
ಮ್ಯಾಂಚೆಸ್ಟರ್(ಸೆ.04): ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಯ 4ನೇ ಟೆಸ್ಟ್, ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಬುಧವಾರದಿಂದ ಆರಂಭಗೊಳ್ಳಲಿದೆ.
ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ
ಇಂಗ್ಲೆಂಡ್‌ನಲ್ಲಿ 18 ವರ್ಷಗಳ ಬಳಿಕ ಆ್ಯಷಸ್ ಟೆಸ್ಟ್ ಸರಣಿ ಗೆಲ್ಲುವ ಗುರಿ ಹೊಂದಿರುವ ಆಸ್ಪ್ರೇಲಿಯಾಕ್ಕೆ ಸ್ಟೀವ್ ಸ್ಮಿತ್ ಸೇವೆ ಲಭ್ಯವಾಗಲಿದೆ. ಗಾಯದ ಸಮಸ್ಯೆಯಿಂದಾಗಿ ಸ್ಮಿತ್ 3ನೇ ಪಂದ್ಯದಿಂದ ಹೊರಗುಳಿದಿದ್ದರು. ಇನ್ನು ಉಸ್ಮಾನ್ ಖವಾಜ ಅವರನ್ನು ಕೈಬಿಡಲಾಗಿದೆ. ವೇಗಿ ಮಿಚೆಲ್ ಸ್ಟಾರ್ಕ್ ತಂಡ ಕೂಡಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಕ್ರಿಸ್ ವೋಕ್ಸ್ ಬದಲಿಗೆ ಕ್ರೇಗ್ ಓವರ್‌ಟನ್ ಸ್ಥಾನ ಪಡೆದಿದ್ದಾರೆ.
ಡೇನಿಸ್ ಲಿಲ್ಲಿ ದಾಖಲೆ ಅಳಿಸಿ ಹಾಕಿದ ನೇಥನ್ ಲಯನ್..!
ಮೊದಲ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ ಜಯಗಳಿಸಿತ್ತು. 2ನೇ ಪಂದ್ಯ ಡ್ರಾಗೊಂಡ ಬಳಿಕ, 3ನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಹೋರಾಟದ ನೆರವಿನಿಂದ ಇಂಗ್ಲೆಂಡ್ 1 ವಿಕೆಟ್ ರೋಚಕ ಗೆಲುವು ಸಾಧಿಸಿತ್ತು. 5 ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು, ಈ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.
ಪಂದ್ಯ ಆರಂಭ: ಮಧ್ಯಾಹ್ನ, 3.30
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.