ಭಾರತ-ಹಾಂಕ್ ಕಾಂಗ್ ಏಷ್ಯಾಕಪ್ ಮುಖಾಮುಖಿ! ಪ್ಲೇಯಿಂಗ್-11 ಹೇಗಿದೆ?

Published : Sep 18, 2018, 02:40 PM ISTUpdated : Sep 19, 2018, 09:29 AM IST
ಭಾರತ-ಹಾಂಕ್ ಕಾಂಗ್ ಏಷ್ಯಾಕಪ್ ಮುಖಾಮುಖಿ! ಪ್ಲೇಯಿಂಗ್-11 ಹೇಗಿದೆ?

ಸಾರಾಂಶ

ಏಷ್ಯಾಕಪ್ ಟೂರ್ನಿ ನಾಲ್ಕನೇ ದಿನ ಭಾರತ ಹಾಗೂ ಹಾಂಗ್ ಕಾಂಗ್ ತಂಡ ಹೋರಾಟ ನಡೆಸಲಿದೆ. ಹಾಂಗ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಆಡೋ ಹನ್ನೊಂದರ ಬಳಗ ಹೇಗಿರುತ್ತೆ? ಇಲ್ಲಿದೆ.

ದುಬೈ(ಸೆ.18): ಏಷ್ಯಾಕಪ್ ಟೂರ್ನಿಯಲ್ಲಿಂದ ಟೀಂ ಇಂಡಿಯಾ ಕಣಕ್ಕಿಳಿಯುತ್ತಿದೆ. ಹಾಂಗ್ ಕಾಂಗ್ ವಿರುದ್ಧದ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ನೇೃತ್ವದ ಟೀಂ ಇಂಡಿಯಾ ಸಜ್ಜಾಗಿದೆ. ಭರ್ಜರಿ ಗೆಲುವಿನ ಮೂಲಕ ಪಾಕ್ ವಿರುದ್ದದ ಪಂದ್ಯಕ್ಕೆ ತಯಾರಿ ಮಾಡಿಕೊಳ್ಳಲು ಟೀಂ ಇಂಡಿಯಾ ರೆಡಿಯಾಗಿದೆ.

ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವ ಹಾಂಗ್ ಕಾಂಗ್ ತಂಡ ಇದೀಗ ಟೂರ್ನಿಯ ಮತ್ತೊಂದು ಬಲಿಷ್ಠ ತಂಡ ಭಾರತವನ್ನ ಎದುರಿಸಬೇಕಿದೆ.  ಇತ್ತ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಪ್ರತಿಷ್ಠಿತ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾ ಶುಭಾರಂಭದ ವಿಶ್ವಾಸದಲ್ಲಿದೆ.

ಹಾಂಗ್ ಕಾಂಗ್ ವಿರುದ್ಧದ ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದ ಆಡೋ ಹನ್ನೊಂದರ ಬಳಗದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ.

ಸಂಭಾವ್ಯ ತಂಡ: 
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಎಂ.ಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಯುಜುವೇಂದ್ರ ಚೆಹಾಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ