ದುಲೀಪ್‌ ಟ್ರೋಫಿ ಫೈನಲ್‌: ಟಾಸ್ ಗೆದ್ದ ಇಂಡಿಯಾ ಗ್ರೀನ್ ಬ್ಯಾಟಿಂಗ್ ಆಯ್ಕೆ

Published : Sep 04, 2019, 11:03 AM ISTUpdated : Sep 05, 2019, 10:32 AM IST
ದುಲೀಪ್‌ ಟ್ರೋಫಿ ಫೈನಲ್‌: ಟಾಸ್ ಗೆದ್ದ ಇಂಡಿಯಾ ಗ್ರೀನ್ ಬ್ಯಾಟಿಂಗ್ ಆಯ್ಕೆ

ಸಾರಾಂಶ

ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಡಿಯಾ ಗ್ರೀನ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. 2019ನೇ ಸಾಲಿನ ದುಲಿಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಇಂಡಿಯಾ ಗ್ರೀನ್ ಹಾಗೂ ಇಂಡಿಯಾ ರೆಡ್ ತಂಡಗಳು ಪ್ರಶಸ್ತಿಗಾಗಿ ಸೆಣಸುತ್ತಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಸೆ.04]: ಭಾರತ ರೆಡ್‌ ಹಾಗೂ ಗ್ರೀನ್ ತಂಡಗಳ ನಡುವಿನ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಗ್ರೀನ್ ಬ್ಯಾಟಿಂಗ್ ಆಯ್ದುಕೊಂಡಿದೆ.

ದುಲೀಪ್‌ ಟ್ರೋಫಿ: ರೆಡ್‌-ಗ್ರೀನ್‌ ಫೈನ​ಲ್‌

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2019-20ನೇ ಸಾಲಿನ ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯ ಆರಂಭವಾಗಿದೆ. ಮೊದಲ 15 ಓವರ್ ಮುಕ್ತಾಯದ ವೇಳೆಗೆ ಇಂಡಿಯಾ ಗ್ರೀನ್ ತಂಡವು 1 ವಿಕೆಟ್ ಕಳೆದುಕೊಂಡು 50 ರನ್ ಬಾರಿಸಿದೆ. ಗ್ರೀನ್ ನಾಯಕ ಫೈಜ್ ಫಜಲ್ 12 ರನ್ ಗಳಿಸಿ ಜಯದೇವ್ ಉನಾದ್ಕತ್’ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ಆಕಾಶ್ ರೆಡ್ಡಿ 12 ಹಾಗೂ ಧೃವ್ ಶೋರೆ 21 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. 

ದುಲೀಪ್‌ ಟ್ರೋಫಿ ವೇಳೆ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್‌

ಪ್ರಿಯಾಂಕ್‌ ಪಾಂಚಾಲ್‌ ನೇತೃತ್ವದ ಭಾರತ ರೆಡ್‌ ಮೂರು ಪಂದ್ಯಗಳಿಂದ 6 ಅಂಕಗಳನ್ನು ಸಂಪಾದಿಸಿ ಫೈನಲ್‌ಗೇರಿದರೆ, ಭಾರತ ಬ್ಲೂಗಿಂತ ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದ ಕಾರಣ ಫೈಜ್‌ ಫಜಲ್‌ ನೇತೃತ್ವದ ಭಾರತ ಗ್ರೀನ್‌ ಫೈನಲ್‌ ಪ್ರವೇಶಿಸಿತು. ಫೈನಲ್‌ ಪಂದ್ಯಕ್ಕೂ ಮಳೆ ಅಡ್ಡಿಯಾ​ಗುವ ಸಾಧ್ಯತೆ ಇದೆ.

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಈ ಇಬ್ಬರು ಸ್ಟಾರ್ ಆಟಗಾರರಿಗೆ ರೆಸ್ಟ್‌!
RCB ಹಾಗೂ ಡೆಲ್ಲಿಗೆ ಅತಿದೊಡ್ಡ ಶಾಕ್‌; ಟೂರ್ನಿ ಆರಂಭಕ್ಕೆ 10 ದಿನಗಳಿರುವಾಗಲೇ ಔಟ್!