ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಲಕ್ಷಯ್ ಶೆರೋನ್ 43 ಅಂಕ ಕಲೆಹಾಕುವುದರೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಚೈನೀಸ್ ತೈಪೆಯ ಯುಂಗ್ ಕುನ್ಪೆ 48 ಅಂಕಗಳೊಂದಿಗೆ ಚಿನ್ನದ ಪದಕ ಜಯಿಸಿದರು.
ಜಕಾರ್ತ[ಆ.20]: ಏಷ್ಯನ್ ಗೇಮ್ಸ್’ನ ಶೂಟಿಂಗ್ ವಿಭಾಗದಲ್ಲಿ ಹರ್ಯಾಣದ 19 ವರ್ಷದ ಲಕ್ಷಯ್ ಶೆರೋನ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಲಕ್ಷಯ್ ಶೆರೋನ್ 43 ಅಂಕ ಕಲೆಹಾಕುವುದರೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಚೈನೀಸ್ ತೈಪೆಯ ಯುಂಗ್ ಕುನ್ಪೆ 48 ಅಂಕಗಳೊಂದಿಗೆ ಚಿನ್ನದ ಪದಕ ಜಯಿಸಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಮನ್ವಿಜಿತ್ ಸಂದು ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದರು. ಕೊನೆಯ ಕ್ಷಣದಲ್ಲಿ ತಪ್ಪುಗುರಿಯಿಟ್ಟ ಸಂದು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಮೊದಲ ದಿನ ಶೂಟಿಂಗ್’ನ ಮಿಶ್ರ ವಿಭಾಗದಲ್ಲಿ ರವಿ ಕುಮಾರ್-ಅಪೂರ್ವಿ ಚಾಂಡಿಲಾ ಜೋಡಿ ಕಂಚಿನ ಪದಕ ಜಯಿಸಿದ್ದರೆ, ಭಜರಂಗ್ ಪೂನಿಯಾ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇಂದು ಶೂಟಿಂಗ್’ನಲ್ಲಿ ದೀಪಕ್ ಕುಮಾರ್ ಹಾಗೂ ಲಕ್ಷಯ್ ಶಿರೋನ್ ಬೆಳ್ಳಿ ಪದಕಕ್ಕೆ ಶೂಟ್ ಮಾಡಿದ್ದಾರೆ.