ಸ್ಟೇನ್ ಬೌನ್ಸರ್‌ಗಳಿಗೆ ನನ್ನ ಬಳಿ ಉತ್ತರವಿರ್ಲಿಲ್ಲ; ರಾಹುಲ್ ದ್ರಾವಿಡ್!

Published : Aug 09, 2019, 10:22 PM IST
ಸ್ಟೇನ್ ಬೌನ್ಸರ್‌ಗಳಿಗೆ ನನ್ನ ಬಳಿ ಉತ್ತರವಿರ್ಲಿಲ್ಲ; ರಾಹುಲ್ ದ್ರಾವಿಡ್!

ಸಾರಾಂಶ

ಸೌತ್ ಆಫ್ರಿಕಾ ಸ್ಪೀಡ್ ಸ್ಟಾರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಸ್ಟೇನ್ ದಾಳಿ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟೇನ್ ನಮ್ಮ ಕಾಲದ ಮಾಲ್ಕಮ್ ಮಾರ್ಷಲ್ ಎಂದು ದ್ರಾವಿಡ್ ಹೇಳಿದ್ದಾರೆ.

ಮುಂಬೈ(ಆ.09): ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಟೆಸ್ಟ್ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸಲು ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಸೌತ್ ಆಫ್ರಿಕಾ ಪರ 439 ವಿಕೆಟ್ ಕಬಳಿಸೋ ಮೂಲಕ ಸೌತ್ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಸಾಧಕ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವಿಶ್ವದ ಡೇಂಜರಸ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ಸ್ಟೇನ್ ಬೌಲಿಂಗ್ ದಾಳಿ ಕುರಿತು ಟೀಂ ಇಂಡಿಯಾ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ವಿವರಿಸಿದ್ದಾರೆ.

ಇದನ್ನೂ ಓದಿ: ಡೇಲ್ ಸ್ಟೇನ್-ಹಾಶೀಂ ಆಮ್ಲಾ: ಪದಾರ್ಪಣೆಯಿಂದ ನಿವೃತ್ತಿವರೆಗಿನ ಅಪರೂಪದ ಜರ್ನಿ

ವೆಸ್ಟ್ ಇಂಡೀಸ್‌ನ ದಿಗ್ಗಜ ಬೌಲರ್ ಮಾಲ್ಕಮ್ ಮಾರ್ಷಲ್ ವಿಶ್ವದ ಅತ್ಯಂತ ಶ್ರೇಷ್ಠ ಹಾಗೂ ಡೇಂಜರಸ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 1978ರಿಂದ 1991ರ ವರೆಗೆ ಮಾಲ್ಕಮ್ ಮಾರ್ಷಲ್ ದಿಗ್ಗಜ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ್ದರು. ಇದೀಗ ಡೇಲ್ ಸ್ಟೇನ್ ನಮ್ಮ ಕಾಲದ ಮಾಲ್ಕಮ್ ಮಾರ್ಷಲ್ ಎಂದು ರಾಹುಲ್ ದ್ರಾವಿಡ್ ಗುಣಗಾನ ಮಾಡಿದ್ದಾರೆ. 

ಇದನ್ನೂ ಓದಿ: ಡೇಲ್ ಸ್ಟೇನ್ ವಿದಾಯಕ್ಕೆ ಅತ್ಯದ್ಭುತವಾಗಿ ಶುಭಕೋರಿದ ABD&ಕೊಹ್ಲಿ

ಸ್ಟೇನ್ ಬೌನ್ಸರ್ ಎಸೆತವನ್ನು ನಾನು ಯಾವ ಕಾರಣಕ್ಕೂ ಟಚ್ ಮಾಡುತ್ತಿರಲಿಲ್ಲ. ಸ್ಟೇನ್ ಬೌನ್ಸರ್ ಎಸೆತದಲ್ಲಿ ರನ್ ಗಳಿಸುವ ಅಥವಾ ಡಿಫೆಂಡ್ ಮಾಡುವ ಯಾವುದೇ ನಿರ್ಧಾರ ನಾನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. ಸ್ಟೇನ್ ಕಬಳಿಸಿರುವ 439 ವಿಕೆಟ್‌ ಪೈಕಿ 192 ವಿಕೆಟ್ ಟಾಪ್ 4 ಬ್ಯಾಟ್ಸ್‌ಮನ್‌ಗಳು ಅನ್ನೋದು ವಿಶೇಷ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ಕಾಲದಲ್ಲಿ ಮನೆ ಬಾಡಿಗೆ ಕಟ್ಟಲೂ ಹಣಕ್ಕಾಗಿ ಪರದಾಡುತ್ತಿದ್ದ WWE ರೆಸ್ಲರ್ ಜಾನ್ ಸಿನಾ ಸಂಪತ್ತು ಇಷ್ಟೊಂದಾ?
Ind vs SA 3rd T20I: ಹರಿಣಗಳಿಗೆ ತಿರುಗೇಟು ನೀಡುತ್ತಾ ಟೀಂ ಇಂಡಿಯಾ?