
ರಾಜ್‌ಕೋಟ್(ಅ.05): ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದ ರವೀಂದ್ರ ಜಡೇಜಾ ಫೀಲ್ಡಿಂಗ್‌ನಲ್ಲೂ ಮಿಂಚಿದ್ದಾರೆ. ಶಿಮ್ರೋನ್ ಹಿಟ್ಮೆಯರ್‌ಗೆ ಚಮಕ್ ನೀಡಿದ ಜಡೇಜಾ ವಿಶಿಷ್ಠ ರೀತಿಯಲ್ಲಿ ರನೌಟ್ ಮಾಡಿ ಗಮನಸೆಳೆದರು.
ರವೀಂದ್ರ ಜಡೇಜಾ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಭಾರತ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ವಿಂಡೀಸ್ ತಂಡಕ್ಕೆ ಭಾರತೀಯ ಬೌಲರ್‌ಗಳ ಜೊತೆಗೆ ಜಡೇಜಾ ಕೂಡ ಶಾಕ್ ನೀಡಿದರು. 10 ರನ್ ಸಿಡಿಸಿ ವಿಂಡೀಸ್ ತಂಡಕ್ಕೆ ಆಸರೆಯಾಗೋ ಸೂಚನೆ ನೀಡಿದ್ದ ಶಿಮ್ರೋನ್‌ಗೆ ಜಡೇಜಾ ಗೇಟ್ ಪಾಸ್ ನೀಡಿದರು.
ಅಶ್ವಿನ್ ಎಸೆತದಲ್ಲಿ ಮಿಡ್ ಆನ್ ನತ್ತ ಬ್ಯಾಟ್ ಬೀಸಿದ ಶಿಮ್ರೊನ್, ರನ್‌ಗಾಗಿ ನಾನ್ ಸ್ಟ್ರೈಕರ್ ಮುಖ ನೋಡಿದ್ದರು. ಅಷ್ಟರಲ್ಲೇ ಸುನಿಲ್ ಅಂಬ್ರಿಸ್ ಬ್ಯಾಟಿಂಗ್ ಎಂಡ್‌ನತ್ತ ಧಾವಿಸಿದ್ದರು. ಚೆಂಡು ಪಡೆದ ರವೀಂದ್ರ ಜಡೇಜಾ ಥ್ರೋ ಎಸೆದಯದೇ ನೇರವಾಗಿ ರನೌಟ್ ಮಾಡಲು ಧಾವಿಸಿದರು. ಇನ್ನೇನು ಬ್ಯಾಟ್ಸ್‌ಮನ್ ಕ್ರೀಸ್ ತಲುಪಬೇಕು ಅನ್ನುವಷ್ಟರಲ್ಲಿ ಜಡೇಜಾ ರನೌಟ್ ಮಾಡಿ ಚಮಕ್ ನೀಡಿದರು.
ರವೀಂದ್ರ ಜಡೇಜಾ ರನೌಟ್ ಶೈಲಿ ಆರ್ ಅಶ್ವಿನ್ ಹಾಗೂ ನಾಯಕ ವಿರಾಟ್ ಕೊಹ್ಲಿಗೆ ಅಚ್ಚರಿಯಾಗಿತ್ತು. ಇಷ್ಟೇ ಅಲ್ಲ ಬಾಲ್ ಥ್ರೋ ಎಸೆಯದಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಆದರೆ ತಕ್ಕ ಸಮಯದಲ್ಲಿ ರನೌಟ್ ಮಾಡಿದ್ದರಿಂದ ಜಡೇಜಾ ಬಚಾವ್ ಆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.