ಪ್ರಧಾನಿ ಮೋದಿಗೆ ಪತ್ರ ಬರೆದ ಸ್ಪಿನ್ನರ್ ಯುಜುವೇಂದ್ರ ಚೆಹಾಲ್

By Web DeskFirst Published Aug 30, 2018, 12:10 PM IST
Highlights

ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚೆಹಾಲ್ ಇದೀಗ ಪ್ರಧಾನಿ ನರೇಂದ್ರ ಮೋದಿಗೆ  ಪತ್ರ ಬರೆದಿದ್ದಾರೆ. ಅಷ್ಟಕ್ಕೂ ಚೆಹಾಲ್,  ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಏನಿದೆ? ಇಲ್ಲಿದೆ ವಿವರ.

ಬೆಂಗಳೂರು(ಆ.30): ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚೆಹಾಲ್ ಸದ್ಯ ಭಾರತ ಎ ತಂಡ ಪ್ರತಿನಿಧಿಸುತ್ತಿದ್ದಾರೆ. ತಮ್ಮ ಕ್ರಿಕೆಟ್ ಸರಣಿ ನಡುವೆ ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ಧನಿ ಎತ್ತಿದ್ದಾರೆ.

ಪ್ರಾಣಿಗಳ ಮೇಲಿನ ಹಿಂಸೆಯನ್ನ ತಡೆಗಟ್ಟಲು ಕಟ್ಟು ನಿಟ್ಟಿನ ಕಾನೂನು ಅಗತ್ಯವಿದೆ ಎಂದು ಯುಜುವೇಂದ್ರ ಚೆಹಾಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. 1960 ಪ್ರಾಣಿಗಳ ದೌರ್ಜನ್ಯ ತಡೆ ಕಾಯ್ದಿ ಪ್ರಕಾರ, ಮೊದಲ ಬಾರಿ ಪ್ರಾಣಿಗಳನ್ನ ಹಿಂಸಿಸೋ ವ್ಯಕ್ತಿಗೆ 50 ರೂಪಾಯಿ ದಂಡ ವಿಧಿಸಲಾಗುತ್ತಿದೆ.

ಹಳೇ ಕಾನೂನು ಬದಲು ಪ್ರಾಣಿಗಳ ಮೇಲಿನ ಹಿಂಸೆಗೆ ಜೈಲು ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸೋ ಕಾನೂನು ಜಾರಿಗೊಳಿಸಬೇಕೆಂದು ಚೆಹಾಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ. ಚೆಹಾಲ್‌ಗೂ ಮೊದಲು ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶಿಖರ್ ಧವನ್ ಸೇರಿದಂತೆ ಹಲವು ಟೀಂ ಇಂಡಿಯಾ ಕ್ರಿಕೆಟಿಗರು ಪ್ರಾಣಿಗಳ ಹಿಂಸೆ ವಿರುದ್ಧ ಧನಿ ಎತ್ತಿದ್ದಾರೆ.
 

click me!