ಡೇರ್'ಡೆವಿಲ್ಸ್ ಕಿವಿಹಿಂಡಿದ ಸನ್'ರೈಸರ್ಸ್

Published : Apr 19, 2017, 06:26 PM ISTUpdated : Apr 11, 2018, 01:12 PM IST
ಡೇರ್'ಡೆವಿಲ್ಸ್ ಕಿವಿಹಿಂಡಿದ ಸನ್'ರೈಸರ್ಸ್

ಸಾರಾಂಶ

ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದ ಕೇನ್ ವಿಲಿಯಮ್ಸನ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಹೈದರಾಬಾದ್(ಏ.19): ಪ್ರಸಕ್ತ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೇನ್ ವಿಲಿಯಮ್ಸನ್ ಸನ್'ರೈಸರ್ಸ್'ಗೆ ಗೆಲುವಿನ ಉಡುಗೊರೆ ನೀಡಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್'ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಆಘಾತ ಎದುರಿಸಿತು. ತಂಡದ ಮೊತ್ತ 12ರನ್'ಗಳಿದ್ದಾಗ ನಾಯಕ ಡೇವಿಡ್ ವಾರ್ನರ್ ಕೇವಲ ನಾಲ್ಕು ರನ್'ಗಳಿಸಿ ಕ್ರಿಸ್ ಮೋರಿಸ್'ಗೆ ವಿಕೆಟ್ ಒಪ್ಪಿಸಿದರು. ನಂತರ ಎರಡನೇ ವಿಕೆಟ್'ಗೆ ಜತೆಯಾದ ಶಿಖರ್ ಧವನ್ ಹಾಗೂ ಕೇನ್ಸ್ ವಿಲಿಯಮ್ಸ್ ಭರ್ಜರಿ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಆದರಿಸಿದರು. ಇಬ್ಬರೂ ಬ್ಯಾಟ್ಸ್'ಮನ್'ಗಳೂ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರೈಸಿದರು. ಕೇನ್ ವಿಲಿಯಮ್ಸನ್ 89ರನ್ ಬಾರಿಸಿದರೆ, ಶಿಖರ್ ಧವನ್ 70ರನ್ ಸಿಡಿಸಿದರು. ಆದರೆ ಯುವರಾಜ್ ಸಿಂಗ್ ಬ್ಯಾಟಿಂಗ್'ನಲ್ಲಿ ನಿರಾಸೆ ಮೂಡಿಸಿದರು.

ಅಂತಿಮವಾಗಿ ಸನ್'ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್'ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 191 ಕಲೆಹಾಕಿತು. ಡೆಲ್ಲಿ ಡೇರ್'ಡೆವಿಲ್ಸ್ ಪರ ಕ್ರಿಸ್ ಮೋರಿಸ್ ನಾಲ್ಕು ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ಡೇರ್'ಡೆವಿಲ್ಸ್ ತಂಡಕ್ಕೂ ಆರಂಭಿಕ ಆಘಾತ ಎದುರಿಸಿತು. ಸ್ಯಾಮ್ ಬಿಲ್ಲಿಂಗ್ಸ್ 13ರನ್ ಬಾರಿಸಿ ಸಿರಾಜ್'ಗೆ ವಿಕೆಟ್ ಒಪ್ಪಿಸಿದರು. ನಂತರ ಜತೆಯಾದ ಕರುಣ್ ನಾಯರ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಅರ್ಧಶತಕದ ಜತೆಯಾಟವಾಡಿ ತಂಡಕ್ಕೆ ನೆರವಾಯಿತು. ಉತ್ತಮವಾಗಿ ಆಡುತ್ತಿದ್ದ ಕರುಣ್ ನಾಯರ್ ರನೌಟ್ ಆಗಿ ನಿರಾಸೆ ಅನುಭವಿಸಿದರೆ, ಸಂಜು ಸ್ಯಾಮ್ಸನ್ 42ರನ್ ಬಾರಿಸಿ ಸಿರಾಜ್'ಗೆ ವಿಕೆಟ್ ಒಪ್ಪಿಸಿದರು.

ನಂತರ ಆಡಲಿಳಿದ ರಿಷಭ್ ಪಂತ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಇದಾದ ಬಳಿಕ ಶ್ರೇಯಸ್ ಅಯ್ಯರ್ ಹಾಗೂ ಆ್ಯಂಜಲೋ ಮ್ಯಾಥ್ಯೂಸ್ ತಂಡಕ್ಕೆ ಗೆಲುವು ತಂದುಕೊಡಲು ಹೋರಾಡಿದರಾದರೂ ಅದು ಸಾಧ್ಯವಾಗಲಿಲ್ಲ. ಶ್ರೇಯಸ್ ಐಯ್ಯರ್ ಅರ್ಧಶತಕ ಸಿಡಿಸಿ ಅಜೇಯರಾಗುಳಿದರು.

ಸನ್'ರೈಸರ್ಸ್ ಪರ ಮೊಹ್ಮದ್ ಸಿರಾಜ್ ಎರಡು ವಿಕೆಟ್ ಪಡೆದರೆ, ಯುಜರಾಜ್ ಸಿಂಗ್ ಹಾಗೂ ಸಿದ್ದಾರ್ಥ್ ಕೌಲ್ ತಲಾ ಒಂದು ವಿಕೆಟ್ ಪಡೆದರು.

ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದ ಕೇನ್ ವಿಲಿಯಮ್ಸನ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಸನ್'ರೈಸರ್ಸ್ ಹೈದರಾಬಾದ್: 191/4

ಕೇನ್ ವಿಲಿಯಮ್ಸನ್ : 89

ಶಿಖರ್ ಧವನ್ : 70

ಕ್ರಿಸ್ ಮೋರಿಸ್: 26/4

ಡೆಲ್ಲಿ ಡೇರ್'ಡೆವಿಲ್ಸ್: 176/5

ಶ್ರೇಯಸ್ ಐಯ್ಯರ್ : 50

ಸಂಜು ಸ್ಯಾಮ್ಸನ್ : 42

ಮೊಹಮ್ಮದ್ ಸಿರಾಜ್: 39/2

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?