
ಚೆನ್ನೈ(ಡಿ.16): ಇಂಗ್ಲೆಂಡ್ ತಂಡದ ನಾಯಕ ಅಲಿಸ್ಟರ್ ಕುಕ್ ಟೆಸ್ಟ್ ಕ್ರಿಕೆಟ್'ನಲ್ಲಿ 11 ಸಾವಿರ ರನ್ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಭಾರತ ವಿರುದ್ಧ ಚನ್ನೈನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಕುಕ್ ಈ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಕುಕ್(31 ವರ್ಷ 257ದಿನ) 11 ಸಾವಿರ ರನ್ ಬಾರಿಸಲು ಕೇವಲ ಎರಡು ರನ್'ಗಳ ಅವಶ್ಯಕತೆಯಿತ್ತು.
ಈ ಮೊದಲು ಕುಕ್ 139 ಟೆಸ್ಟ್ ಪಂದ್ಯಗಳಲ್ಲಿ 46.60 ಸರಾಸರಿಯಂತೆ 10,998ರನ್ ಕಲೆಹಾಕಿದ್ದರು.
ಪ್ರಸಕ್ತ ಸರಣಿಯಲ್ಲಿ ಅಷ್ಟೇನು ಉತ್ತಮ ಫಾರ್ಮ್'ನಲ್ಲಿಲ್ಲದ ಆಂಗ್ಲರ ಪಡೆಯ ನಾಯಕ ಎಂಟು ಇನಿಂಗ್ಸ್'ನಲ್ಲಿ 310 ರನ್'ಗಳನ್ನಷ್ಟೇ ಕಲೆಹಾಕಿದ್ದಾರೆ. ಅಲ್ಲದೇ ಉಪಖಂಡದಲ್ಲಿನ ಸರಣಿ ಸೋಲಿನ ಬಳಿಕ ಕುಕ್ ನಾಯಕತ್ವ ತ್ಯಜಿಸುವಂತೆಯೂ ಒತ್ತಡಗಳು ಮೂಡಿಬರುತ್ತಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.