ಕುಂಬ್ಳೆ, ದ್ರಾವಿಡ್‌ಗಿಂತ ಗ್ರೇಟಾ ರವಿ ಶಾಸ್ತ್ರಿ?ಸಂಬಳದಲ್ಲೂ ಅನ್ಯಾಯ!

By Web DeskFirst Published Sep 10, 2019, 6:10 PM IST
Highlights

ಕೋಚಿಂಗ್‌ನಲ್ಲಿ ಅಥವಾ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆಯನ್ನು ಮೀರಿಸುವ ಕ್ರಿಕೆಟಿಗ ಅಥವಾ ಕೋಚ್ ಭಾರತ ಮಾತ್ರವಲ್ಲ ವಿಶ್ವದಲ್ಲೇ ಇಲ್ಲ. ಆದರೆ ಬಿಸಿಸಿಐಗೆ ಕುಂಬ್ಳೆ, ದ್ರಾವಿಡ್‌ಗಿಂತ  ರವಿ ಶಾಸ್ತ್ರಿಯೇ ಗ್ರೇಟ್ ಆಗಿದ್ದಾರೆ. ಹೇಗೆ ಅಂತೀರಾ? ಇಲ್ಲಿದೆ ವಿವರ.


ಮುಂಬೈ(ಸೆ.10): ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ 2ನೇ ಅವಧಿಗೆ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೋಚ್ ಶಾಸ್ತ್ರಿಗೆ ಬಿಸಿಸಿಐ ಬರೊಬ್ಬರಿ 10 ಕೋಟಿ ರೂಪಾಯಿ ವಾರ್ಷಿಕ ಸ್ಯಾಲರಿ  ನಿಗದಿಪಡಿಸಿದೆ. ಮೊದಲ ಅವಧಿಯಲ್ಲಿ 8 ಕೋಟಿ ಸಂಭಾವನೆ ಪಡೆಯುತ್ತಿದ್ದ ರವಿ ಶಾಸ್ತ್ರಿ ಇದೀಗ 10 ಕೋಟಿ ರೂಪಾಯಿ ಜೇಬಿಗಿಳಿಸಲಿದ್ದಾರೆ.  ಶಾಸ್ತಿಗೂ ಮೊದಲು ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಹಾಗೂ ಭಾರತ ಅಂಡರ್ 19 ಹಾಗೂ ಎ ತಂಡದ ಕೋಚ್ ರಾಹುಲ್ ದ್ರಾವಿಡ್‌ ಸ್ಯಾಲರಿಗಿಂತ ರವಿ ಶಾಸ್ತ್ರಿ ಸ್ಯಾಲರಿ ಒನ್ ಟು ಡಬಲ್.

ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಸ್ಯಾಲರಿ ; ಬೆಚ್ಚಿ ಬೀಳಬೇಡಿ ಸ್ಲಿಪ್ ನೋಡಿ!

ರವಿ ಶಾಸ್ತ್ರಿ ಪತಿ  ತಿಂಗಳ ಸ್ಯಾಲರಿ ಸರಿಸುಮಾರು 83 ಲಕ್ಷ ರೂಪಾಯಿ. ಶಾಸ್ತ್ರಿಗೂ ಮೊದಲು ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಆದರೆ ಕುಂಬ್ಳೆಗೆ ಬಿಸಿಸಿಐ 5.85 ಕೋಟಿ ರೂಪಾಯಿ ವಾರ್ಷಿಕ ಸ್ಯಾಲರಿ ನೀಡಿತ್ತು. ಅಂದರೆ ಕುಂಬ್ಳೆ ತಿಂಗಳ ಸಂಬಳ 48.74 ಲಕ್ಷ ರೂಪಾಯಿ.

ಇದನ್ನೂ ಓದಿ: ಉಗ್ರ ರೂಪ ತಾಳಿದ ಕೋಚ್ ಶಾಸ್ತ್ರಿ; ಟೀಂ ಇಂಡಿಯಾ ಕ್ರಿಕೆಟಿಗರಿಗ ಎದುರಾಯ್ತು ಸಂಕಷ್ಟ!

ಭಾರತ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್‌ಗೆ ವಾರ್ಷಿಕ 5.40 ಕೋಟಿ ರೂಪಾಯಿ ವೇತನ ನಿಗಧಿ ಪಡಿಸಲಾಗಿತ್ತು. ದ್ರಾವಿಡ್ ತಿಂಗಳ ಸಂಬಳ 45 ಲಕ್ಷ ರೂಪಾಯಿ. ಸದ್ಯ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. 
 

click me!