
ನವದೆಹಲಿ(ಜ. 27): ಆಸ್ಟ್ರೇಲಿಯಾ ದೇಶದ ಕ್ರಿಕೆಟಿಗನೊಬ್ಬ ಒಂದೇ ಓವರ್'ನಲ್ಲಿ 6 ವಿಕೆಟ್ ಪಡೆದು ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ವಿಕ್ಟೋರಿಯಾದಲ್ಲಿ ನಡೆದ ಸ್ಥಳೀಯ ಟೂರ್ನಿಯೊಂದರಲ್ಲಿ ಗೋಲ್ಡನ್ ಪಾಯಿಂಟ್ ಕ್ರಿಕೆಟ್ ಕ್ಲಬ್'ನ ಅಲೆಡ್ ಕ್ಯಾರೀ ಅವರು ಈಸ್ಟ್ ಬಾಲ್ಲಾರಟ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆಯಾಗಿದೆ.
ಈ ಪಂದ್ಯದಲ್ಲಿ 29 ವರ್ಷದ ಕ್ಯಾರೀ ತಮ್ಮ ಮೊದಲ 8 ಓವರ್'ನಲ್ಲಿ ಒಂದೂ ವಿಕೆಟ್ ಪಡೆದಿರಲಿಲ್ಲ. 9ನೇ ಓವರ್'ನಲ್ಲಿ ಕ್ಯಾರೀ ಕರಾಮತ್ತು ಬಂದಿತು. ಮೊದಲ ಮೂರು ವಿಕೆಟ್'ಗಳು ಎರಡು ಕ್ಯಾಚ್ ಹಾಗೂ ಒಂದು ಎಲ್'ಬಿಡಬ್ಲ್ಯೂ ಆದವು. ಕೊನೆಯ ಮೂರು ವಿಕೆಟ್'ಗಳು ಕ್ಲೀನ್ ಬೌಲ್ಡ್. ಇವರ ಮಾರಕ ಬೌಲಿಂಗ್'ಗೆ ಸಿಲುಕಿದ ಬಾಲ್ಲಾರಟ್ ಕ್ಲಬ್ ಕೇವಲ 40 ರನ್ನಿಗೆ ಆಲೌಟ್ ಆಯಿತು.
ಈ ಅಪೂರ್ವ ದಾಖಲೆ ಕಂಡ ಪಂದ್ಯ ನಡೆದ ಸ್ಟೇಡಿಯಮ್'ನಲ್ಲಿ ಬೆರಳೆಣಿಕೆಯಷ್ಟೇ ಪ್ರೇಕ್ಷಕರಿದ್ದರು. ಯಾವುದೇ ಕ್ಯಾಮೆರಾ ಕೂಡ ರೆಕಾರ್ಡ್ ಮಾಡುತ್ತಿರಲಿಲ್ಲ. ನೋಡನೋಡುತ್ತಿದ್ದಂತೆಯೇ ಒಂದಾದ ಮೇಲೊಂದರಂತೆ ವಿಕೆಟ್'ಗಳು ಬೀಳುತ್ತಿದ್ದುದನ್ನು ಕಂಡು ಪ್ರೇಕ್ಷಕರು ಗರಬಡಿದುಹೋಗಿದ್ದರು. ಸತತ ನಾಲ್ಕು ವಿಕೆಟ್'ಗಳು ಉರುಳಿದ ಬಳಿಕ ಕೆಲ ಪ್ರೇಕ್ಷಕರು ಎಚ್ಚೆತ್ತು ಉಳಿದೆರಡು ಎಸೆತವನ್ನು ತಮ್ಮ ಮೊಬೈಲ್'ಗಳಲ್ಲಿ ರೆಕಾರ್ಡ್ ಮಾಡಿಕೊಂಡರು.
ನರದೌರ್ಬಲ್ಯಪೀಡಿತ ಆಟಗಾರನ ಕೆಚ್ಚು:
ಅಲೆಡ್ ಕ್ಯಾರೀ ಸಾಮಾನ್ಯ ಆಟಗಾರನಲ್ಲ. ಎಪಿಲೆಪ್ಸಿ, ಎಂದರೆ ನರದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ. ಆದರೆ, ಈತನ ಕ್ರಿಕೆಟ್ ಸಾಧನೆಗೆ ಇವರ ಎಪಿಲೆಪ್ಸಿ ರೋಗ ಅಡ್ಡಿಬರಲು ಬಿಡಲಿಲ್ಲ. ಆಲ್'ರೌಂಡರ್ ಆಗಿರುವ ಅಲೆಡ್ ಅವರು ಶತಕವನ್ನೂ ಭಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.