ಐತಿಹಾಸಿಕ ಕ್ಷಣಕ್ಕೆ ಭಾಗಿಯಾಗೋ ಅವಕಾಶ ಭಾರತ ಫುಟ್ಬಾಲ್ ತಂಡಕ್ಕಿಲ್ಲ!ಯಾಕೆ?

 |  First Published Jul 6, 2018, 10:27 AM IST

ಏಷ್ಯನ್ ಗೇಮ್ಸ್ ಕ್ರೀಡಾಕೂಡದಲ್ಲಿ ಪಾಲ್ಗೊಳ್ಳೋ ಸುವರ್ಣವಕಾಶ ಭಾರತ ಫುಟ್ಬಾಲ್ ತಂಡಕ್ಕೆ ಸಿಕ್ಕಿಲ್ಲ.ಅಷ್ಟಕ್ಕೂ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಫುಟ್ಬಾಲ್ ತಂಡ ಯಾಕಿಲ್ಲ? ಇಲ್ಲಿದೆ ಉತ್ತರ.


ನವದೆಹಲಿ(ಜು.06): ಭಾರತದಲ್ಲಿ ಫುಟ್ಬಾಲ್ ತ್ವರಿತಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಸುನಿಲ್ ಚೆಟ್ರಿ ನಾಯಕತ್ವದ ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ಅಭಿಮಾನಿಗಳಲ್ಲಿ ಫುಟ್ಬಾಲ್ ಕ್ರೇಝ್ ಹೆಚ್ಚಿಸಿದ್ದಾರೆ. ಇಷ್ಟಾದರು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳೋ ಅವಕಾಶ ಭಾರತ ತಂಡಕ್ಕೆ ಸಿಕ್ಕಿಲ್ಲ.

ಇಂಡೋನೇಷ್ಯಾದಲ್ಲಿ ಆಗಸ್ಟ್‌ 18ರಿಂದ ಆರಂಭವಾಗುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಫುಟ್ಬಾಲ್‌ ತಂಡಗಳು ಸ್ಪರ್ಧಿಸುತ್ತಿಲ್ಲ. ಗುರುವಾರ ಟೂರ್ನಿಯ ಡ್ರಾ ಪ್ರಕಟಗೊಂಡಿದ್ದು, ಭಾರತ ಪುರುಷ ಹಾಗೂ ಮಹಿಳಾ ಫುಟ್ಬಾಲ್‌ ತಂಡಗಳ ಹೆಸರಿಲ್ಲ. 

Latest Videos

ಏಷ್ಯನ್‌ ಗೇಮ್ಸ್‌ಗೆ ತಂಡಗಳನ್ನು ಕಳುಹಿಸಲು ಭಾರತೀಯ ಒಲಿಂಪಿಕ್‌ ಸಂಸ್ಥೆ ನಿರಾಕರಿಸಿತ್ತು. ಈ ಸಂಬಂಧ ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ‘ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಹೊಂದಿರುವವರನ್ನು ಮಾತ್ರ ಕಳುಹಿಸಲಾಗುತ್ತದೆ. ಕೇವಲ ಸ್ಪರ್ಧಿಸುವುದಕ್ಕಾಗಿ ಕಳುಹಿಸಲು ಸಾಧ್ಯವಿಲ್ಲ’ ಎಂದು ಬಾತ್ರಾ ಹೇಳಿದ್ದಾರೆ. 
 

click me!