ಜೇಟ್ಲಿ ಸಹಾಯದಿಂದ ಟೀಂ ಇಂಡಿಯಾ ಪ್ರತಿನಿಧಿಸಿದೆ; ವಿರೇಂದ್ರ ಸೆಹ್ವಾಗ್

Published : Aug 24, 2019, 05:25 PM ISTUpdated : Aug 24, 2019, 05:58 PM IST
ಜೇಟ್ಲಿ ಸಹಾಯದಿಂದ ಟೀಂ ಇಂಡಿಯಾ ಪ್ರತಿನಿಧಿಸಿದೆ; ವಿರೇಂದ್ರ ಸೆಹ್ವಾಗ್

ಸಾರಾಂಶ

ಅರುಣ್ ಜೇಟ್ಲಿ ನಿಧನಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ವಿರೇಂದ್ರ ಸೆಹ್ವಾಗ್ ಸಂತಾಪ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಜೇಟ್ಲಿ ದೆಹಲಿ ಕ್ರಿಕೆಟಿಗರ ಪಾಲಿಗೆ ಹೇಗೆ ದೇವರಾಗಿದ್ದರು ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ. 

ದೆಹಲಿ(ಆ.24): ಮಾಜಿ ಹಣಕಾಸು ಸಚಿವ, ಬಿಜೆಪಿ ಟ್ರಬಲ್ ಶೂಟರ್ ಅರುಣ್ ಜೇಟ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಜೇಟ್ಲಿ ಮಾರ್ಗದರ್ಶನದಲ್ಲಿ ಹಲವು ಯುವ ರಾಜಕಾರಣಿಗಳು ಬೆಳೆದಿದಿದ್ದಾರೆ. ಜೇಟ್ಲಿ ಕಾರ್ಯವ್ಯಾಪ್ತಿ ಕೇವಲ ರಾಜಕೀಯಕ್ಕೆ ಮಾತ್ರ ಸಿಮೀತವಾಗಿರಲಿಲ್ಲ. ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿಯೂ ಅರುಣ್ ಜೇಟ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಜೇಟ್ಲಿ ಅವಧಿಯಲ್ಲಿ ಹಲವು ಯುವ ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಪೈಕಿ ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ‌ಮನ್ ವಿರೇಂದ್ರ ಸೆಹ್ವಾಗ್ ಕೂಡ ಒಬ್ಬರು.

ಇದನ್ನೂ ಓದಿ: ಇದು ವಿಧಿಯಾಟ: 66ಕ್ಕೆ ಜೀವನ ಪಯಣ ಮುಗಿಸಿದ ಜೇಟ್ಲಿ ಕಾರಿನ ನಂ ಕೂಡ 6666!

ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ ವಿರೇಂದ್ರ ಸೆಹ್ವಾಗ್, ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ನಾನು ಸೇರಿದಂತೆ ಹಲವು ಕ್ರಿಕೆಟಿಗರು ಭಾರತ ತಂಡ ಪ್ರತಿನಿಧಿಸಲು ಜೇಟ್ಲಿ ಕಾರಣ ಎಂದು ಸೆಹ್ವಾಗ್ ಹೇಳಿದ್ದಾರೆ.

 

ಅರುಣ್ ಜೇಟ್ಲಿ ನಿಧನ ಸುದ್ದಿಯಿಂದ ತುಂಬಾ ನೋವಾಗಿದೆ. ಸಾರ್ವಜನಿಕ ಜೀವನದಲ್ಲಿ ಮಾತ್ರವಲ್ಲ, ಕ್ರಿಕೆಟ್ ಕ್ಷೇತ್ರದಲ್ಲೂ ಜೇಟ್ಲಿ ಜಂಟ್ಲಮೆನ್‌ ಆಗಿದ್ದಾರೆ. ಒಂದು ಕಾಲದಲ್ಲಿ ದೆಹಲಿ ಕ್ರಿಕೆಟಿಗರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿರಲಿಲ್ಲ. ಆದರೆ ಅರುಣ್ ಜೇಟ್ಲಿ ಅಧ್ಯಕ್ಷರಾದ ಬಳಿಕ ದೆಹಲಿ ಕ್ರಿಕಟ್ ಸಂಸ್ಥೆಯ ದಿಕ್ಕು ಬದಲಾಯಿತು. ಜೇಟ್ಲಿ ನಾಯಕತ್ವದಲ್ಲಿ ನಾನು ಸೇರಿದಂತೆ ಹಲವು ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಪ್ರತಿ ಆಟಗಾರರ ಸಮಸ್ಯೆ ಆಲಿಸಿ ಪರಿಹರಿಸಿದ್ದಾರೆ. ಜೇಟ್ಲಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದೆ. ದುಖವನ್ನು ಭರಿಸುವ ಶಕ್ತಿ ಜೇಟ್ಲಿ ಕುಟುಂಬಕ್ಕೆ ನೀಡಲಿ ಎಂದು ಸೆಹ್ವಾಗ್ ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.

ಟೀಂ ಇಂಡಿಯಾ ವಿರಾಟ್ ಕೊಹ್ಲಿ ಕೂಡ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಕೊಹ್ಲಿ ತಂದೆ ಸಾವನ್ನಪ್ಪಿದಾಗ ಜೇಟ್ಲಿ ಆಗಮಿಸಿ ಸಾಂತ್ವನ ಹೇಳಿದ್ದರು ಎಂದು ಕೊಹ್ಲಿ ಜೇಟ್ಲಿಯನ್ನು ನೆನಪಿಸಿಕೊಂಡಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ಲುಕ್‌ನಲ್ಲಿ ವಿರಾಟ್ ಕೊಹ್ಲಿ, ಪಾಸ್ಟೆಲ್ ಹೇರ್‌ಸ್ಟೈಲ್‌ನಲ್ಲಿ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡ ಕ್ರಿಕೆಟರ್
ಮುಂಬೈನ ಅತ್ಯಂತ ದುಬಾರಿ ಏರಿಯಾದಲ್ಲಿ ಶ್ರೇಯಸ್ ಅಯ್ಯರ್ ಹೊಸ ಮನೆ: ತಿಂಗಳ ಬಾಡಿಗೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ