
ಬೆಂಗಳೂರು[ಸೆ.05]: ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿಗೆ ಗುಡ್ ಬೈ ಹೇಳಲಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟರ್ ಕುಕ್ ತಮ್ಮ ಸಾರ್ವಕಾಲಿಕ ಟೆಸ್ಟ್ ತಂಡವನ್ನು ಪ್ರಕಟಿಸಿದ್ದು, ಭಾರತದ ಯಾವೊಬ್ಬ ಆಟಗಾರಿನಿಗೂ ತಂಡದಲ್ಲಿ ಅವಕಾಶ ಕಲ್ಪಿಸಿಲ್ಲ. ಕುಕ್ ಕನಸಿನ ತಂಡಕ್ಕೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಗೋಚ್ ನಾಯಕರಾಗಿದ್ದಾರೆ.
ಅಲಿಸ್ಟರ್ ಕುಕ್ ಕನಸಿನ ತಂಡದಲ್ಲಿ ಆರಂಭಿಕರಾಗಿ ಮ್ಯಾಥ್ಯೂ ಹೇಡನ್ ಹಾಗೂ ಗೋಚ್ ಕಣಕ್ಕಿಳಿದರೆ, ಆ ಬಳಿಕ ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ಎಬಿ ಡಿವಿಲಿಯರ್ಸ್, ಕುಮಾರ ಸಂಗಕ್ಕರ ಹಾಗೂ ಜಾಕ್ ಕಾಲೀಸ್ ಕಣಕ್ಕಿಳಿಯಲಿದ್ದಾರೆ.
ಇನ್ನು ಬೌಲಿಂಗ್’ನಲ್ಲಿ ಸ್ಪಿನ್ ವಿಭಾಗದಲ್ಲಿ ಮುತ್ತಯ್ಯ ಮುರುಳೀಧರನ್ ಹಾಗೂ ಶೇನ್ ವಾರ್ನ್ ಸ್ಥಾನ ಪಡೆದಿದ್ದರೆ, ವೇಗದ ಬೌಲಿಂಗ್’ನಲ್ಲಿ ಗ್ಲೇನ್ ಮೆಗ್ರಾತ್ ಹಾಗೂ ಜೇಮ್ಸ್ ಆ್ಯಂಡರ್’ಸನ್ ಸ್ಥಾನ ಪಡೆದಿದ್ದಾರೆ.
ಇದನ್ನು ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಲಿಸ್ಟೈರ್ ಕುಕ್
ಇಂಗ್ಲೆಂಡ್ ಕ್ರಿಕೆಟ್ ತಂಡ ಜಗತ್ತಿಗೆ ಪರಿಚಯಿಸಿದ ಅಪರೂಪದ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಅಲಿಸ್ಟರ್ ಕುಕ್ ಇಂಗ್ಲೆಂಡ್ ಪರ ಗರಿಷ್ಠ ರನ್[12,254 ರನ್] ಕಲೆಹಾಕಿದ ಸಾಧನೆ ಮಾಡಿದ್ದಾರೆ. ಇದರಲ್ಲಿ 32 ಶತಕಗಳು ಸೇರಿವೆ. 33 ವರ್ಷದ ಕುಕ್ ಸತತ 159 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ವಿಶಿಷ್ಠ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಇದನ್ನು ಓದಿ: ತೆಂಡೂಲ್ಕರ್ ದಾಖಲೆ ಪುಡಿಮಾಡಲು ಬಂದು ಅರ್ಧಕ್ಕೆ ಆಟ ನಿಲ್ಲಿಸಿದ ಕುಕ್
ಆದರೆ 2018ರಲ್ಲಿ ಕುಕ್ ಕೇವಲ 18.92ರ ಸರಾಸರಿಯಲ್ಲಿ ರನ್ ಕಲೆಹಾಕುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲೂ ಕುಕ್ ನೀರಸ ಪ್ರದರ್ಶನ ಮುಂದುವರೆದಿದ್ದು, ಭಾರತ ವಿರುದ್ಧ ಇದೇ 07ರಿಂದ ಓವಲ್’ನಲ್ಲಿ ಆರಂಭವಾಗಲಿರುವ 5ನೇ ಟೆಸ್ಟ್ ಪಂದ್ಯ ಕುಕ್ ಪಾಲಿಗೆ ವಿದಾಯದ ಪಂದ್ಯವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.