
ಮುಂಬೈ(ಮಾ.16): ಜ್ಯೂನಿಯರ್ ಕ್ರಿಕೆಟ್‌ನಿಂದ ಸೀನಿಯರ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ರೆಡಿಯಾಗಿದ್ದಾರೆ. ಮುಂಬರವ ಟಿ20 ಮುಂಬೈ ಲೀಗ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಅರ್ಜುನ್ ತೆಂಡೂಲ್ಕರ್ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಜಿಂಕ್ಯ ರಹಾನೆ - ವಿರಾಟ್ ಕೊಹ್ಲಿ ಹೇಳಿಕೆಯಲ್ಲಿ ಗೊಂದಲ!
ಕಳೆದ ವರ್ಷ ಭಾರತ ಅಂಡರ್-19 ತಂಡ ಪ್ರತಿನಿಧಿಸಿದ ಅರ್ಜುನ್ ತೆಂಡೂಲ್ಕರ್, ಶ್ರೀಲಂಕಾ ವಿರುದ್ಧ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇತ್ತೀಚೆಗೆ ಡಿವೈ ಪಾಟೀಲ್ ಟೂರ್ನಿ ಹಾಗೂ ಮುಂಬೈ ಅಂಡರ್ 23 ತಂಡದಲ್ಲೂ ಆಡಿದ್ದಾರೆ. ಇದೀಗ ಮುಂಬೈ ಟಿ20 ಲೀಗ್ ಟೂರ್ನಿ ಆಡಲು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: ಸಚಿನ್ ತೆಂಡುಲ್ಕರ್ ಶತಕಗಳ ಶತಕಕ್ಕೆ 7ರ ಸಂಭ್ರಮ
ಎಡಗೈ ವೇಗಿಯನ್ನು ಖರೀದಿಸಲು ಕೆಲ ಫ್ರಾಂಚೈಸಿಗಳು ಆಸಕ್ತಿ ತೋರಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ರೀತಿಯಲ್ಲೇ ನಡೆಯುತ್ತಿರುವ ಮುಂಬೈ ಟಿ20 ಲೀಗ್ ಟೂರ್ನಿ ಆಸಕ್ತಿ ಕೆರಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.