ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

By Suvarna Web DeskFirst Published Apr 20, 2017, 12:29 PM IST
Highlights

2009ರ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಪದೇಪದೆ ವಿಫಲವಾಗುತ್ತಿರುವುದರಿಂದ ಈ ಬಾರಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸಮತೋಲನದಿಂದ ಕೂಡಿದ ತಂಡವನ್ನು ಪ್ರಕಟಿಸಿದೆ.

ನವದೆಹಲಿ(ಏ.20): ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ 15 ಆಟರಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.

2009ರ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಪದೇಪದೆ ವಿಫಲವಾಗುತ್ತಿರುವುದರಿಂದ ಈ ಬಾರಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸಮತೋಲನದಿಂದ ಕೂಡಿದ ತಂಡವನ್ನು ಪ್ರಕಟಿಸಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್, ಸ್ಟೀವ್ ಸ್ಮಿತ್ ಹಾಗೂ ಕ್ರಿಸ್ ಲಿನ್ ಸ್ಥಾನಪಡೆದಿದ್ದರೆ, ಆಲ್ರೌಂಡ್ ವಿಭಾಗದಲ್ಲಿ ಮೋಯ್ಸಿಸ್ ಹೆನ್ರಿಕೇಸ್ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಇನ್ನು ಟೆಸ್ಟ್ ಹಾಗೂ ಒನ್'ಡೇ ಕ್ರಿಕೆಟ್'ನಲ್ಲಿ ವಿಕೆಟ್ ಕೀಪಿಂಗ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಮ್ಯಾಥ್ಯೂ ವೇಡ್ ಅದೇ ಪಾತ್ರವನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ನಿರ್ವಹಿಸಲಿದ್ದಾರೆ.

ಇನ್ನು ವೇಗದ ಬೌಲಿಂಗ್ ಸಾರಥ್ಯ ಮಿಚೆಲ್ ಸ್ಟಾರ್ಕ್ ಹೆಗಲೇರಿದ್ದು ಅವರಿಗೆ ಜೋಸ್ ಹ್ಯಾಜೆಲ್'ವುಡ್ ಹಾಗೂ ಪ್ಯಾಟ್ ಕಮಿನ್ಸ್ ಸಾಥ್ ನೀಡಲಿದ್ದಾರೆ. ಇವರ ಜೊತೆಗೆ 2015ರಲ್ಲಿ ಕಡೆಯ ಬಾರಿ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದ ಜೇಮ್ಸ್ ಪ್ಯಾಟಿನ್'ಸನ್, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ತುಂಬಲು ಮಾರ್ಕಸ್ ಸ್ಟೋನಿಸ್ ಹಾಗೂ  ಜಾನ್ ಹೇಸ್ಟಿಂಗ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಏಕೈಕ ಸ್ಪಿನ್ನರ್ ಆಯ್ಕೆ ಮಾಡಲಾಗಿದ್ದು, ಆ್ಯಡಂ ಜಂಪಾ 15 ಮಂದಿ ಆಟಗಾರರನ್ನೊಳಗೊಂಡ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಇವರಿಗೆ ಸ್ಪಿನ್ ವಿಭಾಗದಲ್ಲಿ ಗ್ಲೇನ್ ಮ್ಯಾಕ್ಸ್'ವೆಲ್ ಸಾಥ್ ನೀಡುವ ಸಾಧ್ಯೆತೆಯಿದೆ.

ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ ಇಂತಿದೆ:

ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್(ಉಪನಾಯಕ), ಪ್ಯಾಟ್ ಕಮ್ಮಿನ್ಸ್, ಆ್ಯರೋನ್ ಫಿಂಚ್, ಜಾನ್ ಹೇಸ್ಟಿಂಗ್ಸ್, ಜೋಸ್ ಹ್ಯಾಜಲ್'ವುಡ್, ತ್ರಾವಿಸ್ ಹೆಡ್, ಮೋಯ್ಸಿಸ್ ಹೆನ್ರಿಕೇಸ್, ಕ್ರಿಸ್ ಲಿನ್, ಗ್ಲೇನ್ ಮ್ಯಾಕ್ಸ್'ವೆಲ್, ಜೇಮ್ಸ್ ಪ್ಯಾಟಿನ್'ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್ ಮತ್ತು ಆ್ಯಡಂ ಜಂಪಾ.  

click me!