ಜಿಮ್ನಾಸ್ಟಿಕ್ಸ್ ವಿಶ್ವಕಪ್'ನಲ್ಲಿ ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳೆ

By Suvarna Web Desk  |  First Published Feb 24, 2018, 6:22 PM IST

ಅರುಣಾ ಬಿ ರೆಡ್ಡಿ ಮೂಲತಃ ಕರಾಟೆ ಪಟುವಾಗಿದ್ದು ವಿದ್ಯಾರ್ಥಿಗಳಿಗೆ ಈ ಹಿಂದೆ ಕರಾಟೆ ತರಬೇತುದಾರರಾಗಿದ್ದರು.


ನವದೆಹಲಿ(ಫೆ.24): ಭಾರತದ ಅರುಣಾ ಬಿ ರೆಡ್ಡಿ ವಿಶ್ವಕಪ್ ಜಿಮ್ನಾಸ್ಟಿಕ್ಸ್'ನಲ್ಲಿ ನೂತನ ಇತಿಹಾಸ ನಿರ್ಮಿಸಿದ್ದಾರೆ. 

ಆಸ್ಟ್ರೇಲಿಯಾದ ಮೆಲ್ಬೋರ್ನ್'ನಲ್ಲಿ ನಡೆದ ವಿಶ್ವಕಪ್ ಜಿಮ್ನಾಸ್ಟಿಕ್ಸ್ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಅರುಣಾ ರೆಡ್ಡಿ(22)  ಕಂಚಿನ ಪದಕ ಗೆದ್ದಿದ್ದಾರೆ.ಫೈನಲ್'ನಲ್ಲಿ 13.649 ಅಂಕಗಳನ್ನು ಪಡೆದರು. ಸ್ಲೋವೆನಿಯಾದ ಟಿಜಾಸಾ ಕಿಸ್ಲೆಫ್ ಹಾಗೂ ಆಸ್ಟ್ರೇಲಿಯಾದ ಎಮಿಲಿ ವೈಟ್ಹೆಡ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು.

Tap to resize

Latest Videos

ಭಾರತದ ಮತ್ತೊಬ್ಬ ಆಟಗಾರ್ತಿ ಪ್ರಣತಿ ನಾಯಕ್ 13.416 ಅಂಕ ಪಡೆಯುವುದರ ಮೂಲಕ 6ನೇ ಸ್ಥಾನ ಪಡೆದರು. ಅರುಣಾ ಬಿ ರೆಡ್ಡಿ ಮೂಲತಃ ಕರಾಟೆ ಪಟುವಾಗಿದ್ದು ವಿದ್ಯಾರ್ಥಿಗಳಿಗೆ ಈ ಹಿಂದೆ ಕರಾಟೆ ತರಬೇತುದಾರರಾಗಿದ್ದರು. 2014ರ ಕಾಮನ್'ವೆಲ್ತ್ ಕ್ರೀಡಾಕೂಟದಲ್ಲಿ 14ನೇ ಸ್ಥಾನ ಪಡೆದಿದ್ದರು. 2017ರ ಏಷ್ಯನ್ ಚಾಂಪಿಯನ್ಷಿಪ್'ನಲ್ಲಿ 6ನೇ ಸ್ಥಾನ ಪಡೆದಿದ್ದರು.

ಜಿಮ್ನಾಸ್ಟಿಕ್ಸ್ ವಿಶ್ವಕಪ್'ನಲ್ಲಿ ಪದಕ ಪಡೆದಿರುವುದು ಇದೇ ಮೊದಲು. 2010ರಲ್ಲಿ ಅಶೀಶ್ ಕುಮಾರ್ ಕಾಮನ್'ವೆಲ್ತ್'ನ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು. 2016ರ ರಿಯೋ ಒಲಿಂಪಿಕ್ಸ್'ನಲ್ಲಿ  ದೀಪಾ ಕರ್ಮಾಕರ್ ಅವರು 2016ರ ರಿಯೋ ಒಲಿಂಪಿಕ್ಸ್'ನಲ್ಲಿ 4ನೇ ಸ್ಥಾನ ಪಡೆದಿದ್ದರು

click me!