ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಾಜಿ ನಾಯಕ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಧೋನಿ ಇಬ್ಬರೂ ಒಂದೇ ಶಾಲೆಯಲ್ಲಿ ಕಲಿತವರು. ಅಂದು ಒಂದೇ ತರಗತಿಯಲ್ಲಿದ್ದ ಇಬ್ಬರೂ ಇದೀಗ ಟೀಂ ಇಂಡಿಯಾದಲ್ಲೂ ಜೊತೆಯಾಗಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ
ಮುಂಬೈ(ಫೆ.01): ಅನುಷ್ಕಾ ಶರ್ಮಾ ಹಾಗೂ ಸಾಕ್ಷಿ ಧೋನಿ ಇಬ್ಬರೂ ಟೀಂ ಇಂಡಿಯಾದ ಗ್ರೇಟೆಸ್ಟ್ ಕ್ರಿಕೆಟಿಗರ ಪತ್ನಿಯರು. ಇವರಿಬ್ಬರು ಕ್ರೀಡಾಂಗಣದಲ್ಲಿ, ಕಾರ್ಯಕ್ರಮ, ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇವರ ಕನೆಕ್ಷನ್ ಮದುವೆಯಾದ ಬಳಿಕವಲ್ಲ. ಬಾಲ್ಯದಿಂದಲೂ ಅನುಷ್ಕಾ ಶರ್ಮಾ ಹಾಗೂ ಸಾಕ್ಷಿ ಸಿಂಗ್ ರಾವತ್ ಆತ್ಮೀಯರಾಗಿದ್ದರು ಅನ್ನೋದು ಬಹಿರಂಗವಾಗಿದೆ.
ಇದನ್ನೂ ಓದಿ: ಕ್ರಿಕೆಟಿಗರಿಗೆ ಪರ್ಯಾಯ ಉದ್ಯೋಗ ವ್ಯವಸ್ಥೆ: ಬಿಸಿಸಿಐಗೆ ದ್ರಾವಿಡ್ ಸಲಹೆ
undefined
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂ.ಎಸ್.ಧೋನಿ ಪತ್ನಿಯರು ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ಕಲಿತಿದ್ದಾರೆ. ಇಬ್ಬರೂ ಅಸ್ಸಾಂನ ಸೈಂಟ್ ಮೇರಿ ಮಾರ್ಗರಿಟಾ ಶಾಲೆಯಲ್ಲಿ ಕಲಿತಿದ್ದಾರೆ. ಈ ಕುರಿತು ಅನುಷ್ಕಾ ಶರ್ಮಾ 2013ರಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
📷 | New/Old pictures of Anushka with and ❤️ pic.twitter.com/ecfgRMLSTg
— Anushka Sharma FC™ (@AnushkaSFanCIub)
ಇವರಿಬ್ಬರು ಶಾಲೆಯ ಫ್ಯಾನ್ಸಿ ಡ್ರೆಸ್ ಸ್ಪರ್ಧಗಾಗಿ ಅನುಷ್ಕಾ ಶರ್ಮಾ ಪಿಂಕ್ ಗಾಗ್ರ ಚೊಲಿ ಡ್ರೆಸ್ ಹಾಕಿದ್ದರೆ, ಸಾಕ್ಷಿ ರಾಣಿ ಡ್ರೆಸ್ ಹಾಕಿದ್ದರು. ಈ ಫೋಟೋ ಇದೀಗ ಲಭ್ಯವಾಗಿದೆ. ಇನ್ನು ಶಾಲೆಯ ಗ್ರೂಪ್ ಫೋಟೋ ಲಭ್ಯವಾಗಿದೆ. ಆದರೆ ಇದರಲ್ಲಿ ಅನುಷ್ಕಾ ಶರ್ಮಾ ಹಾಗೂ ಸಾಕ್ಷಿಯನ್ನ ಗುರುತಿಸುವುದು ಕಷ್ಟ.
ಇದನ್ನೂ ಓದಿ: ನೋ ಡೌಟ್: ’ಭಾರತದಲ್ಲೇ ನಡೆಯುತ್ತೆ 2023ರ ಏಕದಿನ ವಿಶ್ವಕಪ್’
ಮೊದಲು ಅನುಷ್ಕಾ ಶರ್ಮಾ ಹಾಗೂ ಸಾಕ್ಷಿ ಧೋನಿ ಭೇಟಿಯಾದಾಗ ಈ ಸತ್ಯ ಬಹಿರಂಗವಾಗಿತ್ತು. ಇಬ್ಬರೂ ಕೂಡ ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದಿದಿ ವಿಚಾರ ಬಹಿರಂಗವಾಗಿದೆ. ಕ್ರಿಕೆಟಿಗರನ್ನ ಮದುವೆಯಾಗೋ ಮೊದಲೇ ಇವರಿಬ್ಬರೂ ಸ್ಕೂಲ್ ಮೇಟ್. ಇಷ್ಟೇ ಅಲ್ಲ ಇವರಿಬ್ಬರ ಫೋಟೋಗಳು ಈ ಸತ್ಯವನ್ನ ಬಹಿರಂಗಪಡಿಸಿದೆ.