ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್’ನಲ್ಲಿ ಸೌರಭ್ ಚೌಧರಿ ಚಿನ್ನದ ಗೆಲ್ಲುವುದರೊಂದಿಗೆ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಶೂಟಿಂಗ್’ನ ಆರಂಭದ ಹಂತಗಳಲ್ಲಿ ಹಿನ್ನಡೆ ಸಾಧಿಸಿದ್ದ ಅಭಿಷೇಕ್ ವರ್ಮಾ ಕಡೆಗೂ ಕೊರಿಯಾ ಸ್ಪರ್ಧಿಯನ್ನು ಹಿಂದಿಕ್ಕಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಕಾರ್ತ[ಆ.21]: 18ನೇ ಏಷ್ಯನ್ ಗೇಮ್ಸ್’ನಲ್ಲಿ ಭಾರತದ 16 ವರ್ಷದ ಯುವ ಶೂಟರ್ ಸೌರಭ್ ಚೌಧರಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರ ಜತೆಗೆ ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್’ನಲ್ಲಿ ಸೌರಭ್ ಚೌಧರಿ ಚಿನ್ನದ ಗೆಲ್ಲುವುದರೊಂದಿಗೆ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಶೂಟಿಂಗ್’ನ ಆರಂಭದ ಹಂತಗಳಲ್ಲಿ ಹಿನ್ನಡೆ ಸಾಧಿಸಿದ್ದ ಅಭಿಷೇಕ್ ವರ್ಮಾ ಕಡೆಗೂ ಕೊರಿಯಾ ಸ್ಪರ್ಧಿಯನ್ನು ಹಿಂದಿಕ್ಕಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಪಾನಿನ ಅನುಭವಿ ಶೂಟರ್ ತೋಮೋಯೂಕಿ ಅವರನ್ನು ಹಿಂದಿಕ್ಕಿ ಚಿನ್ನ ಗೆಲ್ಲುವಲ್ಲಿ ಭಾರತದ ಪೋರ ಯಶಸ್ವಿಯಾಗಿದ್ದಾರೆ. ಸೌರಭ್ ಸಾಧನೆಯನ್ನು ಅಭಿನವ್ ಬಿಂದ್ರಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Superb show by young Saurabh !! Many many Congratulations. We must pledge support to these young athletes for a sustained period of time irrespective of results. They have the ingredients for Olympic success. Needs persistent support irrespective.
— Abhinav Bindra OLY (@Abhinav_Bindra)ಈ ಎರಡು ಪದಕಗಳೊಂದಿಗೆ ಭಾರತ 3 ಚಿನ್ನ 2 ಬೆಳ್ಳಿ ಹಾಗೂ ಎರಡು ಕಂಚು ಸೇರಿ ಒಟ್ಟು 7 ಪದಕ ಸಂಪಾದಿಸಿದೆ.