ಕ್ರಿಕೆಟ್ ಆಡಿ ಕುಬೇರರಾದ ಪ್ಲೇಯರ್ಸ್..!: ಮಾಜಿ ಹಾಲಿ ಆಟಗಾರರ ಆಸ್ತಿ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ

Published : Aug 11, 2017, 02:37 PM ISTUpdated : Apr 11, 2018, 12:57 PM IST
ಕ್ರಿಕೆಟ್ ಆಡಿ ಕುಬೇರರಾದ ಪ್ಲೇಯರ್ಸ್..!: ಮಾಜಿ ಹಾಲಿ ಆಟಗಾರರ ಆಸ್ತಿ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ

ಸಾರಾಂಶ

ನೀವು ನಿಮ್ಮ ನೆಚ್ಚಿನ ಕ್ರಿಕೆಟರ್​​​ಗಳ ಪ್ರತೀ ರೆರ್ಕಾಡ್​​'ಗಳನ್ನ, ಅವರ ವೈಯಕ್ತಿಕ ವಿಚಾರಗಳನ್ನ ತಿಳಿದೇ ಇರ್ತಿರಾ. ಆದ್ರೆ ದಶಕಗಳ ಕಾಲ ನಿಮ್ಮನ್ನು ಇನ್ನಿಲ್ಲದಂತೆ ರಂಜಿಸಿದ ಆಟಗಾರರು ಕ್ರಿಕೆಟ್​​​'ನಿಂದ ಎಷ್ಟು ವರಮಾನ ಪಡೆಯುತ್ತಿದ್ದಾರೆ ಎಂಬುದು ಗೊತ್ತಿದ್ಯಾ..? ಅದನ್ನ ತಿಳಿಯೋ ಆಸಕ್ತಿ ಇದ್ಯಾ..? ಹಾಗಾದ್ರೆ ನೀವು ಈ ಸ್ಟೋರಿಯನ್ನ ಓದಲೇಬೇಕು

ಒಂದು ಸಾರಿ ಟೀಂ ಇಂಡಿಯಾದಲ್ಲಿ ಆಡಿಬಿಟ್ರೆ ಸಾಕಪ್ಪ ದುಡ್ಡು ಎನ್ನುವ ಲಕ್ಷ್ಮಿ ಹುಡುಕಿಕೊಂಡು ಬಂದು ಕಾಲ ಕೆಳಗೆ ಬಿದ್ದುಬಿಡುತ್ತಾಳೆ ಎನ್ನುವ ಮಾತಿದೆ. ಒಂದು ಬಾರಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡರೇ ಹೀಗೆ ಇನ್ನೂ ಖಾಯಂ ಆಗಿ ರಾಷ್ಟ್ರೀಯ ತಂಡದಲ್ಲಿ ಠಿಕಾಣಿ ಹೂಡಿದ್ದ ಕೆಲ ಆಟಗಾರರ ಸ್ಥಿತಿ ಏನು? ಅಲ್ವಾ. ಕ್ರಿಕೆಟ್​ನಿಂದ ಕೆಲ ಆಟಗಾರರು ಪಡಿತಿರೋ ವರಮಾನವನ್ನು ನೀವು ತಿಳಿದುಕೊಂಡುಬಿಟ್ಟರೆ ನಿಜಕ್ಕೂ ನೀವು ದಂಗಾಗಿ ಹೋಗಿಬಿಡ್ತಿರಾ. ನಾವೂ ಕ್ರಿಕೆಟರ್ಸ್ ಆಗಬೇಕು ಅಂತ ಅಂದುಕೊಳ್ತೀರಾ.

ಶ್ರೀಮಂತ ಕ್ರಿಕೆಟರ್​ ನಂ.1 - ಸಚಿನ್​​ ತೆಂಡೂಲ್ಕರ್​​: ಕ್ರಿಕೆಟನ್ನ ಬಿಟ್ರೂ ಕ್ರಿಕೆಟ್​​'ನಿಂದ ಬರುತ್ತಿರುವ ದುಡ್ಡು ನಿಲ್ತಿಲ್ಲ..!

ಭಾರತದ ಕ್ರಿಕೆಟ್​​ ಅಂಬಾಸ್ಸಿಡರ್​​​ ಅಂತಲೇ ಬಿಂಬಿತವಾಗಿರುವ ಮಾಸ್ಟರ್​​ ಬ್ಲಾಸ್ಟರ್​​​ ಸಚಿನ್​ ತೆಂಡೂಲ್ಕರ್​​​ ಕ್ರಿಕೆಟ್​​ ರಂಗಕ್ಕೆ ನೀಡಿದ ಕೊಡುಗೆ ಅಪಾರ. ಆದ್ರೆ ಅಷ್ಟೇ ಪ್ರಮಾಣದಲ್ಲಿ ಸಚಿನ್​​ ಕ್ರಿಕೆಟ್​​ನಿಂದ ವರಮಾನ ಪಡೆಯುತ್ತಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್​​​ ತಂಡದ ಮೆಂಟರ್​​​ ಹಾಗೂ ಬಿಸಿಸಿಐನ ಸಲಹಾ ಸಮಿತಿಯಲ್ಲಿ ಕೆಲಸ ಮಾಡುತ್ತಿರುವ ಸಚಿನ್​​'ರ ಸದ್ಯದ ಆದಾಯ ಬರೋಬ್ಬರಿ 1066 ಕೋಟಿ ರೂಪಾಯಿ. ಸಚಿನ್​​ರ ಚಿರಾಸ್ತಿ 500 ಕೋಟಿ ರೂಪಾಯಿ ಇದ್ರೆ, ಅವರ ಬಳಿ ಇರುವ ಬೆಲೆಬಾಳೋ ಕಾರುಗಳ ಬೆಲೆ 20 ಕೋಟಿ. ಇನ್ನೂ ಸಚಿನ್​​ ಹಲವು ಲೀಗ್​ಗಳಲ್ಲಿ ಹಣ ಹೂಡಿಕೆ ಮಾಡಿದ್ದು ಅದರ ವರಮಾನ ಕೋಟಿ ಲೆಕ್ಕದಲ್ಲಿದೆ. 24 ಜಾಹೀರಾತು ಕಂಪನಿಗಳಿಗೆ ಅಂಬಾಸ್ಸಿಡರ್​​ ಆಗಿರುವ ಸಚಿನ್​​ 50 ಕೋಟಿ ಹಣ ಪಡೆಯುತ್ತಿದ್ದಾರೆ.

ಶ್ರೀಮಂತ ಕ್ರಿಕೆಟರ್​ ನಂ.2 - ಮಹೇಂದ್ರ ಸಿಂಗ್​​​ ಧೋನಿ: ಮಾಜಿ ನಾಯಕನಾದರೂ ವರಮಾನ ಕಮ್ಮಿಯಾಗಿಲ್ಲ

ಟೀಂ ಇಂಡಿಯಾ ಕಂಡ ಬೆಸ್ಟ್​​ ಕ್ಯಾಪ್ಟನ್​​ ಎಂ.ಎಸ್​​ ಧೋನಿಯ ಆದಾಯ ಎಷ್ಟಿದೆ ಗೊತ್ತಾ.? ದಶಕಗಳ ಕಾಲ ರಾಜನಂತೆ ಮೆರೆದ ಮಿಸ್ಟರ್​​ ಕೂಲ್​​ ಸದ್ಯದ ಆಸ್ತಿ ಪ್ರಮಾಣ 750 ಕೋಟಿ. ಸದ್ಯ IPLನಲ್ಲಿ ಪುಣೆ ಪರ ಆಡುತ್ತಿರುವ ಧೋನಿ ವರ್ಷಕ್ಕೆ 15 ಕೋಟಿ ಪಡುತ್ತಿದ್ದಾರೆ. ಇನ್ನೂ ಅವರ ಬಳಿ ಇರುವ ಕಾರು ಮತ್ತು ಬೈಕ್​ಗಳ ಮೌಲ್ಯ 25 ಕೋಟಿ. ಹಲವು ವ್ಯವಹಾರ ಹಾಗೂ ಚಿರಾಸ್ತಿಯ ಮೌಲ್ಯ 522 ಕೋಟಿ. ಧೋನಿ ಇಂಡಿಯನ್​ ಸೂಪರ್​​ ಲೀಗ್​​ ಮತ್ತು ಚೆನ್ನೈ ಎಫ್​​ ಸಿಯಲ್ಲೂ ಹಣ ಹೂಡಿಕೆ ಮಾಡಿದ್ದಾರೆ.

ಶ್ರೀಮಂತ ಕ್ರಿಕೆಟರ್​ ನಂ.3 - ವಿರಾಟ್​​ ಕೊಹ್ಲಿ: ರನ್​ ವೇಗದಂತೆ ಏರುತ್ತಿದೆ ಕೊಹ್ಲಿ ಆಸ್ತಿ ಗಳಿಕೆ

ಸದ್ಯ ಟೀಂ ಇಂಡಿಯಾದ ಲೀಡರ್​​​ ವಿರಾಟ್​​ ಕೊಹ್ಲಿ ಜಾಹೀರಾತು ಕಂಪನಿಗಳ ಹಾಟ್​​ ಫೇವರೇಟ್​​​. ಅವರ ಈಗಿನ ಒಟ್ಟು ಆಸ್ತಿ 400 ಕೋಟಿ. ಅವರ ಮುಂಬೈ ಮತ್ತು ದೆಹಲಿಯ ಕಾಸ್ಟ್ಲಿ ಫ್ಲಾಟ್​​ ಸೇರಿ ಒಟ್ಟು 85 ಕೋಟಿ ಆಸ್ತಿ ಇದೆ. ಇನ್ನೂ IPL ನಲ್ಲಿ ಸಿಗೋದು 14 ಕೋಟಿ. ಅವರ 6 ಐಷಾರಾಮಿ ಕಾರುಗಳ ಬೆಲೆ 10 ಕೋಟಿ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಇನ್ನೂ ಎರಡು ವರ್ಷಗಳಲ್ಲಿ ಆದಾಯದಲ್ಲಿ ಕ್ರಿಕೆಟ್​​ ದೇವರನ್ನೇ ಮೀರಿಸುತ್ತಾರಂತೆ. ಸಚಿನ್​ ರೆಕಾರ್ಡ್​ಗಳನ್ನ ಬ್ರೇಕ್ ಮಾಡ್ತಾರೆ ಅನ್ನೋ ಹಾಗೆ ಆಯ್ತು.

ಶ್ರೀಮಂತ ಕ್ರಿಕೆಟರ್​ ನಂ.4 - ವೀರೇಂದ್ರ ಸೆಹ್ವಾಗ್: ರನ್ ಹೊಡೆಯೋದು ನಿಲ್ಲಿಸಿದರೂ ಹಣ ಬರುವುದು ನಿಂತಿಲ್ಲ..!

ಸಚಿನ್​ ,ಧೋನಿ ಮತ್ತು ಕೊಹ್ಲಿ ನಂತರ ಕ್ರಿಕೆಟ್​​ ಆಡಿ ಕುಬೇರರಾದ 4ನೇ ಆಟಗಾರ ಅಂದ್ರೆ ಅದು ಡೆಲ್ಲಿ ಡ್ಯಾಷರ್​​ ವೀರೇಂದ್ರ ಸೆಹ್ವಾಗ್​​. ಪಂಜಾಬ್​ ಕಿಂಗ್ಸ್​​ ಇಲೆವನ್​ ತಂಡದ ಮುಖ್ಯ ಕೋಚ್​​ ಆಗಿ ಕಾರ್ಯ ನಿರ್ವಹಿಸುತ್ತಿರುವ ವೀರೂ, ಒಟ್ಟು 300 ಕೋಟಿ ಆಸ್ತಿ ಹೊಂದಿದ್ದಾರೆ. ಹರಿಯಾಣದಲ್ಲಿರುವ ತಮ್ಮ ಶಾಲೆ ಮತ್ತು ಹಲವು ಜಾಹೀರಾತು ಕಂಪನಿಗಳೊಂದಿಗಿನ ಒಪ್ಪಂದದ ಮೊತ್ತವೇ 50 ಕೋಟಿ ದಾಟುತ್ತದೆ. ಇನ್ನು ಅವರ ಚಿರಾಸ್ತಿ 150 ಕೋಟಿ ಬೆಲೆ ಹೊಂದಿದೆ.

ಶ್ರೀಮಂತ ಕ್ರಿಕೆಟರ್​ ನಂ.4 - ಯೂಸಫ್​​ ಪಠಾಣ್: ಮೈದಾನದಲ್ಲಿ ರನ್ ಬರ್ತಿಲ್ಲ.. ಆದ್ರೂ ಹಣ ಬರುತ್ತಿದೆ

ಇದು ಆಶ್ಚರ್ಯವಾದರೂ ನಿಜ. ಅಂತಾರಾಷ್ಟ್ರೀಯ ಕ್ರಿಕೆಟ್'​ನಲ್ಲಿ ಅಷ್ಟೇನೂ ಮೋಡಿ ಮಾಡದ ಯೂಸುಫ್​​ ಪಠಾಣ್​​​ ದುಡ್ಡು ಬಾಚುವುದರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಬೆರಳೆಣಿಕೆಯಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ರೂ IPLನಲ್ಲಿ ಯೂಸಫ್ ಪಠಾಣ್​​ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅವರ ಸದ್ಯದ ಆಸ್ತಿಯ ಗಳಿಕೆ 200 ಕೋಟಿ. ಕೊಲ್ಕತ್ತಾ ನೈಟ್​​ ರೈಡರ್ಸ್ ​​​ಪರ ಆಡುತ್ತಿರುವ ಯೂಸುಫ್​​​ 10 ಕೋಟಿ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಚಿರಾಸ್ತಿ 80 ಕೋಟಿ. ಇನ್ನೂ  ರೀಬೋಕ್​ ಮತ್ತು ಟಾಟಾ ಇಂಡಿಕಾಂ ಕಂಪನಿಗಳಿಗೆ ಬ್ರಾಂಡ್​​ ಅಂಬಾಸಿಡರ್​​ ಆಗಿದ್ದು ಕೋಟಿಕೋಟಿ ದುಡಿಯುತ್ತಿದ್ದಾರೆ. ಅಷ್ಟೇ ಅಲ್ಲ ಬರೋಡಾದಲ್ಲಿ ಇವರು ನಡೆಸುತ್ತಿರುವ ಕ್ರಿಕೆಟ್​​ ಕ್ಲಬ್​ ದೇಶದ ಬೆಸ್ಟ್​​ ಕ್ರಿಕೆಟ್​​ ಅಕಾಡೆಮಿ ಎಂದು ಹೆಸರು ಪಡೆದಿದೆ.

ಇವರೆಲ್ಲಾ ಕ್ರಿಕೆಟ್'​​​ನಿಂದ ಅತೀ ಹೆಚ್ಚು ಹಣ ಬಾಚಿದ ಆಟಗಾರರು. ಕ್ರಿಕೆಟ್​​ಗೆ ಇವರು ನೀಡಿದ ಸೇವೆಗಿಂತಲೂ ಕ್ರಿಕೆಟ್​​ ಇವರಿಗೆ ಹೆಚ್ಚನ್ನೇ ವಾಪಸ್​​ ನೀಡಿದೆ. ಆದ್ರೆ ಇವಱರೂ ದುಡ್ಡಿನ ಆಸೆಗಾಗಿ ಕ್ರಿಕೆಟ್​​ ಲೋಕಕ್ಕೆ ಬಂದವರಲ್ಲ. ಇದೇ ಕಾರಣಕ್ಕೆ ಇಂದು ಈ ಮಟ್ಟಕ್ಕೆ ಬೆಳದಿರೋದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!