
ತವರಿನಲ್ಲಿ ಅಜೇಯ ಕೋಟೆಯನ್ನು ನಿರ್ಮಿಸಿಕೊಂಡಿದ್ದ ಭಾರತ ಟೆಸ್ಟ್ ತಂಡಕ್ಕೆ ಸತತ ಎರಡು ಸರಣಿ ಸೋಲುಗಳು ಭಾರಿ ಆಘಾತ ನೀಡಿವೆ. ನ್ಯೂಜಿಲೆಂಡ್ ವಿರುದ್ಧ 3-0 ಅಂತರದ ಶರಣಾಗತಿಯಿಂದಾಗಿ ಭಾರತದಲ್ಲಿ ಸತತ 12 ವರ್ಷಗಳ ಕಾಲ ಕಾಯ್ದುಕೊಂಡಿದ್ದ ಅಜೇಯ ಸರಣಿ ಜಯದ ದಾಖಲೆ ಅಂತ್ಯವಾಯಿತು. ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧವೂ 2-0 ಅಂತರದ ವೈಟ್‌ವಾಶ್ ಎದುರಾಯಿತು. ಇಂಗ್ಲೆಂಡ್ ವಿರುದ್ಧದ 2-2 ಸರಣಿ ಡ್ರಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ 2-0 ಸರಣಿ ಗೆಲುವಿನ ಮೂಲಕ ಭರವಸೆ ಮೂಡಿಸಿದ್ದ ಟೀಮ್ ಇಂಡಿಯಾ ಗೆಲುವಿನ ಓಟಕ್ಕೆ ಈ ಸೋಲುಗಳು ದೊಡ್ಡ ಹಿನ್ನಡೆ ತಂದೊಡ್ಡಿವೆ.
ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಜಿಂಕ್ಯ ರಹಾನೆ, ಈ ಪ್ಯಾಟರ್ನ್ ಆಟಕ್ಕೆ ಅನುಭವಿ ಆಟಗಾರರ ಉಪಸ್ಥಿತಿ ಅಗತ್ಯ. ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ತೊಂದರೆ ಅನುಭವಿಸಬಹುದು ಎಂದು ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಇನ್ನೂ 7-8 ಹಿರಿಯ ಆಟಗಾರರು ಮತ್ತು 2-3 ಕಿರಿಯ ಆಟಗಾರರು ಬೇಕು ಎಂದು ನಾನು ಭಾವಿಸುತ್ತೇನೆ. ನಾವು ಈಗ ನೋಡುತ್ತಿರುವುದು ಎಲ್ಲಾ ಆಟಗಾರರು ವಾಸ್ತವವಾಗಿ ಹೊಸಬರು. ಯಾವುದೇ ಹಿರಿಯ ಕ್ರಿಕೆಟಿಗ ಉಳಿದಿಲ್ಲ. ಆದ್ದರಿಂದ, ಟೆಸ್ಟ್ ಕ್ರಿಕೆಟ್‌ಗೆ ಅನುಭವಿಗಳಿಗೆ ಅಗತ್ಯತೆ ಇದೆ ಎಂದು ರಹಾನೆ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಹೇಳಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ಚೇತೇಶ್ವರ ಪೂಜಾರ ಸೇರಿದಂತೆ ಹಲವಾರು ಹಿರಿಯ ಭಾರತೀಯ ಟೆಸ್ಟ್ ಕ್ರಿಕೆಟಿಗರ ನಿವೃತ್ತಿಯನ್ನು ರೆಹಾನೆ ಪರೋಕ್ಷವಾಗಿ ಹೇಳಿದ್ದಂತೆ ಇತ್ತು.
ಸ್ಪಷ್ಟವಾಗಿ ಹೇಳಬೇಕೆಂದರೆ, ನನಗೆ ಭಯವಿದೆ (ಟೆಸ್ಟ್ ಕ್ರಿಕೆಟ್ ಬಗ್ಗೆ ಭಯ). ಏಕೆಂದರೆ ಅದು ಇಂದು ನಡೆಯುತ್ತಿರುವ ರೀತಿಯಲ್ಲಿ, ನಾವೆಲ್ಲರೂ ಟೆಸ್ಟ್ ಕ್ರಿಕೆಟ್ ಉಳಿಯಬೇಕೆಂದು ಬಯಸುತ್ತೇವೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ - ಈ 4-5 ತಂಡಗಳು ನಿಜವಾಗಿಯೂ ಉತ್ತಮವಾಗಿವೆ. ನಾನು ನೋಡಿದ ಪ್ರಕಾರ, ವಿಶೇಷವಾಗಿ ಕಳೆದ 2-3 ವರ್ಷಗಳಲ್ಲಿ, ಹಿರಿಯ ಆಟಗಾರರನ್ನು, ವಿಶೇಷವಾಗಿ ಭಾರತೀಯ ತಂಡದಿದಂದ ಎಲ್ಲ ಹಿರಿಯ ಆಟಗಾರರು ಒಂದೇ ಬಾರಿಗೆ ಒಟ್ಟಿಗೆ ಹೋಗುವುದನ್ನು ಉಳಿಸಿಕೊಳ್ಳಬೇಕು ಅದು ಸಮಸ್ಯೆಯಾಗಿದೆ ಎಂದು ರಹಾನೆ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾನು ಟೆಸ್ಟ್ ಪಂದ್ಯಗಳನ್ನು ಆಡದೆ ಮನೆಯಲ್ಲೇ ಕುಳಿತಿದ್ದು, ಭಾರತದಲ್ಲೂ ನಮ್ಮ ತಂಡ ಸೋಲುವುದನ್ನು ನೋಡುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್‌ಗೆ ದೃಢ ವ್ಯಕ್ತಿತ್ವ, ಮಾನಸಿಕ ಶಕ್ತಿ ಮತ್ತು ಸ್ಪರ್ಧಾತ್ಮಕ ಮನೋಭಾವ ಅತ್ಯಗತ್ಯ. ಮೈದಾನದಲ್ಲಿ ಕಠಿಣ ಪರಿಸ್ಥಿತಿಗಳನ್ನು (ಸೆಷನ್‌ಗಳನ್ನು) ಎದುರಿಸಿ ಆಡುವುದು ಬಹಳ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ತಂಡದಲ್ಲೂ ಸವಾಲಿನ ಸೆಷನ್‌ಗಳನ್ನು ಆತುರವಿಲ್ಲದೆ ಎದುರಿಸುವ ತಾಳ್ಮೆ ಮತ್ತು ಮನೋಭಾವ ಕಾಣಿಸುತ್ತಿಲ್ಲ ಎಂದು ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ಪ್ರದರ್ಶನ ಕುಸಿತದ ನಂತರ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಒತ್ತಡಕ್ಕೆ ಸಿಲುಕಿದ್ದಾರೆ. ಅಲ್ಲದೇ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ಬಲಿಷ್ಠ ತಂಡಗಳಲ್ಲಿ ಒಂದಾಗಿ ಮುಂದುವರೆದಿದೆ. ಕಳೆದ ಎರಡು ಐಸಿಸಿ ಪ್ರಶಸ್ತಿ, 2025 ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್, 2025 ರಲ್ಲಿ ಏಷ್ಯಾ ಕಪ್ ಗೆದ್ದಿದೆ. ಗಂಭೀರ್ ಅವರ ತರಬೇತಿ ಶೈಲಿಯ ಬಗ್ಗೆ ತನಗೆ ಪರಿಚಯವಿಲ್ಲ ಎಂದು ರಹಾನೆ ಹೇಳಿದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸು ಕಾಣಬೇಕಾದರೆ ಪ್ರಭಲ ಇಚ್ಛಾಶಕ್ತಿ ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.
ನಾನು ಗಂಭೀರ್ ಅವರೊಂದಿಗೆ ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಆಡಿದ್ದೇನೆ. ಆದರೆ ಅವರು ತರಬೇತುದಾರರಾಗಿದ್ದ (ಕೋಚ್) ಸಮಯದಲ್ಲಿ ನಾನು ಕೆಕೆಆರ್ ತಂಡದಲ್ಲಾಗಲಿ ಅಥವಾ ಭಾರತ ತಂಡದಲ್ಲಾಗಲಿ ಅವರ ಅಡಿಯಲ್ಲಿ ಆಡಿರಲಿಲ್ಲ. ಟೆಸ್ಟ್ ಕ್ರಿಕೆಟ್ ಎಂದರೆ ಪ್ರತಿಯೊಂದು 'ಸೆಷನ್' ಅನ್ನು ತಾಳ್ಮೆಯಿಂದ ಆಡುವುದು, ಎದುರಾಳಿ ತಂಡಕ್ಕೆ ಸೂಕ್ತ ಗೌರವ ನೀಡುವುದು ಮತ್ತು ಕಠಿಣ ಸವಾಲುಗಳನ್ನು ಕ್ರೀಸ್‌ನಲ್ಲಿ ನಿಂತು ಧೈರ್ಯವಾಗಿ ಎದುರಿಸುವುದು ಎಂಬುದು ನನ್ನ ಭಾವನೆ" ಎಂದು ಅಜಿಂಕ್ಯ ರಹಾನೆ ಸ್ಪಷ್ಟಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.