ಅಂಪೖರ್‌ಗಳ ಕೆಟ್ಟ ತೀರ್ಪು ಮತ್ತೆ ಮರುಕಳಿಸಿದ್ದು, ಆ್ಯಷಸ್ ಸರಣಿಯ ಮೊದಲ ಪಂದ್ಯದಲ್ಲೂ ಅಂಪೈರ್‌ಗಳ ವಿವಾದಾತ್ಮಕ ತೀರ್ಪುಗಳು ಚರ್ಚಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಅಂಪೈರ್‌ಗೆ ಕ್ರಿಕೆಟ್ ಅಭಿಮಾನಿಯೊಬ್ಬ ಕುರುಡನ ಪಟ್ಟ ನೀಡಿರುವ ಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬರ್ಮಿಂಗ್‌ಹ್ಯಾಮ್[ಆ.06]: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳೆ ಅಂಪೈರ್ ಗಳ ವಿವಾದಾತ್ಮಕ ತೀರ್ಪು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ್ಯಷಸ್ ಪಂದ್ಯದ ವೇಳೆ ಕೆಟ್ಟಅಂಪೈರಿಂಗ್ ಸಹ ಭಾರೀ ಚರ್ಚೆಗೆ ಕಾರಣವಾಗಿದೆ.
undefined
ಆ್ಯಷಸ್ ಕದನ: ಆಸ್ಟ್ರೇಲಿಯಾ ಜಯಭೇರಿ!
ಇತ್ತೀಚೆಗೆ ಐಸಿಸಿ ಎಲೈಟ್ ಅಂಪೈರ್‌ಗಳ ಸಮಿತಿಗೆ ಪ್ರವೇಶಿಸಿದ್ದ ವಿಂಡೀಸ್ ಅಂಪೈರ್ ಜೋಯಲ್ ವಿಲ್ಸನ್ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಮೊದಲ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ 8 ಕೆಟ್ಟ ತೀರ್ಪುಗಳನ್ನು ನೀಡಿದರು.
ಆಷ್ಯಸ್ ಸರಣಿ: 2 ವರ್ಷಗಳ ಬಳಿಕ ಇಶಾಂತ್ ಅನುಕರಣೆ ಮಾಡಿದ ಸ್ಮಿತ್!
ಇದರಿಂದ ಆಕ್ರೋಶಗೊಂಡ ಅಭಿಮಾನಿಯೊಬ್ಬ ಅವರ ವಿಕಿಪೀಡಿಯಾ ಪುಟದಲ್ಲಿ, ಜೋ ವಿಲ್ಸನ್ ‘ಅಂಧ’ ಅಂಪೈರ್ ಎಂದು ಬದಲಿಸಿದ ಪ್ರಸಂಗ ನಡೆಯಿತು. ಇದಾದ ಕೆಲ ಹೊತ್ತಿನಲ್ಲೇ ‘ಅಂಧ’[Blind] ಪದವನ್ನು ಅಳಿಸಿ ಹಾಕಲಾಯಿತು. ವಿಕಿಪೀಡಿಯಾ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಆ್ಯಷಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 251 ರನ್ ಗಳಿಂದ ಮಣಿಸುವ ಮೂಲಕ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ 2 ಇನಿಂಗ್ಸ್ ಗಳಲ್ಲಿ ಶತಕ ಸಿಡಿಸುವ ಮೂಲಕ ಆಸೀಸ್ ಗೆಲುವಿನ ರೂವಾರಿ ಎನಿಸಿದರು.