
ರಾಂಚಿ(ಆ.26): ಇಂಗ್ಲೆಂಡ್ ವಿರುದ್ದದ ನಿಗಧಿತ ಓವರ್ ಕ್ರಿಕೆಟ್ ಬಳಿಕ ಎಂ ಎಸ್ ವಿಶ್ರಾಂತಿಗೆ ಜಾರಿದ್ದಾರೆ. ರಾಂಚಿಯ ತಮ್ಮ ಮನೆಯಲ್ಲಿ ರಿಲಾಕ್ಯ್ ಮೂಡ್‌ನಲ್ಲಿರುವ ಧೋನಿ ಇದೀಗ ಲವ್‌ರಾತ್ರಿ ಡಿನ್ನರ್ ಆಯೋಜಿಸಿದ್ದಾರೆ.
ಧೋನಿ ಮನೆಯಲ್ಲಿ ಏನಿದು ಲವ್‌ರಾತ್ರಿ ಎಂದು ಗಾಬರಿಯಾಗಬೇಡಿ. ಇದು ಡಿನ್ನರ್ ಪಾರ್ಟಿ. ನಟ ಆಯುಷ್ ಶರ್ಮಾ ಹಾಗೂ ನಟಿ ವರಿನಾ ಹುಸೈನ್ ಜೋಡಿಯಾ ಬಹುನಿರೀಕ್ಷಿತ ಲವ್‌ರಾತ್ರಿ ಚಿತ್ರದ ಪ್ರಮೋಶನ್ ರಾಂಚಿಯಲ್ಲಿ ನಡೆಯುತ್ತಿದೆ.
ಆಯುಷ್ ಶರ್ಮಾ ಹಾಗೂ ವರಿನ್ ಹುಸೈನ್ ಕೂಡ ರಾಂಚಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ವೇಳೆ ಈ ಯುವ ನಟ-ನಟಿಯರನ್ನ ಭೇಟಿಯಾದ ಧೋನಿ, ಇವರಿಗೆ ತಮ್ಮ ಮನೆಯಲ್ಲಿ ಔತಣಕೂಟ ಆಯೋಸಿದರು. ಸುಂದರ ಔತಣಕೂಟ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಆಹ್ವಾನ ಸ್ವೀಕರಿಸಿದ ಆಯುಷ್ ಹಾಗೂ ವರಿನಾ, ಧೋನಿ ಮನೆಯಲ್ಲಿ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಲವ್‌ರಾತ್ರಿ ಚಿತ್ರವನ್ನ ವೀಕ್ಷಿಸುವಂತೆ ಧೋನಿಗೆ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ, ಧೋನಿ ಹಾಗೂ ನಟ-ನಟಿ ತಮ್ಮ ಅನುಭವಗಳನ್ನ ಹಂಚಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.