತ್ ತಂಡಕ್ಕೆ ಶಾಕ್ ನೀಡಿದ ಪುಣೇರಿ, ರೋಚಕ ಗೆಲುವು ಸಾಧಿಸಿದೆ.
ಪಾಟಲೀಪುತ್ರ(ಆ.05): ಪವನ್, ಅಮಿತ್ ಕುಮಾರ್ ಹಾಗೂ ಗಿರೀಶ್ ಮಾರುತಿ ಅದ್ಭುತ ಪ್ರದರ್ಶನದಿಂದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 28ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ರೋಚಕ ಗೆಲುವು ಸಾಧಿಸಿದೆ. ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ ಹೋರಾಡಿದ ಪುಣೇರಿ 33-31 ಅಂಕಗಳ ಗೆಲುವು ಸಾಧಿಸಿದೆ. ಈ ಮೂಲಕ ಸೋತು ಕಂಗಾಲಾಗಿದ್ದ ಪುಣೆ ಇದೀಗ 2 ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಮೊದಲ ನಿಮಿಷದಲ್ಲಿ ಉಭಯ ತಂಡಗಳು ಅಂಕಗಳಿಸಲಿಲ್ಲ. ಗಿರೀಶ್ ಮಾರುತಿ ಟ್ಯಾಕಲ್ ಮೂಲಕ ಮೂಲಕ ಪುಣೇರಿ 1-0 ಮುನ್ನಡೆ ಪಡೆದುಕೊಂಡಿತು. 5ನೇ ನಿಮಿಷದಲ್ಲಿ ಗುಜರಾತ್ 5-5 ಅಂಕಗಳಿಂದ ಸಮಬಲ ಮಾಡಿಕೊಂಡಿತು. ದಿಟ್ಟ ಹೋರಾಟ ನೀಡಿದ ಗುಜರಾತ್ ಮೊದಲಾರ್ಧದ ಅಂತ್ಯದಲ್ಲಿ 17-14 ಅಂಕಗಳ ಮುನ್ನಡೆ ಸಾಧಿಸಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ದ್ವಿತಿಯಾರ್ಧದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡಿದ ಪುಣೇರಿ 20-18 ಅಂಕಗಳ ಮುನ್ನಡೆ ಪಡೆದುಕೊಂಡಿತು. ಇದು ಪಂದ್ಯಕ್ಕೆ ತಿರುವು ನೀಡಿತು. ಬಳಿಕ ಗುಜರಾತ್ ತಂಡಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ದ್ವಿತಿಯಾರ್ಧದ ಅಂತ್ಯದಲ್ಲಿ ಪುಣೇರಿ 33-31 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು.