ವಿಶ್ವಕಪ್ 2019: ವಿರಾಟ್ ಕೊಹ್ಲಿಗೆ 4ನೇ ಕ್ರಮಾಂಕ?

Published : Feb 07, 2019, 09:49 AM IST
ವಿಶ್ವಕಪ್ 2019: ವಿರಾಟ್ ಕೊಹ್ಲಿಗೆ 4ನೇ ಕ್ರಮಾಂಕ?

ಸಾರಾಂಶ

2019ರ ವಿಶ್ವಕಪ್ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಲು ನಿರ್ಧರಿಸಿದ್ದಾರೆ. ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಈ ಕುರಿತು ಮಾಹಿತಿ ಹೊರಹಾಕಿದ್ದಾರೆ.

ವೆಲ್ಲಿಂಗ್ಟನ್‌(ಫೆ.07): ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಸಾಧ್ಯತೆ ಇದೆ ಎಂದು ತಂಡದ ಪ್ರಧಾನ ಕೋಚ್‌ ರವಿಶಾಸ್ತ್ರಿ ಬುಧವಾರ ಹೇಳಿದ್ದಾರೆ. ಖಾಸಗಿ ಕ್ರಿಕೆಟ್‌ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶಾಸ್ತ್ರಿ , ವಿಶ್ವಕಪ್‌ಗೆ ತಂಡದ ಹೇಗೆ ಸಿದ್ಧಗೊಂಡಿದೆ ಎನ್ನುವುದನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

‘ಭಾರತ ತಂಡದ ಅಗ್ರ 3 ಆಟಗಾರರ ವಿಶೇಷತೆ ಏನೆಂದರೆ ಅವರನ್ನು ಕಾಯಂ ಕ್ರಮಾಂಕಗಳಿಂದ ಬೇರ್ಪಡಿಸಬಹುದು. ವಿಶ್ವಕಪ್‌ನಂತಹ ಟೂರ್ನಿಯಲ್ಲಿ ನಾವು 18-3 ಇಲ್ಲವೇ 16-4 ವಿಕೆಟ್‌ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಹೀಗಾಗಿ ಸಮತೋಲನ ಕಾಪಾಡಿಕೊಳ್ಳುವ ದೃಷ್ಟಿಯಿಂದ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಏರ್ ಶೋ ಎಫೆಕ್ಟ್: ಬೆಂಗ್ಳೂರಲ್ಲಿ 2ನೇ ಟಿ20, ಮೊದಲ ಪಂದ್ಯಕ್ಕೆ ವೈಝಾಗ್ ಆತಿಥ್ಯ!

ಅಂಬಾಟಿ ರಾಯುಡು ಇಲ್ಲವೇ ಮತ್ತ್ಯಾರಾದರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ’ ಎಂದು ಶಾಸ್ತ್ರಿ ಹೇಳಿದ್ದಾರೆ. ಈ ಮೂಲಕ ಅಂಬಾಟಿ ರಾಯುಡು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಅನ್ನೋ ಸೂಚನೆ ನೀಡಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!